ಕನ್ನಡಾಭಿಮಾನಿ ಸಿದ್ದರಾಮಯ್ಯ ರಾಜಸ್ತಾನದಲ್ಲಿ ‘ಮುಝೆ ಹಿಂದಿ ನಹೀಂ ಆತಾ’ ಅಂದಿದ್ದು!
ಅಪ್ಪಟ ಕನ್ನಡಾಭಿಮಾನಿ ಸಿದ್ದರಾಮಯ್ಯನವರು, ‘ಹಿಂದಿ ನಹೀಂ ಆತಾ ಹೈ,’ ಅಂತ ಹೇಳುತ್ತಾ ಮುಂದಕ್ಕೆ ಸಾಗುತ್ತಾರೆ! ಪಾಪ, ಹಿಂದಿ ಚ್ಯಾನೆಲ್ ವರದಿಗಾರ ಪೆಚ್ಚುಮೋರೆ ಹಾಕಿಕೊಂಡು ಹಿಂದೆ ಸರಿಯುತ್ತಾರೆ.
Udaipur: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ರಾಜಸ್ತಾನ ಪ್ರವಾಸದಲ್ಲಿದ್ದಾರೆ. ಯಾಕೆ ಅಂತ ನಿಮಗೂ ಗೊತ್ತಿದೆ ಮಾರಾಯ್ರೇ. ಇಲ್ಲಿನ ಉದಯಪುರ ನಗರದಲ್ಲಿ (Udaipur City) ಗುರುವಾರದಿಂದ ಕಾಂಗ್ರೆಸ್ ಪಕ್ಷದ ಚಿಂತನ್ ಶಿವಿರ್ (Chintan Shivir) ಆರಂಭವಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವಾರು ಕಾಂಗ್ರೆಸ್ ನಾಯಕರು ಉದಯಪುರಕ್ಕೆ ತೆರಳಿದ್ದಾರೆ. ಕಾರ್ಯಕ್ರಮವನ್ನು ಕವರ್ ಮಾಡಲು ಟಿವಿ9 ಕನ್ನಡ ಚ್ಯಾನೆಲ್ ವರದಿಗಾರರು ಸಹ ಅಲ್ಲಿದ್ದಾರೆ. ಗುರುವಾರ ಬೆಳಗ್ಗೆ ಉದಯಪುರ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯನವರು ಬಂದಿಳಿದಾಗ ನಮ್ಮ ವರದಿಗಾರನ ಜೊತೆ ರಾಜಸ್ತಾನ ಹಿಂದಿ ಚ್ಯಾನೆಲ್ ಒಂದರ ವರದಿಗಾರ ಸಹ ಅವರನ್ನು ಮಾತಾಡಿಸಿದ್ದಾರೆ. ನಮ್ಮ ವರದಿಗಾರ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರದ ಬಗ್ಗೆ ಸ್ವಲ್ಪ ಸಮಯದ ಬಳಿಕ ಚರ್ಚಿಸುವ.
ಉದಯಪುರದ ವರದಿಗಾರ ಸಿದ್ದರಾಮಯ್ಯನವರಿಗೆ ಹಿಂದಿಯಲ್ಲಿ ಏನನ್ನೋ ಕೇಳುತ್ತಾರೆ. ಅದು ನಮ್ಮ ಕಿವಿಗೆ ಬೀಳೋದಿಲ್ಲ ಆದರೆ ಸಿದ್ದರಾಮಯ್ಯನವರು ಆಡುವ ಮಾತು ಮಾತ್ರ ಸ್ಪಷ್ಟವಾಗಿ ಕೇಳಿಸುತ್ತದೆ.
ಅಪ್ಪಟ ಕನ್ನಡಾಭಿಮಾನಿ ಸಿದ್ದರಾಮಯ್ಯನವರು, ‘ಹಿಂದಿ ನಹೀಂ ಆತಾ ಹೈ,’ ಅಂತ ಹೇಳುತ್ತಾ ಮುಂದಕ್ಕೆ ಸಾಗುತ್ತಾರೆ! ಪಾಪ, ಹಿಂದಿ ಚ್ಯಾನೆಲ್ ವರದಿಗಾರ ಪೆಚ್ಚುಮೋರೆ ಹಾಕಿಕೊಂಡು ಹಿಂದೆ ಸರಿಯುತ್ತಾರೆ.
ಓಕೆ, ವಿಷಯಕ್ಕೆ ಬರುವ. ನಿಮಗೆ ಗೊತ್ತಿದೆ, ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ತರುವ ಯೋಚನೆ ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕಿದೆ. ಹಾಗೆ ನೋಡಿದರೆ ಮತಾಂತರ ನಿಷೇಧ ಕಾಯ್ದೆ ಇನ್ನೂ ವಿಧಾನ ಪರಿಷತ್ ನಲ್ಲಿ ಪಾಸಾಗಿಲ್ಲ. ವಿಷಯದ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಿದಾಗ ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಕಾಮೆಂಟ್ ಮಾಡಲಾರೆ ಎನ್ನುತ್ತಾರೆ.
ನಮ್ಮ ವರದಿಗಾರರು ಬೇರೆ ಪ್ರಶ್ನೆ ಕೇಳಲು ಅಣಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಈ ಬಿಜೆಪಿ ಸರ್ಕಾರ ಮತ್ಯಾವ ಸುಗ್ರೀವಾಜ್ಞೆ ತರಬಯಸಿದೆಯೋ ಎನ್ನುತ್ತಾ ಅಲ್ಲಿಂದ ತೆರಳುತ್ತಾರೆ.
ಇದನ್ನೂ ಓದಿ: ಮೇ 13ರಿಂದ ಉದಯಪುರದಲ್ಲಿ ಕಾಂಗ್ರೆಸ್ನಿಂದ ಚಿಂತನ ಶಿಬಿರ; ಪ್ರಶಾಂತ್ ಕಿಶೋರ್ ಪ್ಲಾನ್ ಬಗ್ಗೆ ಚರ್ಚೆ