ಹಾವೇರಿ ಥಿಯೇಟರ್​ನಲ್ಲಿ ಕೆಜಿಎಫ್ 2 ಸಿನಿಮಾ ವೀಕ್ಷಣೆ ವೇಳೆ ಯುವಕನ ಮೇಲೆ ಗುಂಡಿನ ದಾಳಿ!

ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್2 ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಆದರೆ ಸಿನಿಮಾ ನೋಡುತ್ತಿದ್ದ ಜನರು ಏಕಾಏಕಿ ಗಾಬರಿಯಾಗಿದ್ದರು. ಕಾರಣ ಚಿತ್ರಮಂದಿರದಲ್ಲಿ ಗುಂಡಿನ ಸದ್ದು ಕೇಳಿತ್ತು.

ಹಾವೇರಿ ಥಿಯೇಟರ್​ನಲ್ಲಿ ಕೆಜಿಎಫ್ 2 ಸಿನಿಮಾ ವೀಕ್ಷಣೆ ವೇಳೆ ಯುವಕನ ಮೇಲೆ ಗುಂಡಿನ ದಾಳಿ!
ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us
TV9 Web
| Updated By: sandhya thejappa

Updated on:Apr 20, 2022 | 11:25 AM

ಹಾವೇರಿ: ಥಿಯೇಟರ್​ನಲ್ಲಿ ಕೆಜಿಎಫ್ 2 (KGF 2) ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿರುವ ಘಟನೆ ನಿನ್ನೆ (ಏಪ್ರಿಲ್ 19) ನಡೆದಿದೆ. ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ರಾಜಶ್ರೀ ಥಿಯೇಟರ್​ನಲ್ಲಿ ವಸಂತಕುಮಾರ್ ಎಂಬುವವರಿಗೆ ಆರೋಪಿಗಳು ಮೂರು ಬಾರಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ವಸಂತಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಪ್ರಮುಖ ಕಾರಣವೇನು? ಗುಂಡು ಹಾರಿಸಿದವರು ಯಾರು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್​ಪಿ ವಿಜಯಕುಮಾರ್​​ ಸೇರಿದಂತೆ ಶಿಗ್ಗಾಂವಿ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್2 ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಆದರೆ ಸಿನಿಮಾ ನೋಡುತ್ತಿದ್ದ ಜನರು ಏಕಾಏಕಿ ಗಾಬರಿಯಾಗಿದ್ದರು. ಕಾರಣ ಚಿತ್ರಮಂದಿರದಲ್ಲಿ ಗುಂಡಿನ ಸದ್ದು ಕೇಳಿತ್ತು. ಗುಂಡಿನ ಹೊಡೆತಕ್ಕೆ ಸಿಕ್ಕು ಓರ್ವ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಗಂಭೀರ ಗಾಯಗೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರು ಪ್ರತಿನಿಧಿಸುವ ಶಿಗ್ಗಾಂವಿಯಲ್ಲೇ ಇಂಥದ್ದೊಂದು ಗುಂಡಿನ ಸದ್ದು ಮೊಳಗಿದೆ.

ನಿನ್ನೆ ಕೊನೆಯ ಶೋ ಆರಂಭವಾಗಿತ್ತು. ದಿನದ ಕೊನೆಯ ಶೋ ಆರಂಭವಾಗಿ ಕೆಲವು ನಿಮಿಷಗಳು ಆಗಿತ್ತು. ಅದು ರಾತ್ರಿ ಒಂಬತ್ತೂವರೆ ಗಂಟೆಯಿಂದ ಹತ್ತು ಗಂಟೆಯ ಸಮಯ. ಚಿತ್ರಮಂದಿರದಲ್ಲಿ ಏಕಾಏಕಿ ಗುಂಡಿನ ಸದ್ದು ಮೊಳಗಿತ್ತು. ಗುಂಡಿನ ಹೊಡೆತಕ್ಕೆ ಸಿಕ್ಕ ಯುವಕ ಬಿದ್ದು ಒದ್ದಾಡುತ್ತಿದ್ದರಂತೆ. ಕೂಡಲೆ ಚಿತ್ರಮಂದಿರದ ಮಾಲೀಕರು ಹಾಗೂ ಶಿಗ್ಗಾಂವಿ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಪ್ಪತ್ತೇಳು ವರ್ಷದ ವಸಂತಕುಮಾರ  ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ನಿವಾಸಿ. ಘಟನೆ ನಂತರ ಗುಂಡು ಹಾರಿಸಿದವರು ಸ್ಥಳದಿಂದ ಪರಾರಿ ಆಗಿದ್ದಾರೆ‌.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ

ಹಿಂದವೀ ಮೀಟ್ ಮಾರ್ಟ್ ಮಾಲೀಕನ ಹತ್ಯೆಗೆ ಸ್ಕೆಚ್? ಮುಸ್ಲಿಂ ಯುವಕರಿಂದ ಬೆದರಿಕೆ, ಮಾಲೀಕ ಮುನೇಗೌಡಗೆ ಪೊಲೀಸ್ ಭದ್ರತೆ

ಉಕ್ರೇನ್​ ಸೇನೆಗೆ ಶರಣಾಗಲು ಮತ್ತೊಂದು ಅವಕಾಶ ಕೊಟ್ಟ ರಷ್ಯಾ: ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧ

Published On - 11:18 am, Wed, 20 April 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್