‘ಡಂಕಿ’ ಸಿನಿಮಾದ ಫೋಟೋ ಲೀಕ್; 40ರ ಹರೆಯದವರಂತೆ ಕಂಡ ಶಾರುಖ್ ಖಾನ್

‘ಡಂಕಿ’ ಸಿನಿಮಾದ ಫೋಟೋ ಲೀಕ್; 40ರ ಹರೆಯದವರಂತೆ ಕಂಡ ಶಾರುಖ್ ಖಾನ್
ಶಾರುಖ್ ಖಾನ್

ಶಾರುಖ್ ಖಾನ್ ಅವರು ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ. ಶಾರುಖ್ ವಯಸ್ಸು ಈಗ 56. ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಗ್ಗೆ ಫ್ಯಾನ್ಸ್ ಮಾತನಾಡಿದ್ದಾರೆ. ‘

TV9kannada Web Team

| Edited By: Rajesh Duggumane

May 12, 2022 | 9:30 PM

ಹಲವು ಹಿಟ್ ಚಿತ್ರಗಳನ್ನು ನೀಡಿರುವ ಶಾರುಖ್ ಖಾನ್ (Shah Rukh Khan) ಸಿನಿಮಾ ತೆರೆಕಾಣದೆ ನಾಲ್ಕು ವರ್ಷಗಳು ಕಳೆದಿವೆ. ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಅವರು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಒಟ್ಟೊಟ್ಟಿಗೆ ಮೂರು ಚಿತ್ರಗಳ ಶೂಟಿಂಗ್​ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಪಠಾಣ್​’ ಚಿತ್ರದ (Pathan Movie) ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಆಗಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾಗೆ ದೀಪಿಕಾ ನಾಯಕಿ. ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನದ ಸಿನಿಮಾ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇತ್ತೀಚೆಗೆ ರಾಜ್​ಕುಮಾರ್ ಹಿರಾನಿ (Rajkumar Hirani) ಜತೆಗೆ ಶಾರುಖ್ ಕೈ ಜೋಡಿಸಿರುವ ವಿಚಾರ ಅಧಿಕೃತವಾಗಿತ್ತು. ಈಗ ಸೆಟ್​ನ ಫೋಟೋ ಒಂದು ವೈರಲ್ ಆಗಿದೆ.

ರಾಜ್​ಕುಮಾರ್ ಹಿರಾನಿ ಜತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಸಂಜಯ್ ದತ್, ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿದೆ.

ರಾಜ್​ಕುಮಾರ್ ಹಿರಾನಿ ಬಾಲಿವುಡ್​ನ ಯಶಸ್ವಿ ನಿರ್ದೇಶಕ. ‘ಮುನ್ನಾ ಭಾಯ್​ ಎಂಬಿಬಿಎಸ್​’, ‘ಪಿಕೆ’,‘ಸಂಜು’ ರೀತಿಯ ಹಿಟ್​ ಚಿತ್ರಗಳನ್ನು ಅವರು ನೀಡಿದ್ದಾರೆ. 2018ರಲ್ಲಿ ಬಂದ ‘ಸಂಜು’ ಬಳಿಕ ಅವರು ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಇದಾಗಿದೆ. ಈಗ ವೈರಲ್ ಆಗುತ್ತಿರುವ ಫೋಟೋದಿಂದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಶಾರುಖ್ ಖಾನ್ ಅವರು ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ. ಶಾರುಖ್ ವಯಸ್ಸು ಈಗ 56. ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಗ್ಗೆ ಫ್ಯಾನ್ಸ್ ಮಾತನಾಡಿದ್ದಾರೆ. ‘ಶಾರುಖ್ ಖಾನ್ ಇನ್ನೂ 40 ಹರೆಯದವರಂತೆ ಕಾಣುತ್ತಾರೆ’ ಎಂದು ಹೇಳಿದ್ದಾರೆ.

‘ಡಂಕಿ’ ಸಿನಿಮಾ 2023ರ ಡಿಸೆಂಬರ್ 22ರಂದು ತೆರೆಗೆ ಬರುತ್ತಿದೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋ, ಶಾರುಖ್ ಅವರ ರೆಡ್​ ಚಿಲ್ಲೀ ಸ್ಟುಡಿಯೋ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಪ್ರೆಸೆಂಟ್ ಮಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada