‘ಒಮ್ಮೆ ನೋಡಬಹುದು, ಹೆಚ್ಚು ಮನರಂಜನೆ ಇಲ್ಲ’: ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಪ್ರೇಕ್ಷಕರ ಪ್ರಾಮಾಣಿಕ ವಿಮರ್ಶೆ

‘ಸರ್ಕಾರು ವಾರಿ ಪಾಟ’ ಸಿನಿಮಾ ನೋಡಿದ ಕೆಲವರಿಗೆ ಸಖತ್​ ಇಷ್ಟ ಆಗಿದೆ. ಆದರೆ ಇನ್ನೂ ಕೆಲವರು ಸಿನಿಮಾದ ಮೈನಸ್​ ಪಾಯಿಂಟ್​ ಬಗ್ಗೆ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

May 12, 2022 | 4:09 PM

ಟಾಲಿವುಡ್​ ‘ಪ್ರಿನ್ಸ್​’ ಮಹೇಶ್​ ಬಾಬು (Mahesh Babu) ಅವರ ಹೊಸ ಸಿನಿಮಾ ‘ಸರ್ಕಾರು ವಾರಿ ಪಾಟ’ (Sarkaru Vaari Paata) ದೇಶಾದ್ಯಂತ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲೂ ಈ ಸಿನಿಮಾವನ್ನು ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ನೋಡಿದ್ದಾರೆ. ಪರಶುರಾಮ್​ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಮಹೇಶ್​ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್​ (Keerthy Suresh) ನಟಿಸಿದ್ದಾರೆ. ಹಾಡುಗಳು ಪ್ರೇಕ್ಷಕರು ಮನಗೆದ್ದಿವೆ. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಒಮ್ಮೆ ನೋಡಬಹುದು. ಹೆಚ್ಚು ಮನರಂಜನೆ ಇಲ್ಲ’ ಎಂದು ಅಭಿಮಾನಿಯೊಬ್ಬರು ಪ್ರಾಮಾಣಿಕವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಪ್ಪಟ ಮಹೇಶ್​ ಬಾಬು ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಪ್ರೇಕ್ಷಕರು ಏನು ಹೇಳಿದ್ದಾರೆ ಎಂಬ ವಿವರ ಈ ವಿಡಿಯೋದಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada