AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಹುಡುಗ ಕೆಟ್ಟದಾಗಿ ಮುಟ್ಟುತ್ತಿದ್ದ, ನಮ್ಮ ಬಟ್ಟೆ ಕಳಚುತ್ತಿದ್ದ’; ಭಯಾನಕ ಅನುಭವ ಬಿಚ್ಚಿಟ್ಟ ಕಂಗನಾ ರಣಾವತ್

ಕಂಗನಾ ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. 11ನೇ ವಯಸ್ಸಿಗೆ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಚಾರ ಕೇಳಿ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಆ ಹುಡುಗ ಕೆಟ್ಟದಾಗಿ ಮುಟ್ಟುತ್ತಿದ್ದ, ನಮ್ಮ ಬಟ್ಟೆ ಕಳಚುತ್ತಿದ್ದ’; ಭಯಾನಕ ಅನುಭವ ಬಿಚ್ಚಿಟ್ಟ ಕಂಗನಾ ರಣಾವತ್
ಕಂಗನಾ
TV9 Web
| Edited By: |

Updated on: Apr 25, 2022 | 1:45 PM

Share

ನಟಿ ಕಂಗನಾ ರಣಾವತ್ (Kangana Ranaut) ಬಾಲಿವುಡ್​ನ ಬೇಡಿಕೆಯ ನಟಿ. ಅವರು ತುಂಬಾನೇ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ನಟನೆಯ ಜತೆಗೆ ಕಿರುತೆರೆಯ ನಿರೂಪಣೆಯಲ್ಲೂ ಅವರು ತೊಡಗಿಕೊಂಡಿದ್ದಾರೆ. ‘ಲಾಕಪ್​’ ರಿಯಾಲಿಟಿ ಶೋ (Lock Upp Reality Show) ನಿರೂಪಣೆಗೆ ಕಂಗನಾ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಈ ಶೋ 56 ದಿನಗಳನ್ನು ಪೂರ್ಣಗೊಳಿಸಿದ್ದು, ಶೋ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ರಿಯಾಲಿಟಿ ಶೋನಲ್ಲಿ ಅನೇಕ ವಿಚಾರಗಳು ಬಹಿರಂಗಗೊಂಡಿವೆ. ಕಂಗನಾ ಕೂಡ ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. 11ನೇ ವಯಸ್ಸಿಗೆ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಚಾರ ಕೇಳಿ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲಾಕಪ್​ ಶೋನ ಸ್ಪರ್ಧಿ ಮನ್ವರ್ ಫರೂಕಿ ಅವರು ತಮ್ಮ ಜೀವನದಲ್ಲಾದ ಒಂದು ಕಹಿ ಘಟನೆಯನ್ನು ನೆನೆದರು. ‘ನಾನು ಆರು ವರ್ಷದ ಬಾಲಕನಾಗಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆ. ನನ್ನ ಸಂಬಂಧಿಕರೇ ನನಗೆ ಈ ರೀತಿ ಮಾಡಿದ್ದರು. ನನಗೆ ಆಗ ಏನೂ ಅರ್ಥವಾಗುತ್ತಿರಲಿಲ್ಲ. 3-4 ವರ್ಷ ಹೀಗೆ ನಡೆದೇ ಇತ್ತು. ಒಮ್ಮೆ ಅದು ವಿಪರೀತವಾಯಿತು. ನಾನು ಅವರನ್ನು ಎದುರಿಸಿದೆ. ಇದನ್ನು ನಿಲ್ಲಿಸಬೇಕು ಎಂದು ಅವರು ಅರಿತುಕೊಂಡರು’ ಎಂದಿದ್ದಾರೆ ಮನ್ವರ್.

ಈ ಅನುಭವವನ್ನು ಹೇಳಿಕೊಂಡಿದ್ದಕ್ಕೆ ಕಂಗನಾ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ತಮಗಾದ ಅನುಭವದ ಬಗ್ಗೆ ಅವರು ಹೇಳಿಕೊಂಡರು. ‘ಪ್ರತಿ ವರ್ಷ ಹಲವಾರು ಮಕ್ಕಳು ಈ ರೀತಿಯ ಕಿರುಕುಳಕ್ಕೆ ಒಳಗಾಗುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನೂ ಇದನ್ನು ಎದುರಿಸಿದ್ದೇನೆ. ನಾನು ಚಿಕ್ಕವನಾಗಿದ್ದೆ. ನಮ್ಮ ಊರಿನ ಒಬ್ಬ ಹುಡುಗ ನನ್ನನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸುತ್ತಿದ್ದ. ನನ್ನನ್ನು ಮುಟ್ಟುತ್ತಿದ್ದ ಬಾಲಕ ನನಗಿಂತ ಮೂರರಿಂದ ನಾಲ್ಕು ವರ್ಷ ದೊಡ್ಡವನಾಗಿದ್ದ. ಅವನು ಲೈಂಗಿಕ ಆಸಕ್ತನಾಗಿದ್ದ ಅನಿಸುತ್ತದೆ. ನಮ್ಮನ್ನು ಕರೆದು ಬಟ್ಟೆ ಬಿಚ್ಚಿಸಿ, ತಪಾಸಣೆ ಮಾಡುತ್ತಿದ್ದ. ಆ ಸಮಯದಲ್ಲಿ ಇದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ನಿಮ್ಮ ಕುಟುಂಬವು ಎಷ್ಟೇ ಎಚ್ಚರಿಕೆ ತೆಗೆದುಕೊಳ್ಳುತ್ತದೆ ಎಂದರೂ ಈ ರೀತಿಯ ಅನುಭವ ಆಗುತ್ತದೆ’ ಎಂದಿದ್ದಾರೆ ಕಂಗನಾ.

‘ಈ ರೀತಿಯ ಘಟನೆ ನಡೆದಾಗ ಮಕ್ಕಳು ತಾವು ತಪ್ಪಿತಸ್ಥರೆಂದು ಭಾವಿಸುತ್ತಾರೆ. ಇದು ನಮ್ಮ ಸಮಾಜದ ಮಕ್ಕಳಲ್ಲಿ ಇರುವ ದೊಡ್ಡ ಸಮಸ್ಯೆ. ಈ ರೀತಿಯ ಘಟನೆಗಳಿಂದ ಮಕ್ಕಳು ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ಅವರಿಗೆ ಹೇಳಿದರೆ ಸಾಕಾಗುವುದಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ

ಯಶ್ ಅವರನ್ನು ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್​ ಬಚ್ಚನ್​ಗೆ ಹೋಲಿಸಿದ ಕಂಗನಾ ರಣಾವತ್

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು