Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು

Dhaakad Box office Collection: ಗಲ್ಲಾಪೆಟ್ಟಿಗೆಯಲ್ಲಿ ‘ಧಾಕಡ್​’ ಸಿನಿಮಾ ಅಕ್ಷರಶಃ ಡಿಸಾಸ್ಟರ್​ ಆಗಿದೆ. ಕಂಗನಾ ರಣಾವತ್​ ಅವರಿಗೆ ತೀವ್ರ ಮುಖಭಂಗ ಆಗಿದೆ.

Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು
ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on:May 22, 2022 | 1:00 PM

ನಟಿ ಕಂಗನಾ ರಣಾವತ್​ (Kangana Ranaut) ಅವರು ಸಿನಿಮಾ ಮಾಡಿದ್ದಕ್ಕಿಂತ ವಿವಾದ ಮಾಡಿದಕೊಂಡಿದ್ದೇ ಹೆಚ್ಚು. ತಮ್ಮನ್ನು ತಾವು ಲೇಡಿ ಸೂಪರ್​ ಸ್ಟಾರ್​ ಎಂಬಂತೆ ಬಿಂಬಿಸಿಕೊಂಡು, ಬಾಲಿವುಡ್​ನ ಇತರೆ ಸ್ಟಾರ್​ ಹೀರೋಗಳ ಬಗ್ಗೆ ಟೀಕೆ ಮಾಡುತ್ತಿದ್ದ ಅವರು ಈಗ ಹೀನಾಯವಾಗಿ ಸೋತಿದ್ದಾರೆ. ಕಂಗನಾ ರಣಾವತ್​ ನಟಿಸಿರುವ ‘ಧಾಕಡ್​’ ಸಿನಿಮಾ (Dhaakad Movie) ಮೇ 20ರಂದು ತೆರೆಕಂಡಿತು. ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಉತ್ತಮ ಗುಣಮಟ್ಟದ ಮೇಕಿಂಗ್​, ಭಾರಿ ಪ್ರಚಾರ ಹಾಗೂ ಕಂಗನಾ ಅವರ ಇಮೇಜ್​ನಿಂದಾಗಿ ಈ ಚಿತ್ರ ಸೂಪರ್ ಹಿಟ್​ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸಿನಿಮಾ ಹೀನಾಯವಾಗಿ ಸೋತಿದೆ. ‘ಧಾಕಡ್​’ ಸಿನಿಮಾ ಮೇಲೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರು ಕೈ ಸುಟ್ಟುಕೊಂಡಿದಾರೆ. ಗಲ್ಲಾಪೆಟ್ಟಿಗೆಯಲ್ಲಿ ಆಗುತ್ತಿರುವ ಚಿಲ್ಲರೆ ಕಲೆಕ್ಷನ್ (Box Office Collection)​ ಕಂಡು ಅವರು ಕಂಗಾಲಾಗಿದ್ದಾರೆ. ಮೊದಲ ದಿನ ಕಂಗನಾ ರಣಾವತ್​ ಸಿನಿಮಾ ನಿರೀಕ್ಷಿತ ಮಟ್ಟದ ಓಪನಿಂಗ್​ ಪಡೆದುಕೊಳ್ಳಲಿಲ್ಲ. ಕನಿಷ್ಠ ಪಕ್ಷ ವೀಕೆಂಡ್​ನಲ್ಲಾದರೂ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬಹುದು ಎಂದುಕೊಂಡರೆ ಆ ಭರವಸೆ ಕೂಡ ಸುಳ್ಳಾಗಿದೆ.

ಬಿಗ್​ ಬಜೆಟ್​ ಸಿನಿಮಾ ಹೀನಾಯವಾಗಿ ಸೋತರೆ ಅದನ್ನು ಡಿಸಾಸ್ಟರ್​ ಅಂತ ಹೇಳಲಾಗುತ್ತದೆ. ಅದು ‘ಧಾಕಡ್​’ ಚಿತ್ರದ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ವಿಶ್ವಾದ್ಯಂತ ರಿಲೀಸ್​ ಆದ ಈ ಸಿನಿಮಾ ಮೊದಲ ದಿನ (ಮೇ 20) ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿ. ಎರಡನೇ ದಿನವಾದ ಶನಿವಾರವಾದರೂ ಕಲೆಕ್ಷನ್​ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಅಂದು ಕೂಡ ಬರೀ 50 ಲಕ್ಷ ರೂಪಾಯಿ ಗಳಿಸುವಲ್ಲಿಗೆ ಈ ಚಿತ್ರ ಸುಸ್ತು ಹೊಡೆದಿದೆ. ಅಲ್ಲಿಗೆ ಎಲ್ಲ ಭರವಸೆಗಳು ಕಮರಿಹೋಗಿವೆ.

ಇದನ್ನೂ ಓದಿ: ‘ಧಾಕಡ್​’ ರಿಲೀಸ್​ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್​

ಇದನ್ನೂ ಓದಿ
Image
ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್​ಗೆ ಮೂಡಿತು ಅನುಮಾನ
Image
ಬಾಲಿವುಡ್​ನ ಯಾರೊಬ್ಬರಿಗೂ ನನ್ನ ಮನೆಗೆ ಬರುವ ಅರ್ಹತೆ ಇಲ್ಲ; ಕಂಗನಾ ನೇರ ನುಡಿ
Image
‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​
Image
Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?

ಕಂಗನಾ ರಣಾವತ್​ ಸೇರಿದಂತೆ ಎಲ್ಲ ಕಲಾವಿದರ ಸಂಭಾವನೆಗೆ ನಿರ್ಮಾಪಕರು ಬಹುಕೋಟಿ ರೂಪಾಯಿ ಸುರಿದಿದ್ದಾರೆ. ಅನೇಕ ವಿದೇಶಿ ತಂತ್ರಜ್ಞರನ್ನು ಕರೆಸಿ ಕೆಲಸ ಮಾಡಿಸಲಾಗಿದ್ದು, ಅವರಿಗೂ ದೊಡ್ಡ ಮೊತ್ತದ ಸಂಬಳ ನೀಡಲಾಗಿದೆ. ಅದರ ಜೊತೆಗೆ ಶೂಟಿಂಗ್​ ಮತ್ತು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಸಿಕ್ಕಾಪಟ್ಟೆ ಖರ್ಚಾಗಿದೆ. ಒಬ್ಬ ಸ್ಟಾರ್​ ನಟನ ಆ್ಯಕ್ಷನ್​ ಸಿನಿಮಾಗೆ ಹಾಕುವಷ್ಟೇ ಹಣವನ್ನು ‘ಧಾಕಡ್​’ ಚಿತ್ರಕ್ಕೂ ಸುರಿಯಲಾಗಿದೆ. ಪ್ರಚಾರದ ಖರ್ಚು ಕೂಡ ಸೇರಿದರೆ ಇದರ ಬಜೆಟ್​ 100 ಕೋಟಿ ರೂಪಾಯಿ ಮುಟ್ಟಬಹುದು. ಆದರೆ ಈ ಸಿನಿಮಾ 2 ದಿನಕ್ಕೆ ಗಳಿಸಿರುವುದು ಕೇವಲ 1 ಕೋಟಿ ರೂಪಾಯಿ ಮಾತ್ರ. ಡಿಸಾಸ್ಟರ್​ ಎಂಬ ಪದಕ್ಕೆ ಸೂಕ್ತ ಉದಾಹರಣೆಯಾಗಿ ಈ ಚಿತ್ರ ಜನರ ಕಣ್ಣೆದುರಿಗಿದೆ.

ಇದನ್ನೂ ಓದಿ: ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ಎದುರು ಹಿಂದಿ ಚಿತ್ರರಂಗ ಮಂಕಾಗಿದೆ. ‘ಧಾಕಡ್​’ ಚಿತ್ರದಿಂದ ಬಾಲಿವುಡ್​ ಬಿಸ್ನೆಸ್​ ಚೇತರಿಸಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ. ‘ಧಾಕಡ್​’ ಬದಲಿಗೆ ಜನರು ‘ಭೂಲ್ ಭುಲಯ್ಯ 2’ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಕಾರ್ತಿಕ್​ ಆರ್ಯನ್​ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಈ ಚಿತ್ರದಲ್ಲಿ ಹಾರರ್​ ಕಾಮಿಡಿ ಅಂಶವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ‘ಭೂಲ್ ಭುಲಯ್ಯ 2’ ಸಿನಿಮಾ 14.11 ಕೋಟಿ ರೂಪಾಯಿ ಗಳಿಸಿತು. 2ನೇ ದಿನ 18.34 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:00 pm, Sun, 22 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ