‘ಕೆಜಿಎಫ್ 2’ ಚಿತ್ರಕ್ಕೆ ಹೆದರಿದ ಟಾಲಿವುಡ್​; ಎರಡು ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ

ನಮ್ಮ ಸಿನಿಮಾಗಳ ಅಬ್ಬರ ನೋಡಿಕೊಂಡು ಪರಭಾಷೆಯವರು ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಗಿದೆ.

‘ಕೆಜಿಎಫ್ 2’ ಚಿತ್ರಕ್ಕೆ ಹೆದರಿದ ಟಾಲಿವುಡ್​; ಎರಡು ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 19, 2022 | 4:06 PM

‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ (KGF Chapter 2)  ಅಬ್ಬರಕ್ಕೆ ಭಾರತೀಯ ಚಿತ್ರರಂಗವೇ ಒಮ್ಮೆ ಶೇಕ್​ ಆಗಿದೆ. ಬಾಲಿವುಡ್ (Bollywood) ಮಂದಿ ಮಾಡಿದ್ದ ದಾಖಲೆಗಳು ಧೂಳಿಪಟ ಆಗಿವೆ. ಎಲ್ಲ ಕಡೆಗಳಲ್ಲಿ ರಾಕಿ ಭಾಯ್ ಹೊಸಹೊಸ ದಾಖಲೆಗಳನ್ನು ಬರೆದುಕೊಂಡು ಬರುತ್ತಿದ್ದಾರೆ. ‘ಕೆಜಿಎಫ್​ 2’ ಬರುವ ಅಬ್ಬರ ನೋಡಿಯೇ ‘ಜೆರ್ಸಿ’ ಸಿನಿಮಾದ (Jersey Movie) ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಈ ವಾರ ತೆರೆಗೆ ಬರುವ ಚಿತ್ರಗಳು ರಿಲೀಸ್​ ದಿನಾಂಕವನ್ನು ಮುಂದೂಡಿಕೊಂಡು ಸೈಲೆಂಟ್ ಆಗಿವೆ. ಟಾಲಿವುಡ್​ನಲ್ಲಂತೂ ‘ಕೆಜಿಎಫ್ 2’ ಹೊಡೆತಕ್ಕೆ ಸಿಲುಕಿಕೊಳ್ಳದೆ, ಎರಡು ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿವೆ.

ಸಾಮಾನ್ಯವಾಗಿ ಪರಭಾಷೆಯ ಸಿನಿಮಾಗಳು ತೆರೆಗೆ ಬರುತ್ತಿವೆ ಎಂದರೆ ಕನ್ನಡ ಸಿನಿಮಾಗಳ ಎತ್ತಂಗಡಿ ಆಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಮ್ಮ ಸಿನಿಮಾಗಳ ರಿಲೀಸ್​ ದಿನಾಂಕ, ನಮ್ಮ ಸಿನಿಮಾಗಳ ಅಬ್ಬರ ನೋಡಿಕೊಂಡು ಪರಭಾಷೆಯವರು ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಗಿದೆ.

ಏಪ್ರಿಲ್​ 22ರಂದು ತೆಲುಗಿನಲ್ಲಿ ವಿಶ್ವಕ್ ಸೇನ್​ ಅವರ ‘ಅಶೋಕ ವನಂ ಲೋ ಅರ್ಜುನ ಕಲ್ಯಾಣಂ’ ಹಾಗೂ ನಾಗ ಶೌರ್ಯ ಅವರ ‘ಕೃಷ್ಣ ವೃಂದ ವಿಹಾರಿ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಈ ಎರಡೂ ಚಿತ್ರಗಳು ಈಗ ರಿಲೀಸ್​ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಈಗಾಗಲೇ ‘ಅಶೋಕ ವನಂ ಲೋ ಅರ್ಜುನ ಕಲ್ಯಾಣಂ’ ಸಿನಿಮಾದ ರಿಲೀಸ್ ದಿನಾಂಕವನ್ನು ಮೇ 6ಕ್ಕೆ ಮುಂದೂಡಿರುವ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ‘ಕೃಷ್ಣ ವೃಂದ ವಿಹಾರಿ’ ಕೂಡ ಇದೇ ಆಲೋಚನೆಯಲ್ಲಿದ್ದು, ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

ಏಪ್ರಿಲ್ 29ರಂದು ರಾಮ್​ ಚರಣ್ ಹಾಗೂ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ಅಬ್ಬರ ಒಂದು ವಾರಗಳ ಕಾಲವಂತೂ ಇದ್ದೇ ಇರುತ್ತದೆ. ಹೀಗಾಗಿ, ಮೇ 6ರ ಬಳಿಕ ಚಿತ್ರಗಳನ್ನು ರಿಲೀಸ್ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಈ ಚಿತ್ರಗಳು ಬಂದಿವೆ ಎಂದು ವರದಿ ಆಗಿದೆ.

‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ ಹೊಸಹೊಸ ದಾಖಲೆ ಬರೆಯುತ್ತಿದೆ. ಈ ಸಿನಿಮಾ ಮೂರು ದಿನಕ್ಕೆ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗಳಿಕೆ ನೋಡಿ ಬಾಲಿವುಡ್​ ಮಂದಿ ಕಣ್ಣರಳಿಸಿದ್ದಾರೆ. ಸಿನಿಮಾದ ನಾಗಾಲೋಟ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ.

ಇದನ್ನೂ ಓದಿ: KGF 2 Collection: ಸೋಮವಾರದ ಪರೀಕ್ಷೆಯಲ್ಲಿ ‘ಕೆಜಿಎಫ್​ 2’ ಪಾಸ್; ಹಿಂದಿ ಮಾರುಕಟ್ಟೆಯಲ್ಲಿ 5 ದಿನಕ್ಕೆ 219.56 ಕೋಟಿ ರೂ. ಕಲೆಕ್ಷನ್​

ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಎದುರು ಮಕಾಡೆ ಮಲಗಿದ ‘ಬೀಸ್ಟ್​’; ಕಲೆಕ್ಷನ್ ಅಂತರ ಎಷ್ಟು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ