ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ

ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
ಅನುಪಮ್ ಖೇರ್

‘ಫಿಟ್ನೆಸ್​ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ಬಹಳ ಹಿಂದಿನಿಂದಲೂ ನನ್ನ ಕನಸಾಗಿತ್ತು’ ಎಂದು ಅನುಪಮ್​ ಖೇರ್ ಹೇಳಿದ್ದಾರೆ. ಇಂದು (ಮಾ.7) ಅವರ ಜನ್ಮದಿನ.

TV9kannada Web Team

| Edited By: Madan Kumar

Mar 07, 2022 | 1:13 PM

ಸಿನಿಮಾ ಸೆಲೆಬ್ರಿಟಿಗಳು ಫಿಟ್ನೆಸ್​ (Fitness) ಕಾಪಾಡಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಾರೆ. ಹಾಗಂತ ಬಾಡಿಯನ್ನು ಫಿಟ್​ ಆಗಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. ಪ್ರತಿ ದಿನ ಜಿಮ್​ನಲ್ಲಿ ಬೆವರು ಹರಿಸಬೇಕು, ಕಟ್ಟುನಿಟ್ಟಾದ ಡಯೆಟ್​ ಮಾಡಬೇಕು. ಈ ವಿಚಾರದಲ್ಲಿ ಯುವ ನಟರು ಕೂಡ ಸುಸ್ತಾಗಿ ಬಿಡುತ್ತಾರೆ. ಆದರೆ 67 ವರ್ಷ ವಯಸ್ಸಿನ ನಟ ಅನುಪಮ್​ ಖೇರ್​ (Anupam Kher) ಅವರು ಫಿಟ್ನೆಸ್​ ಬಗ್ಗೆ ಸಖತ್​ ಸೀರಿಯಸ್​ ಆಗಿದ್ದಾರೆ. ಈ ವಯಸ್ಸಿನಲ್ಲಿಯೂ ಕೂಡ ಅವರು ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಅದಕ್ಕೆ ಅವರ ಹೊಸ ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಇಂದು (ಮಾ.7) ಅನುಪಮ್​ ಖೇರ್​ ಅವರ ಜನ್ಮದಿನ. ಆ ಪ್ರಯುಕ್ತ ಅವರು ಎರಡು ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಫಿಟ್ನೆಸ್​ ಗೋಲ್​ ಬಗ್ಗೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಜನ್ಮದಿನದ ಪ್ರಯುಕ್ತ ಅನುಪಮ್​ ಖೇರ್​ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ, ಫಿಟ್ನೆಸ್​ ಬಗ್ಗೆ ಅವರಿಗೆ ಇರುವ ಬದ್ಧತೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ನಟ ಹೃತಿಕ್​ ರೋಷನ್​ (Hrithik Roshan) ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಅನುಪಮ್​ ಖೇರ್​ ಅವರು ಶೇರ್​ ಮಾಡಿಕೊಂಡ ಫೋಟೋಗೆ ಹೃತಿಕ್​ ರೋಷನ್​ ಕಮೆಂಟ್​ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಅದ್ಭುತ.. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಅವರು ವಿಶ್​ ಮಾಡಿದ್ದಾರೆ. ಬಾಡಿ ಬಿಲ್ಡಿಂಗ್​ ವಿಚಾರದಲ್ಲಿ ಹೃತಿಕ್​ ಎಲ್ಲರಿಗೂ ಇಷ್ಟವಾಗುತ್ತಾರೆ. ಅಂಥ ನಟನಿಗೂ ಅನುಪಮ್​ ಖೇರ್​ ಅವರ ಫಿಟ್ನೆಸ್​ ಕಂಡು ಅಚ್ಚರಿ ಆಗಿದೆ. 67ನೇ ವಯಸ್ಸಿನಲ್ಲಿ ಈ ಪರಿ ಬದ್ಧತೆ ತೋರಿರುವುದು ಅನೇಕರಿಗೆ ಸ್ಫೂರ್ತಿ ಆಗಿದೆ.

ಇಂದು ನಾನು 67ನೇ ವರ್ಷವನ್ನು ಆರಂಭಿಸುತ್ತಿರುವ ಸಂದರ್ಭದಲ್ಲಿ, ನನ್ನದೇ ಹೊಸ ವರ್ಷನ್​ ಅನ್ನು ಪ್ರಸ್ತುತ ಪಡಿಸಲು ನಾನು ಎಗ್ಸೈಟ್​ ಆಗಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಸಾಧಿಸಿದ ನಿಧಾನಗತಿಯ ಪ್ರಗತಿಗೆ ಈ ಫೋಟೋಗಳೇ ಉದಾಹರಣೆ ಆಗಿವೆ’ ಎಂದು ಅನುಪಮ್​ ಖೇರ್​ ಬರೆದುಕೊಂಡಿದ್ದಾರೆ. 37 ವರ್ಷಗಳ ಹಿಂದೆ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 28 ವರ್ಷ ವಯಸ್ಸು. ಮೊದಲ ಸಿನಿಮಾದಲ್ಲೇ 65 ವರ್ಷದ ವೃದ್ಧನ ಪಾತ್ರ ಮಾಡಿ ಅವರು ಸೈ ಎನಿಸಿಕೊಂಡಿದ್ದರು. ಪ್ರತಿ ಸಿನಿಮಾದಲ್ಲಿಯೂ ಹೊಸ ಹೊಸ ಅವತಾರದ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದರು.

‘ಫಿಟ್ನೆಸ್​ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ಬಹಳ ಹಿಂದಿನಿಂದಲೂ ನನ್ನ ಕನಸಾಗಿತ್ತು. ಆದರೆ ಅದನ್ನು ನನಸಾಗಿಸಲು ನಾನು ಪ್ರಯತ್ನಿಸಿರಲಿಲ್ಲ. ಈಗ ಫಿಟ್ನೆಸ್​ ಹಾದಿಯಲ್ಲಿ ಸಾಗಲು ಆರಂಭಿಸಿದ್ದೇನೆ. ಈ ಪಯಣವನ್ನು ನಿಮಗೆ ಪರಿಚಯಿಸಲು ಬಯಸುತ್ತೇನೆ. ಇನ್ನೊಂದು ವರ್ಷದಲ್ಲಿ ನನ್ನ ಇನ್ನೊಂದು ಹೊಸ ವರ್ಷನ್​ ಅನ್ನು ನಾವು ಸೆಲೆಬ್ರೇಟ್​ ಮಾಡುತ್ತೇವೆ’ ಎಂದು ಅನುಪಮ್​ ಖೇರ್​ ಬರೆದುಕೊಂಡಿದ್ದಾರೆ.

View this post on Instagram

A post shared by Anupam Kher (@anupampkher)

ನಟ ಸತೀಶ್​ ಕೌಶಿಕ್​ ಅವರು ಈ ಫೋಟೋ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಗ್ರೇಟ್​ ಬಾಡಿ, ಗ್ರೇಟ್​ ಮನಸ್ಸು, ಗ್ರೇಟ್​ ನಟ ಮತ್ತು ಗ್ರೇಟ್​ ಸ್ನೇಹಿತ’ ಎಂದು ಅವರು ಕಮೆಂಟ್​ ಮಾಡಿದ್ದಾರೆ. ಚಿತ್ರರಂಗದಲ್ಲಿ ಈಗಲೂ ಅನುಪಮ್​ ಖೇರ್​ ಅವರು ಬ್ಯುಸಿ ಆಗಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಪರಿಣೀತಿ ಚೋಪ್ರಾ ಮತ್ತು ಬೋಮನ್​ ಇರಾನಿ ಅಭಿನಯದ ‘ಊಂಚಾಯಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ದುಃಖವನ್ನು ಮರೆಮಾಚುವ ನಗು’; ಆಶಾ ಭೋಸ್ಲೆ ಭೇಟಿ ಮಾಡಿ ಸಾಂತ್ವನ ಹೇಳಿದ ಅನುಪಮ್​ ಖೇರ್

ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

Follow us on

Related Stories

Most Read Stories

Click on your DTH Provider to Add TV9 Kannada