ನಟಿ ಆಗ್ಬೇಕು ಅಂತ ಮನೆ ಬಿಟ್ಟು ಓಡಿಬಂದಿದ್ದ ಯುವತಿ: ಇಂದು ಏನಾಗಿದ್ದಾರೆ ನೋಡಿ; ಇದು ಶಾಲಿನಿ ಸಿನಿಜರ್ನಿ

ನಟಿ ಆಗ್ಬೇಕು ಅಂತ ಮನೆ ಬಿಟ್ಟು ಓಡಿಬಂದಿದ್ದ ಯುವತಿ: ಇಂದು ಏನಾಗಿದ್ದಾರೆ ನೋಡಿ; ಇದು ಶಾಲಿನಿ ಸಿನಿಜರ್ನಿ
ಶಾಲಿನಿ ಪಾಂಡೆ, ರಣವೀರ್ ಸಿಂಗ್

Jayeshbhai Jordaar | Shalini Pandey: ನಟಿ ಶಾಲಿನಿ ಪಾಂಡೆ ಅವರ ರಿಯಲ್​ ಲೈಫ್​ ವಿಷಯ ಕೇಳಿ ರಣವೀರ್​ ಸಿಂಗ್​ ಕೂಡ ಅಚ್ಚರಿಪಟ್ಟಿದ್ದಾರೆ. ವೇದಿಕೆ ಮೇಲೆ ಆ ಬಗ್ಗೆ ಅವರು ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Apr 20, 2022 | 8:43 AM

ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಬಣ್ಣದ ಲೋಕಕ್ಕೆ ಇರುವ ಸೆಳೆತವೇ ಅಂಥದ್ದು. ಫಿಲ್ಮಿ ಕುಟುಂಬದ ಹಿನ್ನೆಲೆ ಇಲ್ಲದಿದ್ದರೂ, ಯಾವುದೇ ಗಾಡ್​ ಫಾದರ್​ ಇಲ್ಲದಿದ್ದರೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅನೇಕರು ಚಿತ್ರರಂಗಕ್ಕೆ ಬರುತ್ತಾರೆ. ಕೆಲವರಿಗೆ ಪೋಷಕರ ಬೆಂಬಲ ಸಿಗುತ್ತದೆ. ಆದರೆ ಅನೇಕರು ತಂದೆ-ತಾಯಿಯ ವಿರೋಧ ಕಟ್ಟಿಕೊಂಡು ಬಣ್ಣದ ಲೋಕವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಟಿ ಶಾಲಿನಿ ಪಾಂಡೆ (Shalini Pandey) ಅವರ ರಿಯಲ್​ ಲೈಫ್​ ಕಥೆ ಕೂಡ ಹಾಗೆಯೇ ಇದೆ. ಕೆಲವು ವರ್ಷಗಳ ಹಿಂದೆ ಅವರು ನಟಿ ಆಗಬೇಕು ಎಂಬ ಉದ್ದೇಶದಿಂದ ಮನೆ ಬಿಟ್ಟು ಓಡಿಬಂದಿದ್ದರು. ಆ ಘಟನೆಯನ್ನು ಅವರೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ‘ಜಯೇಶ್​ ಭಾಯ್​ ಜೋರ್ದಾರ್​’ (Jayeshbhai Jordaar) ಸಿನಿಮಾದ ಟ್ರೇಲರ್​ ಲಾಂಚ್​ ಸಮಾರಂಭದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಾಲಿಗೆ ಪಾಂಡೆಗೆ ಜೋಡಿಯಾಗಿ ರಣವೀರ್​ ಸಿಂಗ್​ (Ranveer Singh) ನಟಿಸಿದ್ದಾರೆ. ಸಿನಿಪ್ರಿಯರಿಂದ ಈ ಚಿತ್ರದ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಜಯೇಶ್​ ಭಾಯ್​ ಜೋರ್ದಾರ್​’ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಿನಿ ಪಾಂಡೆ ಅವರು ತಮ್ಮ ರಿಯಲ್​ ಲೈಫ್​ ಘಟನೆಯನ್ನು ಮೆಲುಕು ಹಾಕಿದರು. ‘ನಾನು ಇಂಜಿನಿಯರಿಂಗ್​ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನಾನು ಕೂಡ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದರೆ ಅದಕ್ಕೆ ಅಪ್ಪ ಒಪ್ಪಿಕೊಳ್ಳಲಿಲ್ಲ. ಸತತ ನಾಲ್ಕ ವರ್ಷಗಳ ಕಾಲ ಅವರ ಮನ ಒಲಿಸುವ ಪ್ರಯತ್ನ ಮಾಡಿದೆ. ಕಡೆಗೂ ಮನೆ ಬಿಟ್ಟು ಹೋಗಬೇಕು ಅಂತ ತೀರ್ಮಾನಿದೆ. ಈಗ ನೋಡಿದರೆ ಅದಲ್ಲ ತಮಾಷೆ ಎನಿಸಬಹುದು. ಆದರೆ ಆ ಸಂದರ್ಭದಲ್ಲಿ ಅದು ತುಂಬ ಕಷ್ಟದ ಸಂಗತಿ ಆಗಿತ್ತು. ಮನೆ ಬಿಟ್ಟು ಓಡಿ ಬಂದೆ’ ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ.

ತೆಲುಗಿನಲ್ಲಿ ವಿಜಯ್​ ದೇವರಕೊಂಡ ಜೊತೆ ಶಾಲಿನಿ ಪಾಂಡೆ ನಟಿಸಿದ ‘ಅರ್ಜುನ್​ ರೆಡ್ಡಿ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಮೂಲಕ ಅವರಿಗೆ ದೇಶಾದ್ಯಂತ ಖ್ಯಾತಿ ಸಿಕ್ಕಿತು. ನಂತರ ಅವರಿಗೆ ಬಾಲಿವುಡ್​ನಿಂದ ಆಫರ್​ ಬಂತು. ರಣವೀರ್​ ಸಿಂಗ್​ಗೆ ಜೋಡಿಯಾಗಿ ನಟಿಸುವ ಅವಕಾಶವನ್ನು ಶಾಲಿನಿ ಪಡೆದುಕೊಂಡರು. ಶಾಲಿನಿ ಪಾಂಡೆ ಮತ್ತು ರಣವೀರ್ ಸಿಂಗ್​ ಒಟ್ಟಾಗಿ ನಟಿಸಿರುವ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾದಲ್ಲಿ ಒಂದು ಒಳ್ಳೆಯ ಮೆಸೇಜ್​ ಇದೆ. ಅದನ್ನು ಕಾಮಿಡಿ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಸಿನಿಮಾದಿಂದ ಕೂಡ ಶಾಲಿನಿ ವೃತ್ತಿಜೀವನಕ್ಕೆ ಹೆಚ್ಚಿನ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಶಾಲಿನಿ ಅವರ ಸಿನಿಜರ್ನಿಯ ಕಥೆ ಕೇಳಿ ರಣವೀರ್​ ಸಿಂಗ್​ ಕೂಡ ಇಂಪ್ರೆಸ್​ ಆಗಿದ್ದಾರೆ. ಆ ಕುರಿತು ಅವರು ಕೂಡ ವೇದಿಕೆ ಮೇಲೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

( ಜಯೇಶ್​ ಭಾಯ್​ ಜೋರ್ದಾರ್​ ಸಿನಿಮಾದ ಟ್ರೇಲರ್​)

ಅಂದು ಮನೆ ಬಿಟ್ಟು ಬಂದಿದ್ದ ಶಾಲಿನಿ ಈಗ ಬಹುಬೇಡಿಕೆಯ ನಟಿ ಆಗಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಿಟ್ಟಿಸಿದ್ದಾರೆ. ಹಲವು ಆಫರ್​ಗಳನ್ನು ಕೈಯಲ್ಲಿ ಇಟ್ಟುಕೊಂಡು ಮುನ್ನುಗ್ಗುತ್ತಿದ್ದಾರೆ. ಇಂದು ಅವರ ಬಗ್ಗೆ ತಂದೆ-ತಾಯಿ ಹೆಮ್ಮೆ ಪಡುವಂತಾಗಿದೆ.

ಇದನ್ನೂ ಓದಿ:

4 ಕೋಟಿ ರೂಪಾಯಿ ಕಳೆದುಕೊಂಡ ಖ್ಯಾತ ಹೀರೋಯಿನ್​; ‘ಧೂಮ್​’ ನಟಿಗೆ ಮಹಾ ಮೋಸ   

ಸ್ಟಾರ್​ ನಟಿ ತಮನ್ನಾಗೆ ಸಂಭಾವನೆ ಕೊಡದೆ ಮೋಸ; ಹೀಗಾದ್ರೆ ಉಳಿದವರ ಕಥೆ ಏನು?

Follow us on

Related Stories

Most Read Stories

Click on your DTH Provider to Add TV9 Kannada