ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?
ಕಂಗನಾ ರಣಾವತ್

Kangana Ranaut: ಕಂಗನಾ ರಣಾವತ್​ ಅವರದ್ದು ಕೊಂಚ ಸಿಡುಕಿನ ವ್ಯಕ್ತಿತ್ವ ಎಂಬುದು ಗೊತ್ತಿರುವ ವಿಚಾರ. ಆದರೆ ಅದಕ್ಕೂ ಮಿಗಿಲಾಗಿ ಕೆಲವು ಗಾಸಿಪ್​ಗಳು ಅವರ ಬದುಕಿನ ಬಗ್ಗೆ ಹಬ್ಬಿವೆ.

TV9kannada Web Team

| Edited By: Madan Kumar

May 12, 2022 | 8:14 AM

ಖ್ಯಾತ ನಟಿ ಕಂಗನಾ ರಣಾವತ್ (Kangana Ranaut)​ ಅವರಿಗೆ ಈಗ 35 ವರ್ಷ ವಯಸ್ಸು. ಬಾಲಿವುಡ್​ನಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರಿಗೆ ಅಲ್ಲಿನ ಆಳ-ಅಗಲ ಚೆನ್ನಾಗಿ ತಿಳಿದಿದೆ. ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅನೇಕ ಏಳು-ಬೀಳುಗಳನ್ನು ಕೂಡ ಕಂಡಿದ್ದಾರೆ. ಅವರಂತೆಯೇ ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿರುವ ಬೇರೆ ನಟಿಯರು ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಕಂಗನಾ ರಣಾವತ್​ ಅವರು ಇನ್ನೂ ಮದುವೆ (Kangana Ranaut Marriage) ಬಗ್ಗೆ ಆಲೋಚನೆ ಮಾಡಿಲ್ಲ. ಅವರು ಯಾಕೆ ಇನ್ನೂ ವಿವಾಹ ಆಗಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕಂಗನಾ ರಣಾವತ್​ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಅವರು ನಟಿಸಿರುವ ‘ಧಾಕಡ್​’ ಸಿನಿಮಾ (Dhaakad Movie) ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರ ಖಾಸಗಿ ಬದುಕಿನ ಬಗ್ಗೆಯೂ ಕೆಲವು ಪ್ರಶ್ನೆಗಳು ಎದುರಾಗಿವೆ. ಅವುಗಳಿಗೆ ಕಂಗನಾ ರಣಾವತ್​ ಉತ್ತರಿಸಿದ್ದಾರೆ.

ಮೇ 20ರಂದು ‘ಧಾಕಡ್​’ ಸಿನಿಮಾ ರಿಲೀಸ್​ ಆಗಲಿದೆ. ಈಗಾಗಲೇ ಟ್ರೇಲರ್​ ಮೂಲಕ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಏಜೆಂಟ್​ ಅಗ್ನಿ ಎಂಬ ಸ್ಪೈ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲೂ ಅವರು ನಟಿಸಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಕಂಗನಾ ಅವರದ್ದು ಕೊಂಚ ಸಿಡುಕಿನ ವ್ಯಕ್ತಿತ್ವ ಎಂಬುದು ಗೊತ್ತಿರುವ ವಿಚಾರ. ಆದರೆ ಅದಕ್ಕೂ ಮಿಗಿಲಾಗಿ ಕೆಲವು ಗಾಸಿಪ್​ಗಳು ಕಂಗನಾ ಬದುಕಿನ ಬಗ್ಗೆ ಹಬ್ಬಿವೆ. ಅದೇ ಕಾರಣದಿಂದಾಗಿ ತಾವು ಮದುವೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

‘ಈ ಸಿನಿಮಾದ ಪಾತ್ರದ ರೀತಿಯೇ ನಿಮ್ಮ ರಿಯಲ್​ ಲೈಫ್​ ವ್ಯಕ್ತಿತ್ವ ಕೂಡ ಇದೆಯೇ’ ಎಂದು ಕೇಳಿದ ಪ್ರಶ್ನೆಗೆ ಕಂಗನಾ ಈ ರೀತಿ ಉತ್ತರಿಸಿದ್ದಾರೆ. ‘ಹಾಗೆಲ್ಲ ಏನಿಲ್ಲ. ನಾನು ನಿಜ ಜೀವನದಲ್ಲಿ ಯಾರಿಗೆ ಹೊಡೆಯುತ್ತೇನೆ? ನಿಮ್ಮಂಥವರು ಈ ರೀತಿ ಗಾಸಿಪ್​ ಹಬ್ಬಿಸಿದ್ದಕ್ಕಾಗಿಯೇ ನನಗೆ ಇನ್ನೂ ಮದುವೆ ಆಗಿಲ್ಲ. ನಾನು ಹುಡುಗರಿಗೆ ಹೊಡೆಯುತ್ತೇನೆ ಎಂದೆಲ್ಲ ಗಾಸಿಪ್​ ಹಬ್ಬಿಸಲಾಗಿದೆ’ ಎಂದು ಕಂಗನಾ ಹೇಳಿದ್ದಾರೆ.

‘ಧಾಕಡ್​’ ಸಿನಿಮಾದಲ್ಲಿ ಅರ್ಜುನ್​ ರಾಮ್​ಪಾಲ್​ ಕೂಡ ನಟಿಸಿದ್ದಾರೆ. ಅವರು ಕಂಗನಾ ಬಗ್ಗೆ ಮಾತನಾಡಿದ್ದಾರೆ. ‘ರಿಯಲ್​ ಲೈಫ್​ನಲ್ಲಿ ಕಂಗನಾ ಆ ರೀತಿ ಇಲ್ಲ. ಅವರು ಅತ್ಯುತ್ತಮ ನಟಿ. ಎಲ್ಲವನ್ನೂ ಮಾಡುವುದು ಪಾತ್ರಕ್ಕಾಗಿ ಮಾತ್ರ. ಅವರು ತುಂಬ ಒಳ್ಳೆಯ ವ್ಯಕ್ತಿ. ದೇವರ ಬಗ್ಗೆ ಭಯ-ಭಕ್ತಿ ಇಟ್ಟುಕೊಂಡಿದ್ದಾರೆ. ಪ್ರತಿ ದಿನ ಪೂಜೆ, ಯೋಗ ಮಾಡುತ್ತಾರೆ. ಅವರದ್ದು ತುಂಬ ನಾರ್ಮಲ್​ ವ್ಯಕ್ತಿತ್ವ’ ಎಂದು ಅರ್ಜುನ್​ ರಾಮ್​ಪಾಲ್​ ಹೇಳಿದ್ದಾರೆ.

ನಟಿಯಾಗಿ ಮಾತ್ರವಲ್ಲದೇ ನಿರೂಪಕಿ ಆಗಿಯೂ ಕಂಗನಾ ಯಶಸ್ವಿ ಆಗಿದ್ದಾರೆ. ಅವರು ನಡೆಸಿಕೊಡುತ್ತಿದ್ದ ‘ಲಾಕಪ್​’ ಶೋ ಯಶಸ್ವಿಯಾಗಿ ಮುಕ್ತಾಯ ಆಗಿದೆ. ಈ ಮೂಲಕ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಧಾಕಡ್’ ಸಿನಿಮಾ ಮೇಲೆ ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಎದುರು ಅನೇಕ ಬಾಲಿವುಡ್​ ಸಿನಿಮಾಗಳು ನೆಲಕಚ್ಚಿವೆ. ಈಗ ‘ಧಾಕಡ್​’ ಯಾವ ರೀತಿ ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada