AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ ಸೇನೆಗೆ ಶರಣಾಗಲು ಮತ್ತೊಂದು ಅವಕಾಶ ಕೊಟ್ಟ ರಷ್ಯಾ: ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧ

ಸಾವಿರಾರು ಸೈನಿಕರನ್ನು ಹೋರಾಟಕ್ಕೆ ಹೊಸದಾಗಿ ನಿಯೋಜಿಸಿರುವ ರಷ್ಯಾ ದೊಡ್ಡಮಟ್ಟದ ಫಿರಂಗಿ ಪಡೆ ಮತ್ತು ರಾಕೆಟ್ ಲಾಂಚರ್​ಗಳೊಂದಿಗೆ ಉಕ್ರೇನ್ ಮೇಲೆ ನಿರ್ಣಾಯಕ ದಾಳಿ ನಡೆಸಲು ಸಿದ್ಧವಾಗಿದೆ.

ಉಕ್ರೇನ್​ ಸೇನೆಗೆ ಶರಣಾಗಲು ಮತ್ತೊಂದು ಅವಕಾಶ ಕೊಟ್ಟ ರಷ್ಯಾ: ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧ
ರಷ್ಯಾ-ಉಕ್ರೇನ್ ಸೇನಾಪಡೆಗಳ ಸಂಘರ್ಷದಲ್ಲಿ ಹಾಳಾಗಿರುವ ವಾಹನ, ಮನೆಗಳು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Apr 20, 2022 | 9:10 AM

Share

ರಷ್ಯಾ-ಉಕ್ರೇನ್ ಕದನಕಣ ದಿನದಿಂದ ದಿನಕ್ಕೆ ಹಲವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಾವಿರಾರು ಸೈನಿಕರನ್ನು ಹೋರಾಟಕ್ಕೆ ಹೊಸದಾಗಿ ನಿಯೋಜಿಸಿರುವ ರಷ್ಯಾ ದೊಡ್ಡಮಟ್ಟದ ಫಿರಂಗಿ ಪಡೆ ಮತ್ತು ರಾಕೆಟ್ ಲಾಂಚರ್​ಗಳೊಂದಿಗೆ ಉಕ್ರೇನ್ ಮೇಲೆ ನಿರ್ಣಾಯಕ ದಾಳಿ ನಡೆಸಲು ಸಿದ್ಧವಾಗಿದೆ. ಯಾವುದೇ ಕ್ಷಣದಲ್ಲಿ ರಷ್ಯಾದ ದಾಳಿ ಆರಂಭವಾಗಬಹುದು ಎಂಬ ಪರಿಸ್ಥಿತಿಯಿದೆ. ಮರಿಯುಪೋಲ್​ಗೆ ವಿಧಿಸಿದ್ದ ದಿಗ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಿರುವ ರಷ್ಯಾ ಸೇನೆಯು ಉಕ್ರೇನ್ ಹೋರಾಟಗಾರರಿಗೆ ಶರಣಾಗಲು ಹೊಸ ಗಡುವು ವಿಧಿಸಿದೆ. ಉಕ್ರೇನ್​ನ ಕ್ರೆಮಿನ್ನಾ ನಗರವನ್ನು ವಶಪಡಿಸಿಕೊಳ್ಳುವಲ್ಲಿ ರಷ್ಯಾ ಸೇನೆ ಯಶಸ್ವಿಯಾಗಿದೆ. ಉಕ್ರೇನ್​ಗೆ ವಾಯುರಕ್ಷಣಾ ವ್ಯವಸ್ಥೆ, ಯುದ್ಧವಿಮಾನ ಸೇರಿದಂತೆ ಹಲವು ಹೊಸ ಯುದ್ಧೋಪಕರಣಗಳನ್ನು ಒದಗಿಸಲು ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಮುಂದೆ ಬಂದಿವೆ.

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಇತ್ತೀಚೆಗೆ ಆದ 10 ಬೆಳವಣಿಗೆಗಳಿವು.

  1. ಉಕ್ರೇನ್​ನ ಮರಿಯುಪೋಲ್ ನಗರದ ಸುತ್ತ ಜಮಾಯಿಸಿರುವ ರಷ್ಯಾ ಸೇನೆಯು ಯಾವುದೇ ಕ್ಷಣದಲ್ಲಿ ನಗರದ ಮೇಲೆ ಸಂಘಟಿತ ದಾಳಿ ನಡೆಸಲು ಸಿದ್ಧವಾಗಿದೆ. ಒಳಗಿರುವ ಉಕ್ರೇನ್ ಪರ ಹೋರಾಟಗಾರರು ಶರಣಾಗಲು ಮತ್ತೊಂದು ಅವಕಾಶ ನೀಡಿರುವ ರಷ್ಯಾ ಸೇನೆಯು, ಕಟ್ಟಡಗಳ ಗೋಡೆಗಳನ್ನು ಸೀಳುವ ಬಂಕರ್ ಬಸ್ಟರ್ ಬಾಂಬ್​ಗಳನ್ನು ಮರಿಯುಪೋಲ್​ನಲ್ಲಿ ಪೇರಿಸಿಕೊಂಡಿದೆ.
  2. ಯುದ್ಧವು ನಿರ್ಣಾಯಕ ಹಂತ ತಲುಪುತ್ತಿರುವಂತೆ ತಮ್ಮ ಉಕ್ರೇನ್ ನೆರವಿಗೆ ಹಲವು ಪ್ರಮುಖ ಹಾಗೂ ಬಲಾಢ್ಯ ದೇಶಗಳು ಧಾವಿಸಿವೆ. ಅಮೆರಿಕ, ಕೆನಡಾ ಮತ್ತು ಬ್ರಿಟನ್ ಹೊಸದಾಗಿ ಫಿರಂಗಿಗಳನ್ನು (ಆರ್ಟಿಲರಿ) ರವಾನಿಸುವುದಾಗಿ ಘೋಷಿಸಿವೆ.
  3. ಉಕ್ರೇನ್​ನ ಯುದ್ಧ ಸಾಮರ್ಥ್ಯ ಹೆಚ್ಚಿಸಲೆಂದು ಅಮೆರಿಕ ಈಗಾಗಲೇ 80 ಕೋಟಿ ಡಾಲರ್ ಮೊತ್ತದಷ್ಟು ನೆರವು ಒದಗಿಸಿತ್ತು. ಮತ್ತೊಂದು ಮಿಲಿಟರಿ ಪ್ಯಾಕೇಜ್ ಘೋಷಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಿಂತನೆ ನಡೆಸಿದ್ದಾರೆ.
  4. ನಮ್ಮ ಮಿತ್ರರಾಷ್ಟ್ರಗಳ ಶಸ್ತ್ರಾಗಾರಗಳಲ್ಲಿ ಹಲವು ವರ್ಷಗಳಿಂದ ಇರುವ ಶಸ್ತ್ರಗಳನ್ನು ನಮಗೆ ಒದಗಿಸಿ ಎಂದು ನಾವು ಇಂದಿಗೂ ಬೇಡಬೇಕಾಗಿದೆ. ಇದು ಅನ್ಯಾಯ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕ ಮತ್ತು ಇತರ ದೇಶಗಳ ನಿಧಾನಗತಿಯ ಧೋರಣೆಯನ್ನು ಖಂಡಿಸಿದ್ದರು.
  5. ಕಲ್ಲಿದ್ದಲು ಮತ್ತು ಉಕ್ಕು ಉತ್ಪಾದಿಸುವ ಪ್ರಮುಖ ಪ್ರಾಂತ್ಯ ಡೊನ್​ಬಾಸ್​ ವಶಪಡಿಸಿಕೊಳ್ಳಲು ರಷ್ಯಾ 2014ರಿಂದಲೂ ಪ್ರಯತ್ನಿಸುತ್ತಲೇ ಇದೆ. ಇದೀಗ ಡೊನ್​ಬಾಸ್​ ಪ್ರದೇಶವನ್ನು ಉಕ್ರೇನ್​ನ ಭಾಗದಿಂದ ಪ್ರತ್ಯೇಕಿಸಿ, ಅಲ್ಲಿರುವ ಹೋರಾಟಗಾರರ ಬಲ ಕಡಿಮೆ ಮಾಡುವ ತಂತ್ರಕ್ಕೆ ರಷ್ಯಾ ಮೊರೆ ಹೋರಿದೆ. ಆದರೆ ಮುಂಚೂಣಿಯಲ್ಲಿರುವ ತನ್ನ ಸೈನಿಕರಿಗೆ ಅಗತ್ಯ ಯುದ್ಧೋಪಕರಣ ಹಾಗೂ ಸಾಮಗ್ರಿಗಳನ್ನು ಒದಗಿಸಲು ರಷ್ಯಾ ಕಷ್ಟಪಡಬೇಕಿದೆ. ಸಾಮಗ್ರಿಗಳನ್ನು ಹೊತ್ತುಬರುವ ವಾಹನಗಳನ್ನು ಗುರಿಯಾಗಿಸಿ ಉಕ್ರೇನ್ ದಾಳಿ ನಡೆಸುತ್ತಿದೆ.
  6. ಉಕ್ರೇನ್ ಮೇಲೆ ಕಳೆದ ಫೆಬ್ರುವರಿ 24ರಂದು ರಷ್ಯಾ ದಾಳಿ ಆರಂಭಿಸಿತ್ತು. ದಾಳಿಯ ಆರಂಭದ ದಿನಗಳಲ್ಲೇ ಮರಿಯುಪೋಲ್ ನಗರಕ್ಕೆ ರಷ್ಯಾ ದಿಬ್ಬಂಧನ ಹಾಕಿತ್ತು. ಆಹಾರ, ನೀರು, ವಿದ್ಯುತ್ ಸೌಕರ್ಯವಿಲ್ಲದೆ ಜನರು ಪರದಾಡುವಂತಾಯಿತು. ನಗರದಲ್ಲಿ ಈವರೆಗೆ ಸುಮಾರು 20,000 ಜನರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
  7. ಉಕ್ರೇನ್ ವಿರುದ್ಧ ರಷ್ಯಾ ಮತ್ತೊಂದು ಸುತ್ತಿನ ಪ್ರಬಲ ದಾಳಿ ಅರಂಭಿಸಿದ್ದರೆ, ಅಮೆರಿಕ ಬಹಿರಂಗವಾಗಿಯೇ ಉಕ್ರೇನ್​ನತ್ತ ಒಲವು ತೋರಿದೆ. ಬ್ರಿಟನ್ ತನ್ನ ಯುದ್ಧನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಈ ಬೆಳವಣಿಗೆಗಳ ನಂತರ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ ಸಾಧ್ಯತೆ ಕ್ಷೀಣಿಸಿದೆ.
  8. ಉಕ್ರೇನ್​ ನೆಲದಲ್ಲಿ ರಷ್ಯಾ ತನ್ನ ಅಣ್ವಸ್ತ್ರಗಳನ್ನು ಬಳಸುವುದಿಲ್ಲ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್​ರೊವ್ ಸ್ಪಷ್ಟಪಡಿಸಿದ್ದಾರೆ. ಸಿಐಎ ಸೇರಿದಂತೆ ಹಲವು ಗುಪ್ತಚರ ಸಂಸ್ಥೆಗಳು ರಷ್ಯಾ ಅಣ್ವಸ್ತ್ರ ಬಳಸಬಹುದು ಎಂದು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಮಹತ್ವ ಪಡೆದಿದೆ.
  9. ಮರಿಯುಪೋಲ್​ನ ಉಕ್ಕು ಘಟಕವನ್ನೇ ನೆಲೆಯಾಗಿಸಿಕೊಂಡಿರುವ ಉಕ್ರೇನ್​ನ ನೌಕಾಪಡೆ ಯೋಧರು ರಷ್ಯಾಕ್ಕೆ ಶರಣಾಗುವುದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನಮಗಿಂತಲೂ 10 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಅವರು ಬಂದಿದ್ದಾರೆ. ಇನ್ನೂ ಕೆಲ ದಿನಗಳ ಕಾಲ ನಾವು ಹೋರಾಟ ಮುಂದುವರಿಸಬಹುದು. ನಮ್ಮನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ವಿಶ್ವಸಮುದಾಯ ಆರಂಭಿಸಬೇಕು. ತಟಸ್ಥ ದೇಶಕ್ಕೆ ನಮ್ಮನ್ನು ಕರೆದೊಯ್ಯಬೇಕು ಎಂದು ಉಕ್ರೇನ್​ನ ಕಮಾಂಡರ್ ಮನವಿ ಮಾಡಿದ್ದಾರೆ.
  10. ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿರುವ ಐರೋಪ್ಯ ದೇಶಗಳ 31 ರಾಜತಾಂತ್ರಿಕರನ್ನು ರಷ್ಯಾ ಉಚ್ಚಾಟಿಸಿದೆ. ಇವರೆಲ್ಲರೂ ಬೆಲ್ಜಿಯಂ ಮತ್ತು ನೆದರ್​ಲೆಂಡ್ಸ್​ ರಾಜತಾಂತ್ರಿಕ ಕಚೇರಿ ಸಿಬ್ಬಂದಿ.

ಇದನ್ನೂ ಓದಿ: 2ನೇ ಹಂತಕ್ಕೆ ಯುದ್ಧ: ರಷ್ಯಾದಿಂದ ಮತ್ತೆ ತೀವ್ರ ದಾಳಿ, ಉಕ್ರೇನ್ ಪರ ದೃಢವಾಗಿ ನಿಂತ ಅಮೆರಿಕ, ಐರೋಪ್ಯ ಒಕ್ಕೂಟ

ಇದನ್ನೂ ಓದಿ: ಕೂಡಲೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ: ಉಕ್ರೇನ್​ ಸೈನಿಕರಿಗೆ ಎಚ್ಚರಿಕೆ ನೀಡಿದ ರಷ್ಯಾ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್