ದಿಶಾ ಪಟಾನಿಯ ತಂಟೆಗೆ ಬಂದವರ ಮೈ ಮೂಳೆ ಮುರಿಯೋದು ಗ್ಯಾರಂಟಿ; ಈ​ ವಿಡಿಯೋ ನೋಡಿ

Disha Patani: ದಿಶಾ ಪಟಾನಿ ಹಂಚಿಕೊಂಡ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 60 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 9 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ.

ದಿಶಾ ಪಟಾನಿಯ ತಂಟೆಗೆ ಬಂದವರ ಮೈ ಮೂಳೆ ಮುರಿಯೋದು ಗ್ಯಾರಂಟಿ; ಈ​ ವಿಡಿಯೋ ನೋಡಿ
ದಿಶಾ ಪಟಾನಿ
Follow us
TV9 Web
| Updated By: ಮದನ್​ ಕುಮಾರ್​

Updated on:May 23, 2022 | 8:05 AM

ಖ್ಯಾತ ನಟಿ ದಿಶಾ ಪಟಾನಿ (Disha Patani) ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇದೆ. ಸ್ಟಾರ್​ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನು ಫಿಟ್ನೆಸ್​  (Fitness) ವಿಚಾರದಲ್ಲೂ ಅವರು ಫೇಮಸ್​. ಎಷ್ಟೇ ಬ್ಯುಸಿ ಇದ್ದರೂ ಅವರು ಜಿಮ್​ನಲ್ಲಿ ವರ್ಕೌಟ್​ ಮಾಡುವುದನ್ನು ತಪ್ಪಿಸುವುದಿಲ್ಲ. ಅದೇ ರೀತಿ ಡಯೆಟ್​ ಬಗ್ಗೆಯೂ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅವರು ಬಿ-ಟೌನ್​ ಸೆಲೆಬ್ರಿಟಿಗಳ​ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ದಿಶಾ ಪಟಾನಿ ಅವರು ಸೋಶಿಯಲ್​ ಮಿಡಿಯಾದಲ್ಲಿ ಒಂದು ವಿಡಿಯೋ (Viral Video) ಹಂಚಿಕೊಂಡಿದ್ದಾರೆ. ಅದು ಸಖತ್​ ವೈರಲ್​ ಆಗುತ್ತಿದೆ. ಫಿಟ್ನೆಸ್​ ಕುರಿತಾಗಿ ದಿಶಾ ಪಟಾನಿ ಆಗಾಗ ಕೆಲವು ವಿಡಿಯೋ ಶೇರ್​ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಹಂಚಿಕೊಂಡಿರುವುದು ಸ್ವಲ್ಪ ರಗಡ್​ ಆಗಿದೆ. ತಮ್ಮನ್ನು ಕೆಣಕಲು ಬಂದ ಪೋಲಿ ಹುಡುಗರಿಗೆ ಅವರು ತಕ್ಕ ಪಾಠ ಕಲಿಸಿದ್ದಾರೆ. ಇದೆಲ್ಲವೂ ಮನರಂಜನೆ ಸಲುವಾಗಿ ಅವರು ಮಾಡಿದ್ದಾದರೂ ತುಂಬ ಮಸ್ತ್​ ಆಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ವಿಡಿಯೋದಲ್ಲಿ ಏನಿದೆ? ಎಂದಿನಂತೆ ದಿಶಾ ಪಟಾನಿ ಜಿಮ್​ಗೆ ಎಂಟ್ರಿ ನೀಡುತ್ತಾರೆ. ಆಗ ಒಬ್ಬ ಹುಡುಗ ಬಂದು ಅವರನ್ನು ಕೆಣಕುತ್ತಾನೆ. ಅಷ್ಟೇ ಅಲ್ಲ, ತೀರಾ ಹತ್ತಿರಕ್ಕೆ ಬಂದು ದಿಶಾ ಪಟಾನಿ ಅವರನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಆಗ ಅವನನ್ನು ತಡೆಯುತ್ತಾರೆ ದಿಶಾ. ಇದರಿಂದ ಸಿಟ್ಟಾದ ಆ ಯುವಕ, ಹೊಡೆದಾಟಕ್ಕೆ ಮುಂದಾಗುತ್ತಾನೆ. ಆತ ದಿಶಾ ಪಟಾನಿ ಅವರು ತಮ್ಮ ಅಸಲಿ ರೂಪ ತೋರಿಸುತ್ತಾರೆ. ತಮ್ಮ ಮೇಲೆ ಕೈ ಮಾಡಲು ಬಂದ ಹುಡುಗನ ಮೈ ಮೂಳೆ ಮುರಿಯುವ ರೀತಿಯಲ್ಲಿ ಫೈಟ್​ ಮಾಡುತ್ತಾರೆ. ಹೊಡೆದು ಆತನನ್ನು ನೆಲಕ್ಕುರುಳಿಸಿ ಅಲ್ಲಿಂದ ಹೊರಟು ಹೋಗುತ್ತಾರೆ.

ಇದನ್ನೂ ಓದಿ
Image
ದಿಶಾ ಪಟಾನಿ ಬೋಲ್ಡ್​ ಫೋಟೋಗಳು; ಬೀಚ್​ನಲ್ಲಿ ಬಿಂದಾಸ್​ ಆಗಿ ಪೋಸ್​ ನೀಡಿದ ಬಾಲಿವುಡ್​ ಚೆಲುವೆ
Image
ದಿಶಾ ಪಟಾನಿ ಸ್ಥಿತಿ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು; ಇಲ್ಲಿವೆ ಫನ್ನಿ ಫೋಟೋಗಳು
Image
ಅತಿ ಹಾಟ್​ ಫೋಟೋ ಹಂಚಿಕೊಂಡ ದಿಶಾ ಪಟಾನಿ; ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ ಕಮೆಂಟ್​ ಏನು?
Image
ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

ಇದನ್ನೂ ಓದಿ: ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

ಸಖತ್​ ವೈರಲ್​ ಆಗಿದೆ ವಿಡಿಯೋ: ದಿಶಾ ಪಟಾನಿ ಅವರು ನಟನೆ ಜೊತೆಗೆ ಜೊತೆಗೆ ಮಾರ್ಷಲ್​ ಆರ್ಟ್​ ಕೂಡ ಕಲಿತಿದ್ದಾರೆ. ತಮ್ಮ ತಾಕತ್ತು ಏನು ಎಂಬುದನ್ನು ಈ ವಿಡಿಯೋದಲ್ಲಿ ಅವರು ತೋರಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 60 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 9 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. ಸಾವಿರಾರು ಕಮೆಂಟ್​ಗಳ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

(ದಿಶಾ ಪಟಾನಿ ಹಂಚಿಕೊಂಡ ವಿಡಿಯೋ ಇಲ್ಲಿದೆ)

2015ರಲ್ಲಿ ತೆಲುಗಿನ ‘ಲೋಫರ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ದಿಶಾ ಪಟಾನಿ ಕಾಲಿಟ್ಟರು. ನಂತರ ಅವರು ನಟಿಸಿದ ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಸೂಪರ್ ಹಿಟ್​ ಆಯಿತು. ಆ ಬಳಿಕ ಅವರು ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದರು. ಈಗ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ.

ಇನ್​ಸ್ಟಾಗ್ರಾಮ್​ನಲ್ಲಿ ದಿಶಾ ಪಟಾನಿ ಅವರನ್ನು 5 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹಲವು ಬಗೆಯ​ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು, ನಟ ಟೈಗರ್​ ಶ್ರಾಫ್​ ಜೊತೆಗಿನ ಪ್ರೇಮ್​ ಕಹಾನಿಯ ಕಾರಣಕ್ಕೂ ದಿಶಾ ಆಗಾಗ ಸುದ್ದಿ ಆಗುತ್ತಾರೆ. ಆದರೆ ತಮ್ಮ ಪ್ರೀತಿ-ಪ್ರೇಮದ ಬಗ್ಗೆ ಅವರು ಈವರೆಗೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:05 am, Mon, 23 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ