ಬಾಲಿವುಡ್​ನ ಯಾರೊಬ್ಬರಿಗೂ ನನ್ನ ಮನೆಗೆ ಬರುವ ಅರ್ಹತೆ ಇಲ್ಲ; ಕಂಗನಾ ನೇರ ನುಡಿ

ಕಂಗನಾ ರಣಾವತ್ ಸದ್ಯ ‘ಧಾಕಡ್​’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನ ಅನೇಕ ಸಿನಿಮಾಗಳು ಸೋಲು ಕಾಣುತ್ತಿವೆ. ಈ ಸಂದರ್ಭದಲ್ಲಿ ಅವರು ಈ ಚಿತ್ರದ ಮೂಲಕ ಗೆಲುವು ಕಾಣುವ ತವಕದಲ್ಲಿದ್ದಾರೆ.

ಬಾಲಿವುಡ್​ನ ಯಾರೊಬ್ಬರಿಗೂ ನನ್ನ ಮನೆಗೆ ಬರುವ ಅರ್ಹತೆ ಇಲ್ಲ; ಕಂಗನಾ ನೇರ ನುಡಿ
ಕಂಗನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 17, 2022 | 2:49 PM

ಕಂಗನಾ ರಣಾವತ್​ಗೂ (Kangana Ranaut) ಕಾಂಟ್ರವರ್ಸಿಗೂ ಎಲ್ಲಿಲ್ಲದ ನಂಟು. ಅವರು ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್​ನಲ್ಲೇ ಇದ್ದರೂ ಬಾಲಿವುಡ್​ನ (Bollywood) ಬಹುತೇಕರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಹಾಗಂದ ಮಾತ್ರಕ್ಕೆ ಅವರು ಮುಖವಾಡ ಹಾಕಿಕೊಂಡು ತಿರುಗಾಡುವುದಿಲ್ಲ. ಸತ್ಯ ಅದೆಷ್ಟೇ ಕಹಿ ಇದ್ದರೂ ಮುಖಕ್ಕೆ ಹೊಡೆದಂತೆ ಹೇಳಿ ಬರುತ್ತಾರೆ. ಈಗ ಕಂಗನಾ ಬಾಲಿವುಡ್​ ವಿಚಾರವಾಗಿ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ತಮಗೆ ಯಾರೂ ಗೆಳೆಯರಿಲ್ಲ ಎಂಬುದನ್ನು ಓಪನ್ ಆಗಿಯೇ ಹೇಳಿದ್ದಾರೆ.

ಕಂಗನಾ ರಣಾವತ್ ಸದ್ಯ ‘ಧಾಕಡ್​’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅರ್ಜುನ್​ ರಾಮ್​ಪಾಲ್​ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಬಾಲಿವುಡ್​ನ ಅನೇಕ ಸಿನಿಮಾಗಳು ಸೋಲು ಕಾಣುತ್ತಿವೆ. ಈ ಸಂದರ್ಭದಲ್ಲಿ ಅವರು ಈ ಚಿತ್ರದ ಮೂಲಕ ಗೆಲುವು ಕಾಣುವ ತವಕದಲ್ಲಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಕಂಗನಾ ನಾನಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ‘ಬಾಲಿವುಡ್​ನಲ್ಲಿ ನನಗಾಗಿ ಯಾರೂ ಇಲ್ಲ’ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ಕಂಗನಾ ಸಂದರ್ಶನ ನೀಡಿದ್ದಾರೆ. ‘ಬಾಲಿವುಡ್​ನ ಮೂವರನ್ನು ಮನೆಗೆ ಊಟಕ್ಕೆ ಕರೆಯುವುದಾದರೆ ಅವರು ಯಾರ್ಯಾರು’ ಎಂದು ಕಂಗನಾಗೆ ಕೇಳಲಾಯಿತು. ಇದಕ್ಕೆ ಕಂಗನಾ ಒಂದು ಕ್ಷಣವೂ ಯೋಚಿಸದೆ ಉತ್ತರ ನೀಡಿದ್ದಾರೆ. ‘ಇದಕ್ಕೆ ಬಾಲಿವುಡ್​ನ ಯಾರೊಬ್ಬರೂ ಅರ್ಹರಲ್ಲ. ಮನೆಯಿಂದ ಹೊರಗೆ ಅವರನ್ನು ಭೇಟಿ ಆಗುವುದು ಓಕೆ. ಆದರೆ, ಮನೆಗೆ ಆಮಂತ್ರಿಸಲು ಯಾರೂ ಅರ್ಹರಲ್ಲ’ ಎಂದಿದ್ದಾರೆ ಕಂಗನಾ.

ಇದನ್ನೂ ಓದಿ
Image
ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು
Image
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?
Image
Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?
Image
‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

‘ಬಾಲಿವುಡ್​ನಲ್ಲಿ ನಿಮ್ಮ ಪ್ರೀತಿ ಪಾತ್ರರು ಯಾರು’ ಎಂದು ಪ್ರಶ್ನಿಸಲಾಯಿತು. ಇದಕ್ಕೂ ಕಂಗನಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ‘ಬಾಲಿವುಡ್​ನಲ್ಲಿ ನನ್ನ ಜತೆ ಗೆಳೆತನ ಬೆಳೆಸಲು ಯಾರಿಗೂ ಯೋಗ್ಯತೆ ಇಲ್ಲ. ಹಾಗೆ ಗೆಳೆತನ ಬೆಳೆಸಬೇಕು ಎಂದರೆ ಅದಕ್ಕೆ ಅರ್ಹತೆ ಬೇಕು’ ಎಂದಿದ್ದಾರೆ ಅವರು.

‘ಧಾಕಡ್​​’ ಸಿನಿಮಾದಲ್ಲಿ ಸ್ಪೈ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕಂಡರೆ ಕಂಗನಾಗೆ ಅಷ್ಟಕ್ಕಷ್ಟೇ. ಹಾಗಿದ್ದರೂ ಸಲ್ಮಾನ್ ಅಚ್ಚರಿ ಎಂಬಂತೆ ‘ಧಾಕಡ್’ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದರಿಂದ ಕಂಗನಾ ಸಖತ್ ಖುಷಿಯಾಗಿದ್ದರು. ಈ ಸಿನಿಮಾ ಮೇ 20ರಂದು ತೆರೆಗೆ ಬರುತ್ತಿದೆ. ಸಿನಿಮಾ ತೆರೆಗೆ ಬರುವುದಕ್ಕೂ ಮೊದಲು ಕಂಗನಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ