ಬಾಲಿವುಡ್ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಸಿನಿಮಾ ಸೋತಿದೆ. ಜನರು ಚಿತ್ರವನ್ನು ಮೆಚ್ಚಿಕೊಳ್ಳಲಿಲ್ಲ. ಈ ಬಗ್ಗೆಯೂ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.
ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಇತ್ತೀಚೆಗೆ ಕೊವಿಡ್ ಅಂಟಿತ್ತು. ಈ ಕಾರಣಕ್ಕೆ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಅವರು ‘ಪೃಥ್ವಿರಾಜ್’ ಸಿನಿಮಾದಲ್ಲಿ (Prithviraj Movie) ನಟಿಸಿದ್ದು, ಜೂನ್ 3ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಸಿನಿಮಾ ಪ್ರಚಾರಕ್ಕೆ ತೆರಳಲು ಸಾಧ್ಯವಾಗಿಲ್ಲ. ಈಗ ಅವರು ಕೊವಿಡ್ನಿಂದ ರಿಕವರಿ ಆಗಿದ್ದು, ಸಿನಿಮಾ ಪ್ರಮೋಷನ್ನಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ದಕ್ಷಿಣ ಸಿನಿಮಾ vs ಬಾಲಿವುಡ್ ಚರ್ಚೆ ಬಗ್ಗೆ ಮಾತನಾಡಿದ್ದಾರೆ.
‘ನಾನು ಈ ವಿಭಜನೆಯನ್ನು ನಂಬುವುದಿಲ್ಲ. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಹಾಗೂ ಉತ್ತರ ಭಾರತ ಇಂಡಸ್ಟ್ರಿ ಎಂದು ಯಾರಾದರೂ ಡಿವೈಡ್ ಮಾಡಿ ಮಾತನಾಡಿದರೆ ನನಗೆ ಸಿಟ್ಟೇ ಬರುತ್ತದೆ. ನಾವೆಲ್ಲರೂ ಒಂದು. ಈ ಪ್ರಶ್ನೆಯನ್ನು ಕೇಳುವುದನ್ನು ನಾವು ನಿಲ್ಲಿಸಬೇಕು. ಬ್ರಿಟಿಷರು ಬಂದು ನಮ್ಮನ್ನು ವಿಭಜಿಸಿದರು, ನಮ್ಮ ಮೇಲೆ ಆಕ್ರಮಣ ಮಾಡಿದರು ಮತ್ತು ನಮ್ಮನ್ನು ಆಳಿದರು. ನಾವು ಅದರಿಂದ ಪಾಠವನ್ನು ಕಲಿತಂತೆ ಕಾಣುತ್ತಿಲ್ಲ. ನಮಗೆ ಇನ್ನೂ ಅರ್ಥವಾಗುತ್ತಿಲ್ಲ. ನಾವೆಲ್ಲರೂ ಒಂದೇ ಎಂದು ಭಾವಿಸಿದ ದಿನ ಎಲ್ಲವೂ ಸರಿಯಾಗುತ್ತದೆ ಎಂಬುದು ನನ್ನ ಭಾವನೆ’ ಎಂದಿದ್ದಾರೆ ಅವರು.
‘ಬಚ್ಚನ್ ಪಾಂಡೆ’ ರಿಮೇಕ್ ಸಿನಿಮಾ. ಈ ಬಗ್ಗೆ ಮಾತನಾಡಿರುವ ಅವರು, ‘ರಿಮೇಕ್ ಸಿನಿಮಾಗಳನ್ನು ಏಕೆ ಮಾಡುತ್ತಿದ್ದೇನೆ ಎಂದು ನನ್ನನ್ನು ಪ್ರಶ್ನಿಸಲಾಯಿತು. ನಾನೇಕೆ ರಿಮೇಕ್ ಮಾಡಬಾರದು? ಅದರಲ್ಲಿ ಇರುವ ಸಮಸ್ಯೆ ಏನು? ನನ್ನ ‘ರೌಡಿ ರಾಠೋರ್’ ರಿಮೇಕ್ ಸಿನಿಮಾ. ಅದರಿಂದ ಆದ ಸಮಸ್ಯೆ ಆದರೂ ಏನು? ದಕ್ಷಿಣ ಭಾರತದಲ್ಲಿ ಉತ್ತಮ ಸಿನಿಮಾಗಳಿದ್ದರೆ ನಾವು ಅದರ ಹಕ್ಕುಗಳನ್ನು ತೆಗೆದುಕೊಂಡು ಇಲ್ಲಿ ರೀಮೇಕ್ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಭೆಗಳು ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಖಂಡಿತವಾಗಿಯೂ ನಮ್ಮಲ್ಲಿ ಪ್ರತಿಭೆ ಇದೆ. ನಮಗೆ ಕಥೆ ಇಷ್ಟವಾದರೆ ಅದನ್ನು ಹಿಂದಿಗೆ ಏಕೆ ರಿಮೇಕ್ ಮಾಡಬಾರದು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಸಿನಿಮಾ ಟೈಟಲ್ ಸೂಚಿಸಿ ಎಂದ ಅಕ್ಷಯ್ ಕುಮಾರ್; ಯಾವ ಚಿತ್ರಕ್ಕೆ?
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಸಿನಿಮಾ ಸೋತಿದೆ. ಜನರು ಚಿತ್ರವನ್ನು ಮೆಚ್ಚಿಕೊಳ್ಳಲಿಲ್ಲ. ಈ ಬಗ್ಗೆಯೂ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ‘ನಮ್ಮ ಬೇಸರದ ಮುಖವನ್ನು ಎಲ್ಲ ಕಡೆಗಳಲ್ಲೂ ಹೊತ್ತುಕೊಂಡು ಓಡಾಡಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.