AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ತಾರೆಯೊಂದಿಗೆ ಬಾಲಿವುಡ್​ ಪದಾರ್ಪಣೆ ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಯಶ್ ಉತ್ತರ ಏನಿತ್ತು? ಹಳೆಯ ವಿಡಿಯೋ ಮತ್ತೆ ವೈರಲ್

Deepika Padukone | KGF Chapter 2: ಯಶ್ ಅವರ ‘ಕೆಜಿಎಫ್ ಚಾಪ್ಟರ್ 1’ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನದ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಅದರಲ್ಲಿ ಯಶ್ ಬಾಲಿವುಡ್, ಸ್ಯಾಂಡಲ್​ವುಡ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರರೆ ಯಶ್ ಜತೆಗಿನ ಮಾತುಕತೆಯಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ.

ಯಾವ ತಾರೆಯೊಂದಿಗೆ ಬಾಲಿವುಡ್​ ಪದಾರ್ಪಣೆ ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಯಶ್ ಉತ್ತರ ಏನಿತ್ತು? ಹಳೆಯ ವಿಡಿಯೋ ಮತ್ತೆ ವೈರಲ್
ಯಶ್
TV9 Web
| Updated By: shivaprasad.hs|

Updated on: Apr 20, 2022 | 3:14 PM

Share

‘ಕೆಜಿಎಫ್ ಚಾಪ್ಟರ್ 2’ (KGF Chapter 2) ಯಶಸ್ಸು ಯಶ್ (Yash) ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಇದೇ ಕಾರಣದಿಂದ ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಈ ನಡುವೆ ಯಶ್ ಅವರ ‘ಕೆಜಿಎಫ್ ಚಾಪ್ಟರ್ 1’ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನದ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಅದರಲ್ಲಿ ಯಶ್ ಬಾಲಿವುಡ್, ಸ್ಯಾಂಡಲ್​ವುಡ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರರೆ ಯಶ್ ಜತೆಗಿನ ಮಾತುಕತೆಯಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ವಿಡಿಯೋದಲ್ಲಿ ರ್ಯಾಪಿಡ್ ಫೈರ್ ಮಾದರಿಯಲ್ಲಿ ಹಲವು ಪ್ರಶ್ನೆಗಳನ್ನು ಯಶ್ ಅವರಿಗೆ ಕೇಳಲಾಗಿತ್ತು. ಈ ನಡುವೆ ಯಶ್​ಗೆ ಬಾಲಿವುಡ್ ಪ್ರವೇಶದ ಬಗ್ಗೆಯೂ ಪ್ರಶ್ನಿಸಲಾಗಿದೆ. ‘‘ಒಂದು ವೇಳೆ ಬಾಲಿವುಡ್ ಪ್ರವೇಶ ಮಾಡುವುದಾದರೆ ಯಾವ ತಾರೆಯೊಂದಿಗೆ ತೆರೆ ಹಂಚಿಕೊಳ್ಳಲು ಇಚ್ಛಿಸುತ್ತೀರಿ?’’ ಎಂದು ಯಶ್​ಗೆ ಕೇಳಾಗಿತ್ತು. ಇದಕ್ಕೆ ಉತ್ತರಿಸುತ್ತಾ ಯಶ್, ದೀಪಿಕಾ ಪಡುಕೋಣೆ ಹೆಸರನ್ನು ಹೇಳಿದ್ದಾರೆ.

2018ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಯಶ್ ಈ ಬಗ್ಗೆ ಮಾತನಾಡಿದ್ದಾರೆ. ದೀಪಿಕಾರ ಹೆಸರನ್ನು ಹೇಳುವುದಕ್ಕೂ ಯಶ್ ಕಾರಣ ನೀಡಿದ್ದು, ನಟಿಯೂ ಬೆಂಗಳೂರು ಮೂಲದವರು ಎಂದು ಉತ್ತರಿಸಿದ್ದಾರೆ. ಸದ್ಯ ಆ ಸಂದರ್ಶನದ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಯಶ್ ಮಾತು ಮತ್ತೆ ವೈರಲ್ ಆಗಲು ಕಾರಣಗಳೂ ಇಲ್ಲದಿಲ್ಲ. ಸದ್ಯ ದೀಪಿಕಾ ಕೂಡ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಅವರು ಪ್ರಭಾಸ್ ಜತೆಗೆ ‘ಪ್ರಾಜೆಕ್ಟ್ ಕೆ’ಯಲ್ಲಿ ಬಣ್ಣಹಚ್ಚುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನ ನಂತರ ಯಶ್ ಅವರ ವ್ಯಾಪ್ತಿಯೂ ಹಿರಿದಾಗಿದೆ. ಉತ್ತರ ಭಾರತದಲ್ಲಿ ಯಶ್ ಅವರಿಗೆ ಸ್ಟಾರ್ ಪಟ್ಟ ಲಭಿಸಿದೆ. ಅತ್ತ ದೀಪಿಕಾರೂ ಹಲವು ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಶ್ ಹಾಗೂ ದೀಪಿಕಾ ಒಂದುವೇಳೆ ತೆರೆಹಂಚಿಕೊಂಡರೆ ಅದು ಅದ್ಭುತವಾಗಿರುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಹೀಗಾಗಿಯೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಅದೇ ಸಂದರ್ಶನದಲ್ಲಿ ಯಶ್ ಮಾತನಾಡುತ್ತಾ ತಮ್ಮ ನೆಚ್ಚಿನ ಹಿಂದಿ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಎಂದೂ ಹೇಳಿದ್ದರು. ರಣಬೀರ್ ಕಪೂರ್​ರನ್ನು ನೆಚ್ಚಿನ ಹಿಂದಿ ನಟ ಎಂದಿದ್ದರು.

ದೀಪಿಕಾರ ಚಿತ್ರಗಳ ವಿಷಯಕ್ಕೆ ಬಂದರೆ ಅವರು ಹೃತಿಕ್ ರೋಷನ್ ಜತೆ ‘ಫೈಟರ್’ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಜತೆಗೆ ಶಾರುಖ್ ಖಾನ್ ಜತೆ ‘ಪಠಾಣ್’, ಅಮಿತಾಭ್ ಬಚ್ಚನ್ ಜತೆ ಮತ್ತೊಂದು ಸಿನಿಮಾದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ತಮ್ಮ ಮುಂದಿನ ಚಿತ್ರಗಳ ಕೆಲಸಗಳು ನಡೆಯುತ್ತಿದ್ದು, ಸಮಯ ಬಂದಾಗ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ‘RRR​’ ಚಿತ್ರದ ಹಿಂದಿ ಕಲೆಕ್ಷನ್​ ಹಿಂದಿಕ್ಕಲು ‘ಕೆಜಿಎಫ್​ 2’ ಸಿನಿಮಾಗೆ ಇನ್ನೆಷ್ಟು ಕೋಟಿ ರೂ. ಬಾಕಿ? ​ಇಲ್ಲಿದೆ ಲೆಕ್ಕ

ಹಾವೇರಿ ಥಿಯೇಟರ್​ನಲ್ಲಿ ಕೆಜಿಎಫ್ 2 ಸಿನಿಮಾ ವೀಕ್ಷಣೆ ವೇಳೆ ಯುವಕನ ಮೇಲೆ ಗುಂಡಿನ ದಾಳಿ!

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ