ನಿರ್ದೇಶಕನ ಎದುರು ತಮ್ಮ ಹೊಸ ಸಿನಿಮಾ ಟೈಟಲ್ ತಪ್ಪಾಗಿ ಓದಿದ ಶಾರುಖ್; ಮುಂದೇನಾಯ್ತು ನೋಡಿ

2018 ತೆರೆಗೆ ಬಂದ ‘ಸಂಜು’ ಚಿತ್ರ ಹಿಟ್ ಆಗಿತ್ತು. ಈ ಸಿನಿಮಾ ತೆರೆಕಂಡ ಬಂದ ಬಳಿಕ ಹಿರಾನಿ ಯಾವುದೇ ಚಿತ್ರ ಘೋಷಣೆ ಮಾಡಿಲ್ಲ. ಇದಾದ ನಾಲ್ಕು ವರ್ಷಗಳ ಬಳಿಕ ಅವರು ಶಾರುಖ್ ಖಾನ್ ಜತೆ ಕೈ ಜೋಡಿಸುತ್ತಿದ್ದಾರೆ.

ನಿರ್ದೇಶಕನ ಎದುರು ತಮ್ಮ ಹೊಸ ಸಿನಿಮಾ ಟೈಟಲ್ ತಪ್ಪಾಗಿ ಓದಿದ ಶಾರುಖ್; ಮುಂದೇನಾಯ್ತು ನೋಡಿ
ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 19, 2022 | 5:02 PM

ಬಾಲಿವುಡ್​ನಲ್ಲಿ ಒಂದೂ ಸೋಲು ಕಾಣದ ನಿರ್ದೇಶಕ ಎಂದರೆ ಅದು ರಾಜ್​ಕುಮಾರ್ ಹಿರಾನಿ (Rajkumar Hirani). ‘ಮುನ್ನಾ ಭಾಯ್ ಎಂಬಿಬಿಎಸ್​’, ‘3 ಈಡಿಯಟ್ಸ್’, ‘ಪಿಕೆ’ ಮೊದಲಾದ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇವರ ಜತೆ ಕೆಲಸ ಮಾಡಬೇಕು ಎಂಬುದು ಹಲವರ ಕನಸು. ಶಾರುಖ್ ಖಾನ್ (Shah Rukh Khan) ಅವರು ಕೂಡ ಇದೇ ಕನಸನ್ನು ಕಂಡಿದ್ದರು. ಈ ಕನಸು ಈಗ ನನಸಾಗಿದೆ. ಇವರ ಕಾಂಬಿನೇಷನ್​ನ ಹೊಸ ಸಿನಿಮಾ ಘೋಷಣೆ ಆಗಿದೆ. ಇದಕ್ಕೆ ‘ಡಂಕಿ’ (Dunki Movie) ಎಂದು ಹೆಸರು ಇಡಲಾಗಿದೆ. ಸಿನಿಮಾ ಅನೌನ್ಸ್​ಮೆಂಟ್​ಅನ್ನು ತುಂಬಾನೇ ಫನ್ನಿಯಾಗಿ ಮಾಡಲಾಗಿದೆ.

ಶಾರುಖ್ ಖಾನ್ ಅವರು ರಾಜ್​ಕುಮಾರ್ ಹಿರಾನಿ ಕಚೇರಿಗೆ ಬಂದಿರುತ್ತಾರೆ. ಅಲ್ಲಿ ಹಿರಾನಿ ಅವರು ಮಾಡಿರುವ ಸಿನಿಮಾಗಳ ಪೋಸ್ಟರ್​​ಗಳನ್ನು ನೋಡುತ್ತಾರೆ. ಆಗ ಹಿರಾನಿ ಎಂಟ್ರಿ ಆಗುತ್ತದೆ. ‘ಸಂಜು ಆಗಿ ರಣಬೀರ್ ಕಾಣಿಸಿಕೊಂಡಿದ್ದರು. ಎಲ್ಲವೂ ಐಕಾನಿಕ್ ಪಾತ್ರಗಳು. ನನಗೋಸ್ಕರ ಈ ರೀತಿಯ ಸ್ಕ್ರಿಪ್ಟ್​ ಇದೆಯೇ’ ಎಂದು ಕೇಳುತ್ತಾರೆ ಶಾರುಖ್​. ಇದಕ್ಕೆ ಉತ್ತರಿಸುವ ಹಿರಾನಿ, ‘ಒಂದು ಸ್ಕ್ರಿಪ್ಟ್ ಇದೆ. ಅದರಲ್ಲಿ ಕಾಮಿಡಿ, ರೊಮ್ಯಾನ್ಸ್, ಎಮೋಷನ್ಸ್ ಎಲ್ಲವೂ ಇದೆ ಎನ್ನುತ್ತಾರೆ’ ಈ ವಿಚಾರ ಕೇಳಿ ಶಾರುಖ್ ಸಖತ್ ಖುಷಿ ಪಡುತ್ತಾರೆ.

ಸಿನಿಮಾ ಟೈಟಲ್ ಏನು ಎಂದು ಪ್ರಶ್ನೆ ಮಾಡುತ್ತಾರೆ ಶಾರುಖ್. ‘ಡಂಕಿ’ ಎಂಬ ಉತ್ತರ ಹಿರಾನಿ ಕಡೆಯಿಂದ ಬರುತ್ತದೆ. ‘ಡಾಂಕಿ’ ಎಂದು ಕೇಳಿಸಿಕೊಳ್ಳುತ್ತಾರೆ ಶಾರುಖ್. ಆಗ ಹಿರಾನಿ ಸರಿಯಾಗಿ ತಿದ್ದಿ ಹೇಳುತ್ತಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಶಾರುಖ್ ಅವರ ಮತ್ತೊಂದು ಚಿತ್ರ ಘೋಷಣೆ ಆದ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ.

2018 ತೆರೆಗೆ ಬಂದ ‘ಸಂಜು’ ಚಿತ್ರ ಹಿಟ್ ಆಗಿತ್ತು. ಈ ಸಿನಿಮಾ ತೆರೆಕಂಡ ಬಂದ ಬಳಿಕ ಹಿರಾನಿ ಯಾವುದೇ ಚಿತ್ರ ಘೋಷಣೆ ಮಾಡಿಲ್ಲ. ಇದಾದ ನಾಲ್ಕು ವರ್ಷಗಳ ಬಳಿಕ ಅವರು ಶಾರುಖ್ ಖಾನ್ ಜತೆ ಕೈ ಜೋಡಿಸುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ರಾಜ್​ಕುಮಾರ್ ಹಿರಾನಿ ಜತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಸಂಜಯ್ ದತ್, ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ‘ಡಂಕಿ’ ಸಿನಿಮಾ 2023ರ ಡಿಸೆಂಬರ್ 22ರಂದು ತೆರೆಗೆ ಬರುತ್ತಿದೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋ, ಶಾರುಖ್ ಅವರ ರೆಡ್​ ಚಿಲ್ಲೀ ಸ್ಟುಡಿಯೋ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಪ್ರೆಸೆಂಟ್ ಮಾಡುತ್ತಿದೆ.

ಇದನ್ನೂ ಓದಿ: ಸೈಫ್ ಮಗನನ್ನು ಕಂಡು ​ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್​​; ಇಬ್ರಾಹಿಂ ಅಲಿ ಖಾನ್​ ಪ್ರತಿಕ್ರಿಯೆ ಹೇಗಿತ್ತು?

ಬಾಲಿವುಡ್​ಗೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್; ಮಹತ್ವದ ಕೆಲಸಕ್ಕೆ ಶುಭಾರಂಭ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ