ಮಂಡ್ಯದಲ್ಲಿ ಸನ್ನಿ ಬರ್ತ್​ಡೇ ಬಲುಜೋರು; ರಕ್ತದಾನ ಮಾಡಿ, ಕೇಕ್​ ಕತ್ತರಿಸಿ, ಬಿರಿಯಾನಿ ಹಂಚಿದ ಫ್ಯಾನ್ಸ್​

ಮಂಡ್ಯದಲ್ಲಿ ಸನ್ನಿ ಬರ್ತ್​ಡೇ ಬಲುಜೋರು; ರಕ್ತದಾನ ಮಾಡಿ, ಕೇಕ್​ ಕತ್ತರಿಸಿ, ಬಿರಿಯಾನಿ ಹಂಚಿದ ಫ್ಯಾನ್ಸ್​
ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರಿಂದ ಹಲವು ಒಳ್ಳೆಯ ಕೆಲಸಗಳು ಅವರಿಂದ ಆಗಿವೆ. ಸನ್ನಿ ಅವರ ಈ ಕಾರ್ಯಕ್ಕೆ ಮಂಡ್ಯದಲ್ಲಿ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

TV9kannada Web Team

| Edited By: Rajesh Duggumane

May 13, 2022 | 7:40 PM

ನಟಿ ಸನ್ನಿ ಲಿಯೋನ್ (Sunny Leone) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇಂದು (ಮೇ 13) ಅವರ ಬರ್ತ್​​ಡೇ. ಆ ಪ್ರಯುಕ್ತ ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ವಿಶೇಷ ಎಂದರೆ ಸನ್ನಿ ಲಿಯೋನ್​ಗೆ ಮಂಡ್ಯದಲ್ಲಿ (Mandya) ದೊಡ್ಡ ಅಭಿಮಾನಿ ಬಳಗ ಇದೆ. ಅಲ್ಲಿ ಸಂಭ್ರಮದಿಂದ ಬರ್ತ್​ಡೇ ಆಚರಣೆ ಮಾಡಲಾಗಿದೆ. ಕೇಕ್​ ಕತ್ತರಿಸಿ, ಬಿರಿಯಾನಿ ಹಂಚಿ ಹುಟ್ಟುಹಬ್ಬ ಆಚರಿಸಲಾಗಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಒಂದು ಕಾಲದಲ್ಲಿ ನೀಲಿ ಚಿತ್ರ ಲೋಕದಲ್ಲಿ ಸನ್ನಿ ಕೆಲಸ ಮಾಡಿದ್ದರು. ನಂತರ ಅವರು ಬಾಲಿವುಡ್​ಗೆ ಕಾಲಿಟ್ಟು ಬೇರೆ ಇಮೇಜ್​ ಪಡೆದುಕೊಂಡರು. ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡಿ ಫೇಮಸ್​ ಆದರು. ಅನೇಕ ಚಿತ್ರಗಳಿಗೆ ಅವರು ಹೀರೋಯಿನ್​ ಆಗಿಯೂ ನಟಿಸಿದರು. ಸಿನಿಮಾ ಕೆಲಸಗಳ ಮಧ್ಯೆ ಅವರು ಹಲವು ಸಾಮಾಜಿಕ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಸನ್ನಿ ಲಿಯೋನ್​ ಮತ್ತು ಅವರ ಪತಿ ಡೇನಿಯಲ್​ ವೆಬರ್​ ಅವರು ಅನಾಥ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮಗುವಿಗೆ ನಿಶಾ ಕೌರ್ ಎಂದು ಹೆಸರು ಇಟ್ಟಿದ್ದಾರೆ. ಇನ್ನೂ ಹಲವು ಒಳ್ಳೆಯ ಕೆಲಸಗಳು ಅವರಿಂದ ಆಗಿವೆ. ಸನ್ನಿ ಅವರ ಈ ಕಾರ್ಯಕ್ಕೆ ಮಂಡ್ಯದಲ್ಲಿ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

ಮಂಡ್ಯದಲ್ಲಿ ಸನ್ನಿ ಲಿಯೋನ್ ಬರ್ತ್ ಡೇ ಜೋರಾಗಿ ನಡೆದಿದೆ. ಅಭಿಮಾನಿಗಳಿಂದ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅನೇಕರು ರಕ್ತ ನೀಡಿ, ಜೀವ ಉಳಿಸಿ ಎನ್ನುವ ಸಂದೇಶ ಕೊಟ್ಟರು. ಇನ್ನು, ಅಭಿಮಾನಿಗಳಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಸನ್ನಿ ಬರ್ತ್​ಡೇ ದಿನ ಬಾಡೂಟ ಸವಿದು ಫ್ಯಾನ್ಸ್ ಖುಷಿಯಾಗಿದ್ದಾರೆ. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಗ್ರಾಮದ ಹೆಬ್ಬಾಗಿನಲ್ಲಿ 20 ಅಡಿಗೂ ಉದ್ದದ ಸನ್ನಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ‘ಬಡಮಕ್ಕಳ ತಾಯಿ, ಅಭಿಮಾನಿಗಳ ದೇವತೆ’ ಎಂದು ಸನ್ನಿ ಅವರನ್ನು ಬಣ್ಣಿಸಲಾಗಿದೆ. ಈ ಫ್ಲೆಕ್ಸ್ ಫೋಟೋ ಕೂಡ ವೈರಲ್ ಆಗುತ್ತಿದೆ.

ಕಳೆದ ವರ್ಷವೂ ಮಂಡ್ಯದಲ್ಲಿ ಸನ್ನಿ ಬರ್ತ್​ಡೇ ಆಚರಣೆ ಮಾಡಲಾಗಿತ್ತು. ಸನ್ನಿ ಫ್ಲೆಕ್ಸ್ ಹಾಕಿ ಸಂಭ್ರಮಿಸಲಾಗಿತ್ತು. ಸ್ವತಃ ಸನ್ನಿ ಲಿಯೋನ್ ಅವರು ಈ ಫೋಟೋವನ್ನು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ಅವರು ಖುಷಿಪಟ್ಟಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada