AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಮಗನನ್ನು ಕಂಡು ​ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್​​; ಇಬ್ರಾಹಿಂ ಅಲಿ ಖಾನ್​ ಪ್ರತಿಕ್ರಿಯೆ ಹೇಗಿತ್ತು?

Ibrahim Ali Khan | Aryan Khan: ಇಬ್ರಾಹಿಂ ಅಲಿ ಖಾನ್​ ಅವರು ಸಾರ್ವಜನಿಕವಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುವುದು ಅಪರೂಪ. ಅವರನ್ನು ನೋಡಿ ಆರ್ಯನ್​ ಖಾನ್​ ಎಂದು ಕೆಲವರು ಕನ್​ಫ್ಯೂಸ್​ ಮಾಡಿಕೊಂಡಿದ್ದಾರೆ.

ಸೈಫ್ ಮಗನನ್ನು ಕಂಡು ​ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್​​; ಇಬ್ರಾಹಿಂ ಅಲಿ ಖಾನ್​ ಪ್ರತಿಕ್ರಿಯೆ ಹೇಗಿತ್ತು?
ಇಬ್ರಾಹಿಂ ಅಲಿ ಖಾನ್
TV9 Web
| Edited By: |

Updated on: Apr 17, 2022 | 1:30 PM

Share

ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಹಾಗೂ ಸೈಫ್​ ಅಲಿ ಖಾನ್ (Saif Ali Khan)​ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರ ಮಕ್ಕಳು ಕೂಡ ಬಣ್ಣ ಲೋಕಕ್ಕೆ ಕಾಲಿಟ್ಟಿದ್ದಾರೆ. ಸೈಫ್​ ಪುತ್ರಿ ಸಾರಾ ಅಲಿ ಖಾನ್ ಈಗಾಗಲೇ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ಶಾರುಖ್​ ಪುತ್ರ ಆರ್ಯನ್​ ಖಾನ್​ (Aryan Khan) ನಿರ್ದೇಶನದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಈ ನಡುವೆ ಸೈಫ್​ ಮೊದಲ ಮಗ ಇಬ್ರಾಹಿಂ ಅಲಿ ಖಾನ್​ ಕೂಡ ಆಗಾಗ ಸುದ್ದಿ ಆಗುತ್ತಿದ್ದಾರೆ. ಅಚ್ಚರಿ ಎಂದರೆ ಆರ್ಯನ್​ ಖಾನ್​ ಮತ್ತು ಇಬ್ರಾಹಿಂ ಅಲಿ ಖಾನ್ (Ibrahim Ali Khan) ಅವರ ಬಗ್ಗೆ ಕೆಲವರು ಗೊಂದಲ ಮಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಆಗುವಂತಹ ಒಂದು ವಿಡಿಯೋ ವೈರಲ್​ ಆಗಿದೆ. ಈ ರೀತಿ ಗೊಂದಲ ಸೃಷ್ಟಿ ಆಗಿರುವುದಕ್ಕೆ ಇಬ್ರಾಹಿಂ ಅಲಿ ಖಾನ್​ ನೀಡಿದ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ವಿವರ..

ಬೇರೆ ಸ್ಟಾರ್​ ಕಿಡ್​ಗಳಿಗೆ ಹೋಲಿಸಿದರೆ ಇಬ್ರಾಹಿಂ ಅಲಿ ಖಾನ್​ ಅವರದ್ದು ಸ್ವಲ್ಪ ನಾಚಿಕೆ ಸ್ವಭಾವ. ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ಸಾಧ್ಯವಾದಷ್ಟು ದೂರ ಉಳಿದುಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದು ಕೂಡ ಅಪರೂಪ. ಹಾಗಾಗಿ ಅವರನ್ನು ಕಂಡರೆ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಇತ್ತೀಚೆಗೆ ಹಾಗೆಯೇ ಆಯಿತು.

ಇಬ್ರಾಹಿಂ ಅಲಿ ಖಾನ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ಪಾಪರಾಜಿಗಳು ಮುಗಿಬಿದ್ದರು. ಈ ವೇಳೆ ಕೆಲವು ಅಭಿಮಾನಿಗಳು ‘ಆರ್ಯನ್​ ಖಾನ್​.. ಆರ್ಯನ್​ ಖಾನ್​..’ ಎಂದು ಕೂಗಿದರು. ಸಾಮಾನ್ಯವಾಗಿ ಈ ರೀತಿ ಆದಾಗ ಸೆಲೆಬ್ರಿಟಿಗಳಿಗೆ ಕೋಪ ಬರುತ್ತದೆ. ತಮ್ಮನ್ನು ಗುರುತು ಹಿಡಿಯದೇ ಬೇರೆ ವ್ಯಕ್ತಿಯ ಹೆಸರಿನಲ್ಲಿ ಕರೆದಾಗ ಕೆಲವರು ಗರಂ ಆಗುವುದುಂಟು. ಆದರೆ ಇಬ್ರಾಹಿಂ ಅಲಿ ಖಾನ್​ ಅವರು ಕೂಲ್​ ಆಗಿ ಪ್ರತಿಕ್ರಿಯಿಸಿದ್ದಾರೆ. ನಗು ನಗುತ್ತಲೇ ಅವರು ಸುಮ್ಮನಾಗಿದ್ದಾರೆ. ಅವರ ಈ ಗುಣದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಇಬ್ರಾಹಿಂ ಅಲಿ ಖಾನ್​ ಅವರು ಇಂಗ್ಲೆಂಡ್​ನಲ್ಲಿ ಉನ್ನತ ಶಿಕ್ಷಣ ಮುಗಿಸಿ ಬಂದಿದ್ದಾರೆ. ಚಿತ್ರರಂಗದ ಬಗ್ಗೆ ಅವರಿಗೆ ಆಸಕ್ತಿ ಇದೆ. ಕರಣ್​ ಜೋಹರ್​ ನಿರ್ದೇಶನದ, ಆಲಿಯಾ ಭಟ್​ ಹಾಗೂ ರಣವೀರ್​ ಸಿಂಗ್​ ನಟನೆಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಇಬ್ರಾಹಿಂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಡೈರೆಕ್ಟರ್​ ಆಗಿ ಮುಂದುವರಿಯುತ್ತಾರೋ ಅಥವಾ ಹೀರೋ ಆಗಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಾರೋ ಎಂಬ ಕೌತುಕ ಮೂಡಿದೆ.

ಇನ್ನು, ಆರ್ಯನ್​ ಖಾನ್​ ಬಗ್ಗೆ ಹೇಳುವುದಾದರೆ ಡ್ರಗ್ಸ್​ ಪಾರ್ಟಿ ಆರೋಪದ ಮೇಲೆ ಜೈಲು ಸೇರಿದ್ದ ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಆ ಘಟನೆಯಿಂದ ಶಾರುಖ್​ ಕುಟುಂಬಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಆದರೆ ಈಗ ಆ ಘಟನೆಯನ್ನು ಮರೆತು ಆರ್ಯನ್​ ಖಾನ್​ ಸಹಜ ಜೀವನ ನಡೆಸುತ್ತಿದ್ದಾರೆ. ಸದ್ಯ ಆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಒಂದು ವೆಬ್​ ಸರಣಿಯನ್ನು ಅವರು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ:

ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ

ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ