AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone Birthday: ಮಾದಕ ತಾರೆ ಸನ್ನಿ ಲಿಯೋನ್​ ಜನ್ಮದಿನ: ಪಡ್ಡೆಗಳ ಫೇವರಿಟ್​ ನಟಿ ಬಗ್ಗೆ ಇಲ್ಲಿದೆ ಕೆಲವು ಇಂಟರೆಸ್ಟಿಂಗ್​ ವಿಷಯ

Sunny Leone: ಖ್ಯಾತ ನಟಿ ಸನ್ನಿ ಲಿಯೋನ್ ಅವರಿಗೆ ಮೇ 13ರಂದು ಹುಟ್ಟುಹಬ್ಬದ ಸಡಗರ.​ ಜನ್ಮದಿನದ ಪ್ರಯುಕ್ತ ಅವರಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

Sunny Leone Birthday: ಮಾದಕ ತಾರೆ ಸನ್ನಿ ಲಿಯೋನ್​ ಜನ್ಮದಿನ: ಪಡ್ಡೆಗಳ ಫೇವರಿಟ್​ ನಟಿ ಬಗ್ಗೆ ಇಲ್ಲಿದೆ ಕೆಲವು ಇಂಟರೆಸ್ಟಿಂಗ್​ ವಿಷಯ
ಸನ್ನಿ ಲಿಯೋನ್​
TV9 Web
| Edited By: |

Updated on: May 13, 2022 | 9:44 AM

Share

ಒಂದು ಕಾಲದಲ್ಲಿ ಅಶ್ಲೀಲ ಸಿನಿಮಾ ಜಗತ್ತಿನಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ಸನ್ನಿ ಲಿಯೋನ್ (Sunny Leone)​. ನಂತರ ಅವರು ಬಾಲಿವುಡ್​ಗೆ ಕಾಲಿಟ್ಟು ಬೇರೆ ಇಮೇಜ್​ ಪಡೆದುಕೊಂಡರು. ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡಿ ಫೇಮಸ್​ ಆದರು. ಅನೇಕ ಚಿತ್ರಗಳಿಗೆ (Sunny Leone Movies) ಅವರು ಹೀರೋಯಿನ್​ ಆಗಿಯೂ ನಟಿಸಿದರು. ನೀಲಿ ಚಿತ್ರಗಳಿಗೆ ಸಂಪೂರ್ಣ ವಿದಾಯ ಹೇಳಿದ ಅವರು ಮತ್ತೆ ಆ ಕಡೆ ತಲೆ ಹಾಕಿಲ್ಲ. ಮಾಜಿ ನೀಲಿ ತಾರೆ ಎಂಬ ಕಾರಣಕ್ಕೆ ಅವರನ್ನು ಆಗಾಗ ಜನರು ಟೀಕಿಸುತ್ತಾರೆ. ಅವರ ಜೊತೆ ಸಿನಿಮಾ ಮಾಡಲು ಕೆಲವು ಕಲಾವಿದರು ಹಿಂದೇಟು ಹಾಕುತ್ತಾರೆ. ಆ ಎಲ್ಲ ಸವಾಲುಗಳನ್ನು ಎದುರಿಸಿ ಸನ್ನಿ ಲಿಯೋನ್​ ಅವರು ಈಗ ಬಾಲಿವುಡ್​ನಲ್ಲಿ ಯಶಸ್ವಿ ನಟಿ ಆಗಿದ್ದಾರೆ. ಇಂದು (ಮೇ 13) ಅವರಿಗೆ ಜನ್ಮದಿನದ (Sunny Leone Birthday) ಸಂಭ್ರಮ. ಆ ಪ್ರಯುಕ್ತ ಎಲ್ಲರೂ ಅವರಿಗೆ ಶುಭ ಕೋರುತ್ತಿದ್ದಾರೆ. ಸನ್ನಿ ಲಿಯೋನ್​ ಜೀವನದ ಕುರಿತು ಇಂಟರೆಸ್ಟಿಂಗ್​ ಮಾಹಿತಿಗಳನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ.

ಪಡ್ಡೆ ಹುಡುಗರಿಗೆ ಸನ್ನಿ ಲಿಯೋನ್​ ಅಚ್ಚುಮೆಚ್ಚು. ಸನ್ನಿಯ ಮಾದಕ ನೋಟಕ್ಕೆ ಫಿದಾ ಆದ ಎಷ್ಟೋ ಹುಡುಗರು ತಮ್ಮ ಊರುಗಳಲ್ಲಿ ಬ್ಯಾನರ್​, ಫ್ಲೆಕ್ಸ್​ ಹಾಕಿ ಅವರ ಹುಟ್ಟುಹಬ್ಬ ಆಚರಿಸಿದ ಉದಾಹರಣೆ ಕೂಡ ಇದೆ. ಈ ಹಿಂದೆ ಸನ್ನಿ ಲಿಯೋನ್​ ಅವರು ಕೇರಳಕ್ಕೆ ಭೇಟಿ ನೀಡಿದಾಗ ಅವರನ್ನು ನೋಡಲು ಜನಸಾಗರವೇ ಸೇರಿದ್ದು ಸುದ್ದಿ ಆಗಿತ್ತು. ಈ ಪರಿ ಸ್ಟಾರ್​ ಮೆರುಗು ಹೊಂದಿರುವ ಸನ್ನಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ..

  1. ಸನ್ನಿ ಲಿಯೋನ್​ ಜನಿಸಿದ್ದು ಕೆನಡಾದಲ್ಲಿ. ಅವರದ್ದು ಮೂಲತಃ ಪಂಜಾಬಿ ಕುಟುಂಬ. ಸನ್ನಿ ಲಿಯೋನ್​ ಮೊದಲ ಹೆಸರು ಕರೆಂಜಿತ್​ ಕೌರ್​ ವೋಹ್ರಾ.
  2. ಚಿಕ್ಕ ವಯಸ್ಸಿನಲ್ಲೇ ಸನ್ನಿ ಲಿಯೋನ್​ ಕೆಲಸ ಮಾಡಲು ಆರಂಭಿಸಿದರು. 15ರ ಪ್ರಾಯದಲ್ಲಿ ಅವರು ಜರ್ಮನ್​ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು.
  3. ಇದನ್ನೂ ಓದಿ
    Image
    ‘ನೀವು ಮಗಳನ್ನು ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್​’; ಅಭಿಮಾನಿ ಮಾತಿಗೆ ಸನ್ನಿ ಲಿಯೋನ್​ ಉತ್ತರ ಏನು?
    Image
    ‘ದಯವಿಟ್ಟು ತಪ್ಪು ತಿಳಿಯಬೇಡಿ’; ಮಧ್ಯರಾತ್ರಿ ಆದ ಬಳಿಕ ಸನ್ನಿ ಲಿಯೋನ್​ ಮನೆಗೆ ಹೋಗಿದ್ದ ಖ್ಯಾತ ಗಾಯಕ
    Image
    ನಿಮ್ಮ ಪರ್ಸನಲ್​ ಮೆಸೇಜ್​ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್​ ಉಪಾಯ
    Image
    ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​
  4. ನರ್ಸಿಂಗ್​ ಕಲಿಯಲು ಸನ್ನಿ ಲಿಯೋನ್​ ಆಸಕ್ತಿ ಹೊಂದಿದ್ದರು. ಖಾಸಗಿ ಮ್ಯಾಗಜಿಗ್​ಗಾಗಿ ಕೆಲಸ ಮಾಡುವಾಗ ತಮ್ಮ ಹೆಸರನ್ನು ಸನ್ನಿ ಲಿಯೋನ್​ ಎಂದು ಬದಲಾಯಿಸಿಕೊಂಡರು.
  5. ಸನ್ನಿ ಲಿಯೋನ್​ ಶಾಲೆಯಲ್ಲಿ ಓದುತ್ತಿದ್ದಾಗ ಅವರನ್ನು ಎಲ್ಲರೂ ಗೇಲಿ ಮಾಡುತ್ತಿದ್ದರು. ಅವರ ಲುಕ್​ ಚೆನ್ನಾಗಿಲ್ಲ ಎಂದು ಅವಮಾನ ಮಾಡುತ್ತಿದ್ದರು. ಆದರೆ ಸನ್ನಿ ಸ್ಟಾರ್​ ಆಗಿ ಮೆರೆಯುತ್ತಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ.
  6. 2011ರಲ್ಲಿ ಸನ್ನಿ ಲಿಯೋನ್​ ಅವರು ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಖ್ಯಾತಿ ಗಿಟ್ಟಿಸಿದರು. ನಂತರ ಅವರಿಗೆ ಹಲವು ಅವಕಾಶಗಳು ಬರಲು ಆರಂಭಿಸಿದವು.
  7. ಸನ್ನಿ ಲಿಯೋನ್​ ನಟಿಸಿದ ಮೊದಲ ಬಾಲಿವುಡ್​ ಸಿನಿಮಾ ‘ಜಿಸ್ಮ್​ 2’ 2012ರಲ್ಲಿ ತೆರೆಕಂಡಿತು. ನಂತರ ಅವರು ಅನೇಕ ಸಿನಿಮಾಗಳಲ್ಲಿ ಹೀರೋಯಿನ್​ ಆಗಿ ನಟಿಸಿ ಜನಪ್ರಿಯತೆ ಪಡೆದುಕೊಂಡರು.
  8. ಬಿಬಿಸಿ ಬಿಡುಗಡೆ ಮಾಡಿದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸನ್ನಿ ಲಿಯೋನ್​ ಕೂಡ ಸ್ಥಾನ ಪಡೆದುಕೊಂಡಿದ್ದರು. ಸಿನಿಮಾ ಜೊತೆಗೆ ಅನೇಕ ಜಾಹೀರಾತುಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ.
  9. ಸನ್ನಿ ಲಿಯೋನ್​ ಮತ್ತು ಅವರ ಪತಿ ಡೇನಿಯಲ್​ ವೆಬರ್​ ಅವರು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮಗುವಿಗೆ ನಿಶಾ ಕೌರ್ ಎಂದು ಹೆಸರು ಇಟ್ಟಿದ್ದಾರೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ