‘ಸೆಟ್​ನಲ್ಲಿ ಇಟ್ಟಿಗೆ ಎಸೆದರೂ ನಾನು ದೀಪಿಕಾಗೆ ಕಿಸ್ ಮಾಡುತ್ತಲೇ ಇದ್ದೆ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣವೀರ್

‘ಸೆಟ್​ನಲ್ಲಿ ಇಟ್ಟಿಗೆ ಎಸೆದರೂ ನಾನು ದೀಪಿಕಾಗೆ ಕಿಸ್ ಮಾಡುತ್ತಲೇ ಇದ್ದೆ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣವೀರ್
ರಣವೀರ್-ದೀಪಿಕಾ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರದ್ದು ಹಿಟ್ ಜೋಡಿ. ಮದುವೆಗೂ ಮೊದಲು ಮೂರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ‘ಗೋಲಿಯೋಂಕಿ ರಾಸ್​ಲೀಲಾ ರಾಮ್​ ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಸಿನಿಮಾಗಳಲ್ಲಿ ಈ ಜೋಡಿ ನಟಿಸಿದೆ.

TV9kannada Web Team

| Edited By: Rajesh Duggumane

May 11, 2022 | 1:37 PM

ಕೆಲ ದೃಶ್ಯಗಳನ್ನು ಶೂಟ್ ಮಾಡುವಾಗ ಕಲಾವಿದರು ಅದರೊಳಗೆ ಮುಳುಗಿ ಹೋಗುತ್ತಾರೆ. ಸಿಟ್ಟು ಮಾಡಿಕೊಳ್ಳುವ ದೃಶ್ಯ ಇದ್ದರೆ ಅದನ್ನು ಕಲಾವಿದರು ಜೀವಿಸುತ್ತಾರೆ. ಈ ಕಾರಣಕ್ಕೆ ಸೆಟ್​​ನಲ್ಲಿ ಅವರು ನಿಜಕ್ಕೂ ಕೋಪಗೊಂಡ ರೀತಿಯಲ್ಲಿ ಕಾಣುತ್ತಾರೆ. ರಣವೀರ್ ಸಿಂಗ್ ಅವರು (Ranaveer Singh) ಇದೇ ರೀತಿಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ದೀಪಿಕಾ (Deepika Padukone) ಜತೆ ಕಿಸ್​ ಮಾಡುವ ದೃಶ್ಯವಿತ್ತು. ಈ ದೃಶ್ಯದ ವೇಳೆ ನಡೆದ ಫನ್ನಿ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರದ್ದು ಹಿಟ್ ಜೋಡಿ. ಮದುವೆಗೂ ಮೊದಲು ಮೂರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ‘ಗೋಲಿಯೋಂಕಿ ರಾಸ್​ಲೀಲಾ ರಾಮ್​ ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಸಿನಿಮಾಗಳಲ್ಲಿ ಈ ಜೋಡಿ ನಟಿಸಿದೆ. ಮೊದಲ ಸಿನಿಮಾ ‘ರಾಮ್​ ಲೀಲಾ’ ವೇಳೆ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಅದರ ತೀವ್ರತೆ ಶೂಟಿಂಗ್ ಸಂದರ್ಭದಲ್ಲಿ ಕಾಣಿಸಿತ್ತು. ಈ ವಿಚಾರವನ್ನು ರಣವೀರ್ ಈಗ ಬಿಚ್ಚಿಟ್ಟಿದ್ದಾರೆ.

ರಣವೀರ್ ಸಿಂಗ್ ಅವರು ‘ಜಯೇಶ್​ಭಾಯ್ ಜೋರ್ದಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶಾಲಿನಿ ಪಾಂಡೆ ಈ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಮೇ 13ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ ರಣವೀರ್ ಈ ವಿಚಾರ ಬಿಚ್ಚಿಟ್ಟಿದ್ದಾರೆ.

‘ರಾಮ್​ ಲೀಲಾ’ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳಿವೆ. ಬೆಡ್​ ಮೇಲೆ ಮಲಗಿ ರಣವೀರ್ ಹಾಗೂ ದೀಪಿಕಾ ಕಿಸ್ ಮಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿಯಬೇಕಿತ್ತು. ಈ ದೃಶ್ಯವನ್ನು ರಣವೀರ್ ವಿವರಿಸಿದ್ದಾರೆ. ‘ನಾನು ದೀಪಿಕಾ ಕಿಸ್ ಮಾಡುತ್ತಾ ಇದ್ದೆವು. ಶಾಟ್ ಓಕೆ ಆಯಿತು. ಈ ವೇಳೆ ಕಿಟಕಿ ಗಾಜಿಗೆ ಯಾರೋ ಇಟ್ಟಿಗೆ ಎಸೆದಿದ್ದರು. ಕಿಟಕಿ ಒಡೆದು ಹೋಯಿತು. ಆದಾಗ್ಯೂ ನಾವು ಕಿಸ್ ಮಾಡುತ್ತಲೇ ಇದ್ದೆವು. ನನಗೆ ಕಿಸ್ ಮಾಡೋದನ್ನು ನಿಲ್ಲಿಸಲು ಆಗುತ್ತಿರಲಿಲ್ಲ’ ಎಂದಿದ್ದಾರೆ ರಣವೀರ್.

‘ರಾಮ್ ಲೀಲಾ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್ ಕಟ್ ಹೇಳಿದ್ದರು. ನಾವು ಕಿಸ್ ಮಾಡುತ್ತಿರುವುದನ್ನು ನೋಡಿ ಅವರು ನಮ್ಮ ಮಧ್ಯೆ ಹರಿಯುತ್ತಿರುವ ಭಾವನೆಗಳ ತೀವ್ರತೆಯನ್ನು ಅರ್ಥೈಸಿಕೊಂಡರು’ ಎಂದಿದ್ದಾರೆ ರಣವೀರ್ ಸಿಂಗ್.

2018ರಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಮದುವೆ ಆದರು. ‘ರಾಮ್ ಲೀಲಾ’ ಸಿನಿಮಾ ಸಂದರ್ಭದಲ್ಲಿ ಡೇಟಿಂಗ್ ಶುರು ಹಚ್ಚಿಕೊಂಡ ಬಗ್ಗೆ ರಣವೀರ್ ಸಿಂಗ್ ಈ ಮೊದಲು ಹೇಳಿಕೊಂಡಿದ್ದರು. 2013ರಲ್ಲಿ ತೆರೆಗೆ ಬಂದ ಈ ಸಿನಿಮಾ ಸೂಪರ್ ಹಿಟ್ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada