AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ

Anupam Kher Fitness: 67ನೇ ವಯಸ್ಸಿನಲ್ಲಿ ಅನುಪಮ್​ ಖೇರ್​ ಅವರು ಈ ರೀತಿ ಬದಲಾಗಿದ್ದಾರೆ. ಆ ಕುರಿತು ತಮ್ಮ ಮಾತುಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
ಅನುಪಮ್ ಖೇರ್
TV9 Web
| Edited By: |

Updated on:Apr 18, 2022 | 1:11 PM

Share

ಖ್ಯಾತ ನಟ ಅನುಪಮ್​ ಖೇರ್ (Anupam Kher)​ ಅವರು ಕಳೆದ ನಾಲ್ಕು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಅವರು ಜನಮನ ಗೆದ್ದಿದ್ದಾರೆ. ಈ ವರ್ಷ ತೆರೆಕಂಡ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಚಿತ್ರದ ಮೂಲಕ ಅವರು ಬಹುದೊಡ್ಡ ಗೆಲುವು ಕಂಡಿದ್ದಾರೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಅನುಪಮ್​ ಖೇರ್​ ಅವರು ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಪುಷ್ಕರನಾಥ್​ ಪಂಡಿತ್​ ಎಂಬ ಆ ಪಾತ್ರದಲ್ಲಿನ ಅವರ ನಟನೆಗೆ ಜನರು ಭೇಷ್​ ಎಂದಿದ್ದಾರೆ. ಇದರ ಜೊತೆಗೆ ಇನ್ನೊಂದು ಕಾರಣದಿಂದಲೂ ಅನುಪಮ್​ ಖೇರ್​ ಅವರು ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಫಿಟ್ನೆಸ್​ (Anupam Kher Fitness) ಬಗ್ಗೆ ಹೆಚ್ಚು ಕಾಳಜಿ ಇದೆ. ಹಾಗಾಗಿ ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಅವರ ದೇಹದಲ್ಲಿ ಅಚ್ಚರಿಯ ಬದಲಾವಣೆ ಆಗಿದೆ. ಅದನ್ನು ಅವರು ಫೋಟೋ ಸಮೇತ ವಿವರಿಸಿದ್ದಾರೆ. ತಮ್ಮ ಬಾಡಿ ಟ್ರಾನ್ಸ್​ಫಾರ್ಮೇಶನ್​ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಅವರು ಖುಷಿಪಟ್ಟಿದ್ದಾರೆ. ಅದನ್ನು ನೋಡಿ ಇತರರಿಗೂ ಸ್ಫೂರ್ತಿ ಆಗಿದೆ. ಆ ಬಗ್ಗೆ ಜನರು ಕಮೆಂಟ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಅನುಪಮ್​ ಖೇರ್​ ಅವರಿಗೆ ಈಗ 67 ವರ್ಷ ವಯಸ್ಸು. ಈ ಪ್ರಾಯದಲ್ಲಿ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಮನಸ್ಸು ಇದ್ದರೆ ಮಾರ್ಗ ಎಂಬುದನ್ನು ಅವರು ಒತ್ತಿ ಹೇಳುತ್ತಿದ್ದಾರೆ. ತಮ್ಮ ಹಳೆಯ ಫೋಟೋ ಜೊತೆ ಈಗಿನ ಫೋಟೋವನ್ನು ಹೋಲಿಕೆ ಮಾಡಿರುವ ಅನುಪಮ್​ ಖೇರ್​ ಅವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ‘ಇದ್ದಂತೆಯೇ ಇರಬೇಕು ಎಂಬ ಹಂಬಲಕ್ಕಿಂತಲೂ ಬದಲಾಗಬೇಕು ಎಂಬ ನಿಮ್ಮ ಹಂಬಲ ದೊಡ್ಡದಾಗಿರಬೇಕು. ಫಿಟ್​ ಆಗಿರಬೇಕು ಎಂಬುದು ಜಿಮ್​ನಲ್ಲಿ ಶುರುವಾಗುವಂಥದ್ದಲ್ಲ. ಅದು ನಿಮ್ಮ ಮನಸ್ಸಿನಲ್ಲೇ ಶುರುವಾಗಬೇಕು. ಆ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಇಂದು ಉತ್ತಮವಾದ ದಿನ’ ಎಂದು ಅನುಪಮ್​ ಖೇರ್​ ಬರೆದುಕೊಂಡಿದ್ದಾರೆ.

View this post on Instagram

A post shared by Anupam Kher (@anupampkher)

ಈ ಪೋಸ್ಟ್​ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮಗೂ ಕೂಡ ಫಿಟ್ನೆಸ್​ ಬಗ್ಗೆ ಸ್ಫೂರ್ತಿ ಆಗಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ. ‘ನಾನು ನಿನ್ನೆ ರಾತ್ರಿಯೇ ನಿರ್ಧಾರ ಮಾಡಿದ್ದೇನೆ. ನಿಮ್ಮ ಫೋಟೋ ನೋಡಿದರೆ ನಾನು ಇನ್ನಷ್ಟು ಸ್ಟ್ರಾಂಗ್​ ಆಗುತ್ತೇನೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ. ‘ನೀವು ಗ್ರೇಟ್​ ಸರ್​’ ಎಂದು ಅನುಪಮ್ ಖೇರ್​ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಈ ವರ್ಷ ಮಾ.7ರಂದು ಅನುಪಮ್​ ಖೇರ್​ ಅವರು 67ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಫಿಟ್ನೆಸ್​ ಗೋಲ್​ ಬಗ್ಗೆ ಮಾಹಿತಿ ನೀಡಿದ್ದರು. ‘ಫಿಟ್ನೆಸ್​ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ಬಹಳ ಹಿಂದಿನಿಂದಲೂ ನನ್ನ ಕನಸಾಗಿತ್ತು. ಆದರೆ ಅದನ್ನು ನನಸಾಗಿಸಲು ನಾನು ಪ್ರಯತ್ನಿಸಿರಲಿಲ್ಲ. ಈಗ ಫಿಟ್ನೆಸ್​ ಹಾದಿಯಲ್ಲಿ ಸಾಗಲು ಆರಂಭಿಸಿದ್ದೇನೆ. ಈ ಪಯಣವನ್ನು ನಿಮಗೆ ಪರಿಚಯಿಸಲು ಬಯಸುತ್ತೇನೆ. ಇನ್ನೊಂದು ವರ್ಷದಲ್ಲಿ ನನ್ನ ಇನ್ನೊಂದು ಹೊಸ ವರ್ಷನ್​ ಅನ್ನು ನಾವು ಸೆಲೆಬ್ರೇಟ್​ ಮಾಡುತ್ತೇವೆ’ ಎಂದು ಅನುಪಮ್​ ಖೇರ್​ ಬರೆದುಕೊಂಡಿದ್ದರು.

‘ಇಂದು ನಾನು 67ನೇ ವರ್ಷವನ್ನು ಆರಂಭಿಸುತ್ತಿರುವ ಸಂದರ್ಭದಲ್ಲಿ, ನನ್ನದೇ ಹೊಸ ವರ್ಷನ್​ ಅನ್ನು ಪ್ರಸ್ತುತ ಪಡಿಸಲು ನಾನು ಎಗ್ಸೈಟ್​ ಆಗಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಸಾಧಿಸಿದ ನಿಧಾನಗತಿಯ ಪ್ರಗತಿಗೆ ಈ ಫೋಟೋಗಳೇ ಉದಾಹರಣೆ ಆಗಿವೆ’ ಎಂದು ಅವರು ಪೋಸ್ಟ್​ ಮಾಡಿದ್ದನ್ನು ಕಂಡು ಹೃತಿಕ್​ ರೋಷನ್​ ಕೂಡ ಬೆರಗಾಗಿದ್ದರು.

ಇದನ್ನೂ ಓದಿ:

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಯಶಸ್ಸು: ‘ಏನ್​ ಬೇಕಾದ್ರೂ ಆಗಬಹುದು’ ಅಂತ ಮತ್ತೆ ಹೇಳಿದ ಅನುಪಮ್​ ಖೇರ್​

ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

Published On - 10:25 am, Mon, 18 April 22

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!