IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!

IPL 2022 Playoffs Format: ಪಾಯಿಂಟ್ಸ್​ ಟೇಬಲ್​ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯವಾಡುವ ಮುಖ್ಯ ಲಾಭವೆಂದರೆ ಗೆದ್ದರೆ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದು.

IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!
IPL 2022 Playoffs
Image Credit source: SportsTiger.com
TV9kannada Web Team

| Edited By: Zahir PY

May 22, 2022 | 2:35 PM

IPL 2022: ಐಪಿಎಲ್ ಸೀಸನ್​ 15 ನಲ್ಲಿ 4 ತಂಡಗಳು ಪ್ಲೇಆಫ್ ಪ್ರವೇಶಿಸಿದೆ. ಅದರಂತೆ ಗುಜರಾತ್ ಟೈಟನ್ಸ್ (GT)​, ರಾಜಸ್ಥಾನ್ ರಾಯಲ್ಸ್ (RR), ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡಗಳು ಪ್ಲೇಆಫ್ಸ್​ ಆಡಲಿದೆ. ಇಲ್ಲಿ ಮೊದಲು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅಂದರೆ ಪಾಯಿಂಟ್ಸ್​ ಟೇಬಲ್​ನಲ್ಲಿ 1 ಮತ್ತು 2ನೇ ಸ್ಥಾನ ಪಡೆದ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ಮೇ 24 ರಂದು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ.

ಇನ್ನು ಮೇ 25 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹಾಗೆಯೇ ಗೆದ್ದ ತಂಡವು ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋತ ತಂಡದ ಜೊತೆ, ಅಂದರೆ ಗುಜರಾತ್ ಟೈಟನ್ಸ್ ಅಥವಾ ರಾಜಸ್ಥಾನ್ ರಾಯಲ್ಸ್ ವಿರುದ್ದ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.

ಹಾಗೆಯೇ ಎಲಿಮಿನೇಟರ್ ಪಂದ್ಯವಾಡುವ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ಗೆ ಇದು ನಿರ್ಣಾಯಕ ಪಂದ್ಯವಾಗಿರಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತರೆ ಆ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿ ಮೇ 25 ರಂದು ನಡೆಯುವ ಎಲಿಮಿನೇಟರ್ ಪಂದ್ಯದ ಬಳಿಕ ಆರ್​ಸಿಬಿ ಅಥವಾ ಲಕ್ನೋ ಸೂಪರ್ ಜೈಂಟ್ಸ್​ ಐಪಿಎಲ್​ನಿಂದ ಹೊರಬೀಳಲಿದೆ.

ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಕ್ಕೆ ಡಬಲ್ ಚಾನ್ಸ್:

ಪಾಯಿಂಟ್ಸ್​ ಟೇಬಲ್​ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯವಾಡುವ ಮುಖ್ಯ ಲಾಭವೆಂದರೆ ಗೆದ್ದರೆ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದು. ಈ ಬಾರಿ ಗುಜರಾತ್ ಟೈಟನ್ಸ್​ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್​ 2ನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳುವುದಿಲ್ಲ. ಬದಲಾಗಿ ಮತ್ತೊಂದು ಚಾನ್ಸ್ ಸಿಗಲಿದೆ.

ಅದರಂತೆ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡಕ್ಕೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ.

ಇಲ್ಲಿ ಮೊದಲ ಅವಕಾಶದಲ್ಲಿ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್​ಗೆ ಎಂಟ್ರಿ ಕೊಡುವ ಚಾನ್ಸ್ ಮೊದಲ ಕ್ವಾಲಿಫೈಯರ್​ ಪಂದ್ಯವಾಡುವ ತಂಡಗಳಿಗೆ ಇರಲಿದೆ. ಅಂದರೆ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡಗಳಿಗೆ ಫೈನಲ್​ ಪ್ರವೇಶಿಸಲು ಎರಡು ಅವಕಾಶ ಸಿಗಲಿದೆ. ಮತ್ತೊಂದೆಡೆ ಎಲಿಮಿನೇಟರ್ ಪಂದ್ಯವಾಡುವ ಆರ್​ಸಿಬಿ-ಲಕ್ನೋ ತಂಡಗಳಲ್ಲಿ ಸೋತ ತಂಡ ನೇರವಾಗಿ ಐಪಿಎಲ್​ನಿಂದ ಹೊರಬೀಳಲಿದೆ.

ಒಂದಾರ್ಥದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಸದ್ಯ ಸೇಫ್ ಝೋನ್​ನಲ್ಲಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಸೋತರೂ ಈ ತಂಡಗಳಿಗೆ ಮತ್ತೊಂದು ಅವಕಾಶ ದೊರೆಯಲಿದೆ. ಹೀಗಾಗಿ ಮೇ 24 ರಂದು ನಡೆಯುವ ಮೊದಲ ಕ್ವಾಲಿಫೈಯರ್ ಫಲಿತಾಂಶದ ಬೆನ್ನಲ್ಲೇ ಈ ಸಲ ಫೈನಲ್ ಆಡುವ ಒಂದು ತಂಡ ನಿರ್ಧಾರವಾಗಲಿದೆ. ಆದರೆ ಮತ್ತೊಂದು ತಂಡ ಯಾವುದೆಂದು ತಿಳಿಯಲು ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳು ಮುಗಿಯಬೇಕು.

IPL 2022 ಪ್ಲೇ-ಆಫ್‌ ವೇಳಾಪಟ್ಟಿ: ಮೇ 24: ಕ್ವಾಲಿಫೈಯರ್ 1: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ – ( ಸಮಯ- 7:30 PM (ಕೋಲ್ಕತ್ತಾ ಈಡನ್ಸ್ ಗಾರ್ಡನ್ ಮೈದಾನ)

ಮೇ 25: ಎಲಿಮಿನೇಟರ್: ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -( ಸಮಯ- 7:30 PM (ಕೋಲ್ಕತ್ತಾ ಈಡನ್ಸ್ ಗಾರ್ಡನ್ ಮೈದಾನ)

ಮೇ 27: ಕ್ವಾಲಿಫೈಯರ್ 2: ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ – ( ಸಮಯ- 7:30 PM (ಅಹಮದಾಬಾದ್ ನರೇಂದ್ರ ಮೋದಿ ಮೈದಾನ)

ಮೇ 29- ಫೈನಲ್ ಪಂದ್ಯ: ಕ್ವಾಲಿಫೈಯರ್ 1 ನಲ್ಲಿ ಗೆದ್ದ ತಂಡ vs ಕ್ವಾಲಿಫೈಯರ್ 2 ನಲ್ಲಿ ಗೆದ್ದ ತಂಡ – ( ಸಮಯ- 8 PM (ಅಹಮದಾಬಾದ್ ನರೇಂದ್ರ ಮೋದಿ ಮೈದಾನ)

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada