‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​

‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
ಸಮಂತಾ, ಸಿತಾರಾ, ಮಹೇಶ್ ಬಾಬು,

Sitara Ghattamaneni: ಸಮಂತಾ ರುತ್​ ಪ್ರಭು ಅವರು ಮಹೇಶ್​ ಬಾಬು ಕುಟುಂಬಕ್ಕೆ ಆಪ್ತರಾಗಿದ್ದಾರೆ. ಈ ಕುರಿತು ಸಿತಾರಾ ಹೇಳಿರುವ ಮಾತುಗಳು ವೈರಲ್​ ಆಗಿವೆ.

TV9kannada Web Team

| Edited By: Madan Kumar

May 12, 2022 | 3:47 PM

ಟಾಲಿವುಡ್​ನಲ್ಲಿ ಮಹೇಶ್​ ಬಾಬು (Mahesh Babu) ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದೆ. ಅವರ ಮಗಳು ಸಿತಾರಾ ಕೂಡ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾಳೆ. ಆಕೆಗೆ ಈಗಿನ್ನೂ 9 ವರ್ಷ ವಯಸ್ಸು. ಚಿಕ್ಕ ವಯಸ್ಸಿಗೆ ಸಾಕಷ್ಟು ಸಾಧನೆ ಮಾಡಿದ್ದಾಳೆ. ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ ಸಾಕಷ್ಟು ಸಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಾಳೆ. ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ‘ಪೆನ್ನೆ..’ ಹಾಡಿನಲ್ಲಿ ಗೆಸ್ಟ್​ ಅಪಿಯರೆನ್ಸ್​ ನೀಡುವ ಮೂಲಕ ಸಿನಿಮಾ ಇಂಡಸ್ಟ್ರಿಗೆ ಅವಳು ಕಾಲಿಟ್ಟಾಗಿದೆ. ಸಿತಾರಾ (Sitara Ghattamaneni) ಕೂಚಿಪುಡಿ ನೃತ್ಯವನ್ನು ಕೂಡ ಉತ್ತಮವಾಗಿ ಮಾಡುತ್ತಾಳೆ ಅನ್ನೋದು ಅಭಿಮಾನಿಗಳಿಗೆ ತಿಳಿದಿದೆ. ಹೀಗೆ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಆಗುವ ಮಹೇಶ್ ಬಾಬು ಮಗಳು ಸಿತಾರಾ ಈಗ ಸಮಂತಾ ರುತ್​ ಪ್ರಭು (Samantha Ruth Prabhu) ಬಗ್ಗೆ ಮಾತನಾಡಿದ್ದಾಳೆ. ಸಮಂತಾ ಜೊತೆ ತನಗೆ ಇರುವ ಆತ್ಮೀಯತೆಯ ಕುರಿತು ಆಕೆ ವಿವರಿಸಿದ್ದಾರೆ. ಸಂದರ್ಶನವೊಂದರಲ್ಲಿ ಸಿತಾರಾ ಮಾತನಾಡಿದ್ದು, ಆ ವಿಡಿಯೋ ವೈರಲ್​ ಆಗುತ್ತಿದೆ. ಮಹೇಶ್​ ಬಾಬು ಪುತ್ರಿಯ ಮಾತುಗಳಿಗೆ ಫ್ಯಾನ್ಸ್​ ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸಮಂತಾ ಮತ್ತು ಮಹೇಶ್​ ಬಾಬು ನಡುವೆ ಮೊದಲಿನಿಂದಲೂ ಉತ್ತಮ ಒಡನಾಟ ಇದೆ. ಮಹೇಶ್​ ಬಾಬು ಕುಟುಂಬದ ಜೊತೆಗೂ ಸಮಂತಾ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಅವರಿಬ್ಬರು ಜೊತೆಯಾಗಿ ನಟಿಸಿದ್ದ ‘ದೂಕುಡು’, ‘ಬ್ರಹ್ಮೋತ್ಸವಂ’, ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’ ಸಿನಿಮಾಗಳಲ್ಲಿ ಅವರ ನಟನೆಯನ್ನು ಕಂಡು ಫ್ಯಾನ್ಸ್​ ಖುಷಿಪಟ್ಟರು. ತಂದೆಯ ಸಿನಿಮಾದ ಶೂಟಿಂಗ್​ ನೋಡಲು ಹೋಗುತ್ತಿದ್ದ ಸಿತಾರಾ, ಆ ದಿನಗಳ ನೆನಪನ್ನು ಮೆಲುಕು ಹಾಕಿದ್ದಾಳೆ.

‘ಸಮಂತಾ ಆಂಟಿ ನನಗೆ ಬೆಸ್ಟ್​ ಫ್ರೆಂಡ್​ ಇದ್ದಂತೆ. ನನ್ನ ತಂದೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ರತಿ ಬಾರಿ ನಾನು ಶೂಟಿಂಗ್​ ಸೆಟ್​ಗೆ ಹೋದಾದ ಸಮಂತಾ ನನ್ನ ಜೊತೆ ಆಟ ಆಡುತ್ತಿದ್ದರು. ಅವರು ತುಂಬ ಖುಷಿಖುಷಿಯ ವ್ಯಕ್ತಿತ್ವದವರು’ ಎಂದು ಸಿತಾರಾ ಹೇಳಿದ್ದಾಳೆ. ಈ ಹಿಂದೆ ಮಹೇಶ್​ ಬಾಬು ಪತ್ನಿ ನಮ್ರತಾ ಕೂಡ ಸಮಂತಾ ರುತ್​ ಪ್ರಭು ಬಗ್ಗೆ ಮಾತನಾಡುತ್ತ, ‘ಅವರ ಕೂಡ ನಮ್ಮ ಕುಟುಂಬದವರು’ ಎಂದು ಹೇಳಿದ್ದರು. ಆ ಮಾತನ್ನು ಅಭಿಮಾನಿಗಳು ಈಗ ಮತ್ತೆ ನೆನಪು ಮಾಡಿಕೊಂಡಿದ್ದಾರೆ.

‘ಸರ್ಕಾರು ವಾರಿ ಪಾಟ’ ಸಿನಿಮಾದ ಹಾಡಿನಲ್ಲಿ ಸ್ಪೆಷಲ್​ ಅಪಿಯರೆನ್ಸ್ ನೀಡಿರುವುದರಿಂದ ಸಿತಾರಾ ಕೂಡ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದಾಳೆ. ಈ ಪ್ರಯುಕ್ತ ನೀಡಿದ ಸಂದರ್ಶನದಲ್ಲಿ ಮನದ ಮಾತುಗಳನ್ನು ಹಂಚಿಕೊಂಡಿದ್ದಾಳೆ. ಪುತ್ರಿಯ ಎಲ್ಲ ಚಟುವಟಿಕೆಗಳಿಗೆ ಮಹೇಶ್​ ಬಾಬು ಬೆಂಬಲವಾಗಿ ನಿಂತಿದ್ದಾರೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ಆಕೆ ಮನರಂಜನೆ ಕ್ಷೇತ್ರದಲ್ಲೂ ಮಿಂಚುತ್ತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ.

ಇತ್ತೀಚೆಗೆ ಸಿತಾರಾ ಫಾರಿನ್​ ಟ್ರಿಪ್​ಗೆ ಹೋಗಿದ್ದಳು. ಪ್ಯಾರಿಸ್​ನಿಂದ ಮರಳಿ ಬಂದಿರುವ ಆಕೆ ಅನೇಕ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾಳೆ. ಇನ್​ಸ್ಟಾಗ್ರಾಮ್​ನಲ್ಲಿ ಆಕೆಯಲ್ಲಿ 7 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಈ ಖಾತೆಯಲ್ಲಿ ಅವರ ತಾಯಿ ನಮ್ರತಾ ನಿಭಾಯಿಸುತ್ತಿದ್ದಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾದ ‘ಕಲಾವತಿ..’ ಹಾಡಿಗೆ ಸಿತಾರಾ ಇತ್ತೀಚೆಗೆ ರೀಲ್ಸ್​ ಮಾಡಿದ್ದ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada