‘ಆಚಾರ್ಯ’ ಸಿನಿಮಾದಿಂದ ವಿತರಕರಿಗೆ ನಷ್ಟ; ಮಹತ್ವದ ನಿರ್ಧಾರ ತೆಗೆದುಕೊಂಡ ಚಿರು

ಮೇ ಮೊದಲ ವಾರದಲ್ಲಿ ಚಿರಂಜೀವಿ ಅವರು ಪತ್ನಿ ಜತೆ ವಿದೇಶಕ್ಕೆ ತೆರಳಿದ್ದಾರೆ. ಸಮ್ಮರ್ ವೆಕೇಶನ್ ಕಳೆಯಲು ಅಮೆರಿಕಕ್ಕೆ ಹಾರಿದ್ದಾರೆ. ಒಂದು ತಿಂಗಳ ಕಾಲ ಚಿರು ಅಮೆರಿಕದಲ್ಲೇ ಉಳಿದುಕೊಳ್ಳಲಿದ್ದಾರೆ. ಜೂನ್ ಮೊದಲ ವಾರ ಅವರು ಭಾರತಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ.

‘ಆಚಾರ್ಯ’ ಸಿನಿಮಾದಿಂದ ವಿತರಕರಿಗೆ ನಷ್ಟ; ಮಹತ್ವದ ನಿರ್ಧಾರ ತೆಗೆದುಕೊಂಡ ಚಿರು
ಚಿರಂಜೀವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 12, 2022 | 6:29 PM

ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾ  (Acharya Movie)ಇತ್ತೀಚೆಗೆ ತೆರೆಗೆ ಬಂದು ದೊಡ್ಡ ನಷ್ಟ ಅನುಭವಿಸಿತು. ಈ ಸಿನಿಮಾದಿಂದ ವಿತರಕರು ಕೈ ಸುಟ್ಟುಕೊಂಡಿದ್ದಾರೆ. ಹಾಕಿದ ಬಂಡವಾಳದ ಶೇ. 25ರಷ್ಟು ಮಾತ್ರ ಕೈ ಸೇರಿದೆ. ಉಳಿದ ಹಣ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿ ವಿತರಕರು ನೇರವಾಗಿ ‘ಮೆಗಾಸ್ಟಾರ್’ ಚಿರಂಜೀವಿಗೆ (Chiranjeevi) ಪತ್ರ ಬರೆದಿದ್ದರು. ಈ ವಿಚಾರವನ್ನು ಚಿರು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ಸದ್ಯ ಅಮೆರಿಕದಲ್ಲಿದ್ದು, ಶೀಘ್ರವೇ ಭಾರತಕ್ಕೆ ಮರಳಲಿದ್ದಾರೆ. ಆ ಬಳಿಕ ವಿತರಕರ ಜತೆ ಮಾತುಕತೆ ನಡೆಸಲಿದ್ದಾರೆ.

ಮೇ ಮೊದಲ ವಾರದಲ್ಲಿ ಚಿರಂಜೀವಿ ಅವರು ಪತ್ನಿ ಜತೆ ವಿದೇಶಕ್ಕೆ ತೆರಳಿದ್ದಾರೆ. ಸಮ್ಮರ್ ವೆಕೇಶನ್ ಕಳೆಯಲು ಅಮೆರಿಕಕ್ಕೆ ಹಾರಿದ್ದಾರೆ. ಒಂದು ತಿಂಗಳ ಕಾಲ ಚಿರು ಅಮೆರಿಕದಲ್ಲೇ ಉಳಿದುಕೊಳ್ಳಲಿದ್ದಾರೆ. ಜೂನ್ ಮೊದಲ ವಾರ ಅವರು ಭಾರತಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ. ಆ ಬಳಿಕ ಅವರು ವಿತರಕರ ಜತೆ ಮಾತನಾಡಲಿದ್ದಾರೆ.

ಈ ವಿಚಾರ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಳ್ಳಲು ಒಂದು ಕಾರಣವಿದೆ. ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದರು. ‘ಆಚಾರ್ಯ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದರಿಂದ ನನಗೆ ತುಂಬಾ ನಿರಾಸೆಯಾಗಿದೆ. ನಾನು ಒಂದು ವರ್ಷದ ಹಿಂದೆ ಈ ಸಿನಿಮಾ ಬುಕ್ ಮಾಡಿದ್ದೆ. ಒಪ್ಪಿಕೊಂಡಂತೆ ಸಿನಿಮಾ ಬಿಡುಗಡೆಗೂ ಮುನ್ನ ಸಂಪೂರ್ಣ ಹಣ ನೀಡಿದ್ದೇನೆ. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಹೈದರಾಬಾದ್ ಮಂದಿ ಅಂದುಕೊಂಡಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ
Image
Acharya Box Office: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ‘ಆಚಾರ್ಯ’; ಇದುವರೆಗೆ ಆದ ಕಲೆಕ್ಷನ್ ಎಷ್ಟು?
Image
ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
Image
Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೋತಿದ್ದು ಹಾಗೀಗಲ್ಲ
Image
‘ಕೆಜಿಎಫ್​ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್​ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ

ನಷ್ಟದ ಬಗ್ಗೆ ಮಾತನಾಡಿದ್ದ ನಿರ್ಮಾಪಕರು ‘ಈ ಸಿನಿಮಾದಿಂದ ನನಗೆ ಭಾರೀ ನಷ್ಟವಾಗಿದೆ. ಈ ಸಿನಿಮಾದಿಂದ ತೀವ್ರ ಬಿಕ್ಕಟ್ಟಿನಲ್ಲಿ ವಿತರಕರಿಗೆ ಪರಿಹಾರ ನೀಡಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾವು ಇಲ್ಲಿಯವರೆಗೆ ಹೂಡಿಕೆ ಮಾಡಿದ ಮೊತ್ತದ ಶೇ. 25 ಮಾತ್ರ ಹಣ ಬಂದಿದೆ. ಶೇ. 75  ನಷ್ಟವಾಗಿದೆ. ನಾನು ಸಾಲ ಮಾಡಿ ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದೇನೆ. ಆದರೆ ಎಲ್ಲವೂ ನಷ್ಟವಾಗಿದೆ. ಈಗ ದೊಡ್ಡ ಸಾಲದ ಸುಳಿಗೆ ಬಿದ್ದಿದ್ದೇನೆ’ ಎಂದು ಪತ್ರದಲ್ಲಿ ರಾಜ್​ಗೋಪಾಲ್ ಬಾಲಾಜಿ ಹೇಳಿದ್ದರು. ಇನ್ನೂ ಕೆಲ ವಿತರಕರು ಇದೇ ರೀತಿಯ ಆರೋಪ ಮಾಡಿದ್ದರು.

ಜೂನ್​ನಲ್ಲಿ ಚಿರಂಜೀವಿ ಅವರು ಹೈದರಾಬಾದ್​ಗೆ ಮರಳಲಿದ್ದಾರೆ. ನಂತರ ಅವರು ಹಂಚಿಕೆದಾರರ ಜತೆ ಸಭೆ ನಡೆಸಲಿದ್ದಾರೆ. ಆ ಬಳಿಕ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Published On - 5:52 pm, Thu, 12 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ