18ನೇ ವಯಸ್ಸಿಗೆ ಮದುವೆ, ನಿರಂತರ ಕಿರುಕುಳ; ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಯುವನಟಿಯ ಆತ್ಮಹತ್ಯೆ

18ನೇ ವಯಸ್ಸಿಗೆ ಮದುವೆ, ನಿರಂತರ ಕಿರುಕುಳ; ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಯುವನಟಿಯ ಆತ್ಮಹತ್ಯೆ
ಶಹಾನಾ

ಕೋಯಿಕ್ಕೋಡ್ ಪರಂಬಿಲ್ ಬಜಾರ್​ನಲ್ಲಿ ಫ್ಲಾಟ್ ಒಂದನ್ನು ಶಹಾನಾ ಬಾಡಿಗೆಗೆ ತೆಗೆದುಕೊಂಡಿದ್ದರು. ಅವರು ಅಲ್ಲಿಯೇ ವಾಸವಾಗಿದ್ದರು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

May 13, 2022 | 4:53 PM

ಕೇರಳ ಮೂಲದ ಮಾಡೆಲ್ ಹಾಗೂ ನಟಿ ಶಹಾನಾ ಅವರ (Shahana) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ನಟಿ 20ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಸರಗೋಡಿನ (Kasaragod) ಚೆರುವತ್ತೂರ್​ನಲ್ಲಿ ಶಹಾನಾ ತಂದೆ-ತಾಯಿ ವಾಸವಾಗಿದ್ದಾರೆ. ಈ ಪ್ರಕರಣದಲ್ಲಿ ಶಹಾನಾ ಅವರ ಪತಿಯ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಹಾನಾ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಕೋಯಿಕ್ಕೋಡ್ ಪರಂಬಿಲ್ ಬಜಾರ್​ನಲ್ಲಿ ಫ್ಲಾಟ್ ಒಂದನ್ನು ಶಹಾನಾ ಬಾಡಿಗೆಗೆ ತೆಗೆದುಕೊಂಡಿದ್ದರು. ಅವರು ಅಲ್ಲಿಯೇ ವಾಸವಾಗಿದ್ದರು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಅಸಹಜಸಾವು ಎಂದು ಪರಿಗಣಿಸಿದ್ದಾರೆ. ಶಹಾನಾ ಪತಿ ಸಾಜದ್ ಬಗ್ಗೆ ಈಗ ಅನುಮಾನ ಮೂಡಿಸಿದೆ. ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಸಾಜದ್ ಹಾಗೂ ಶಹಾನಾ ಸುಮಾರು ಒಂದೂವರೆ ವರ್ಷಗಳ ಹಿಂದೆ ಮದುವೆ ಆಗಿದ್ದರು. ಆಗ ಶಹಾನಾಗೆ 18 ವರ್ಷ ವಯಸ್ಸು. ಈ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವರಿಬ್ಬರು ಮದುವೆ ಆದ ನಂತರದಲ್ಲಿ ಸುಖವಾಗಿ ಇರಲಿಲ್ಲ. ಹಣ ನೀಡುವಂತೆ ಶಹಾನಾಗೆ ಸಾಜದ್ ಸದಾ ಪೀಡಿಸುತ್ತಿದ್ದ. ಇದು ನೆರೆಯವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಈಗ ಶಹಾನಾ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶಹಾನಾಗೆ ಸಾಜದ್ ತುಂಬಾನೇ ನಿರ್ಬಂಧ ಹೇರುತ್ತಿದ್ದ. ನಟಿಯ ಕುಟುಂಬದ ಯಾರೊಬ್ಬರೂ ಮನೆಗೆ ಬರಲು ಅವಕಾಶ ನೀಡುತ್ತಿರಲಿಲ್ಲ. ದೂರವಾಣಿ ಕರೆ ಮಾಡಲು ಕೂಡ ಶಹಾನಾಗೆ ಅವಕಾಶ ಇರಲಿಲ್ಲ. ಇದರ ಜತೆಗೆ ಆತ ಕಿರುಕುಳ ಕೂಡ ನೀಡುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಶಹಾನಾ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಅನುಮಾನ ಹುಟ್ಟಿದೆ.

ಶಹಾನಾ ಮಾಡೆಲ್ ಆಗಿದ್ದರು. ನಂತರ ಬಣ್ಣದ ಲೋಕದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಅವರ ಸಾವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ವ್ಯಕ್ತಪಡಿಸಲಾಗುತ್ತಿದೆ. ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಜನಸಾಮಾನ್ಯರು ಒತ್ತಾಯ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada