‘ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಶಂಕರ್ ನಾಗ್ ಆಗಲೇ ಆಲೋಚಿಸಿದ್ದರು’; ಮಾಸ್ಟರ್ ಮಂಜುನಾಥ್  

ಸದ್ಯ, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ವಿಶೇಷ ಎಂದರೆ ಶಂಕರ್ ನಾಗ್ ಆಗಲೇ ಈ ಬಗ್ಗೆ ಆಲೋಚಿಸಿದ್ದರು.

TV9kannada Web Team

| Edited By: Rajesh Duggumane

May 12, 2022 | 2:14 PM

ಶಂಕರನಾಗ್​ (Shankar Nag) ಅವರು ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಕ್ರಾಂತಿ ಮಾಡಿದ ನಿರ್ದೇಶಕ ಹಾಗೂ ನಟ. ಅಂದಿನ ಕಾಲದಲ್ಲೇ ಭಿನ್ನ ಸಿನಿಮಾಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದರು. ಬೆಂಗಳೂರಿಗೆ ಮೆಟ್ರೋ ತರುವ ಬಗ್ಗೆ ಅವರು ಅಂದೇ ಆಲೋಚಿಸಿದ್ದರು. ಸಿನಿಮಾಗಳ ಬಗ್ಗೆ ಅವರು ಸಾಕಷ್ಟು ಕನಸು ಕಂಡಿದ್ದರು. ಸದ್ಯ, ಪ್ಯಾನ್ ಇಂಡಿಯಾ ಸಿನಿಮಾಗಳ (Pan India Movies) ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ವಿಶೇಷ ಎಂದರೆ ಶಂಕರ್ ನಾಗ್ ಆಗಲೇ ಈ ಬಗ್ಗೆ ಆಲೋಚಿಸಿದ್ದರು. ಶಂಕರ್ ನಾಗ್ ಅವರ ಜತೆ ಆಪ್ತವಾಗಿದ್ದ ಮಾಸ್ಟರ್ ಮಂಜುನಾಥ್ (Master Manjunath) ಅವರು ಈ ಬಗ್ಗೆ ಮಾತನಾಡಿದ್ದಾರೆ. ‘1990ರ ಸಮಯದಲ್ಲಿ ವಿದೇಶಿ ಸಿನಿಮಾಗಳನ್ನು ನೋಡಿ ಅಲ್ಲಿನ ತಂತ್ರಜ್ಞಾನವನ್ನು ಕನ್ನಡ ಸಿನಿಮಾಗೆ ತರಬೇಕು ಎಂದು ಶಂಕರ್​ನಾಗ್​ ಆಲೋಚಿಸಿದ್ದರು. ಇಟಲಿಗೆ ತೆರಳಿ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ನಂತರ ಇಂಗ್ಲೆಂಡ್​ಗೆ ತೆರಳಿ ಟೆಕ್ನಾಲಜಿ ಬಗ್ಗೆ ಅಲ್ಲಿನ ಕಂಪನಿಗಳ ಜತೆ ಮಾತನಾಡಿದ್ದರು. ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಅವರು ಆಗಲೇ ಆಲೋಚಿಸಿದ್ದರು’ ಎಂದಿದ್ದಾರೆ ಮಾಸ್ಟರ್ ಮಂಜುನಾಥ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. 

Follow us on

Click on your DTH Provider to Add TV9 Kannada