RCB: ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಎದುರಾಳಿ ಯಾರು?, ಪಂದ್ಯ ಯಾವಾಗ?, ಎಲ್ಲಿ: ಇಲ್ಲಿದೆ ಮಾಹಿತಿ
IPL 2022 Playoffs: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ 8ನೇ ಬಾರಿಗೆ ಪ್ಲೇ-ಆಫ್ ತಲುಪಿದ ಸಾಧನೆ ಮಾಡಿದೆ. ಆರ್ಸಿಬಿ ಆಡಲಿರುವ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ. ಗೆದ್ದರೆ ಮುಂದಿನ ಹಂತಕ್ಕೆ ಸೋತರೆ ನೇರವಾಗಿ ಮನೆಗೆ.
ಐಪಿಎಲ್ 2022ರಲ್ಲಿ (IPL 2022) ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ (MI vs DC) ಕೊನೆಯ ಓವರ್ನಲ್ಲಿ ಗೆಲುವು ಸಾಧಿಸುವ ಮೂಲಕ ಆರ್ಸಿಬಿ ಪ್ಲೇ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ ಮೂಲಕ ಅದ್ಭುತ ಪ್ರದರ್ಶನ ತೋರಿದ ರೋಹಿತ್ ಹುಡುಗರು 15ನೇ ಆವೃತ್ತಿಯ ಐಪಿಎಲ್ಗೆ ಗೆಲುವಿನ ಮೂಲಕ ವಿದಾಯ ಹೇಳಿದರು. ಇದರ ಜೊತೆಗೆ ಆರ್ಸಿಬಿ (RCB) ತಂಡವನ್ನು ಪ್ಲೇ ಆಫ್ಗೆ ತಲುಪಿಸಿ ಬಿಟ್ಟರು. ಆಡಿದ 14 ಪಂದ್ಯಗಳಲ್ಲಿ ಆರರಲ್ಲಿ ಸೋಲು ಎಂಟರಲ್ಲಿ ಗೆಲುವು ಕಂಡಿರುವ ಬೆಂಗಳೂರು 16 ಅಂಕದೊಂದಿಗೆ -0.253 ರನ್ ರೇಟ್ ಹೊಂದಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ 8ನೇ ಬಾರಿಗೆ ಪ್ಲೇ-ಆಫ್ ತಲುಪಿದ ಸಾಧನೆ ಮಾಡಿದೆ. ಆರ್ಸಿಬಿ ಆಡಲಿರುವ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ. ಗೆದ್ದರೆ ಮುಂದಿನ ಹಂತಕ್ಕೆ ಸೋತರೆ ನೇರವಾಗಿ ಮನೆಗೆ.
ಹೌದು, ಆರ್ಸಿಬಿ ಮುಂದೆ ಎಲಿಮಿನೇಟರ್ ಪಂದ್ಯ ಆಡಲಿದೆ. ಅದು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ವಿರುದ್ಧ. ಈ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೇ 25 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಸಾಲದು. ಫೈನಲ್ಗೆ ಎಂಟ್ರಿ ಪಡೆಯಬೇಕಾದರೆ ಮತ್ತೊಂದು ಪಂದ್ಯವನ್ನೂ ಗೆಲ್ಲಬೇಕು. ಎಲಿಮಿನೇಟರ್ನಲ್ಲಿ ಲಖನೌ ವಿರುದ್ಧ ಗೆದ್ದ ಬಳಿಕ, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್ನಲ್ಲಿ ಸೋತ ತಂಡದ ವಿರುದ್ಧ ಸೆಣೆಸಾಟ ನಡೆಸಬೇಕಿದೆ. ಇಲ್ಲೂ ಗೆದ್ದರೆ ಫೈನಲ್ ಟಿಕೆಟ್ ಸಿಗಲಿದೆ.
ಗುಜರಾತ್ ಟೈಟಾನ್ಸ್ ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ. ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರ ದ್ವಿತೀಯ ಸ್ಥಾನ ಪಡೆದ ನಂತರ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆಶಾವಾದ ಇಟ್ಟುಕೊಂಡಿದ್ದಾರೆ. ಇವರಿಬ್ಬರು ನಡುವೆ ಮೇ 24, ಮಂಗಳವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಜರುಗಲಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ ಮೂರನೇ ಸ್ಥಾನದಲ್ಲಿದೆ. ಕ್ವಾಲಿಫೈಯರ್ 1ರಲ್ಲಿ ಸೋತವರು ಎಲಿಮಿನೇಟರ್ ವಿಜೇತರನ್ನು ಎದುರಿಸುವ ಕ್ವಾಲಿಫೈಯರ್ 2 ಪಂದ್ಯ ಮೇ 27ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
Rishabh Pant: ಡಿಆರ್ಎಸ್ ಏಕೆ ತೆಗೆದುಕೊಳ್ಳಲಿಲ್ಲ ಪ್ರಶ್ನೆಗೆ ರಿಷಭ್ ಪಂತ್ ನೀಡಿದ ಉತ್ತರವೇನು ನೋಡಿ
ಈ ಬಾರಿ ಬಿಸಿಸಿಐ ಫೈನಲ್ ಪಂದ್ಯದ ಸಮಯವನ್ನು ಬದಲಾವಣೆ ಮಾಡಿದೆ. ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ರಾತ್ರಿ 7:30ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 29ರಂದು ನಡೆಯಲಿರುವ ಫೈನಲ್ ಪಂದ್ಯ ರಾತ್ರಿ 8:00 ಗಂಟೆಗೆ (ಭಾರತೀಯ ಕಾಲಮಾನ) ಏರ್ಪಡಿಸಲಾಗಿದೆ.
ಲೆಕ್ಕಕ್ಕಿಲ್ಲದ ಇಂದಿನ ಪಂದ್ಯ:
ಐಪಿಎಲ್ನಲ್ಲಿಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಸೆಣೆಸಾಟ ನಡೆಯಲಿದೆ. ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸೋತರೂ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಈ ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವುದರಿಂದ ಇದರ ಫಲಿತಾಂಶದ ಬಗ್ಗೆ ಯಾರೂ ಕುತೂಹಲ ಹೊಂದಿಲ್ಲ. ಇದು ಲೆಕ್ಕದ ಭರ್ತಿಯ ಮ್ಯಾಚ್, ಅಷ್ಟೇ. ಆದರೆ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಹೇಳುವುದು ಎರಡೂ ತಂಡಗಳ ಗುರಿ ಆಗಿರುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಇದು ಪಂಜಾಬ್ ಪಾಲಿಗೆ ಸೇಡಿನ ಪಂದ್ಯವೂ ಹೌದು. ಮೊದಲ ಸುತ್ತಿನ ಮುಖಾಮುಖಿಯಲ್ಲಿ ಹೈದರಾಬಾದ್ 7 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿತ್ತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.