Mandya: ಮೊದಲು ಅಕಾಲಿಕ ಮಳೆ ಆಮೇಲೆ ಅಸಾನಿ ಚಂಡಮಾರುತದಿಂದಾಗಿ (Asani Cyclone) ಸುರಿಯುತ್ತಿರುವ ಮಳೆ-ಕಳೆದರೆಡು ವಾರಗಳಿಂದ ನಮ್ಮನ್ನು ಎಡಬಿಡದೆ ಕಾಡುತ್ತಿದೆ. ತೆಂಗು (coconut) ಮತ್ತು ಮಾವಿನ ಮರಗಳು (mango trees) ಬುಡಸಮೇತ ಉರುಳಿ ಬೀಳುತ್ತಿದ್ದು ರೈತರು ಗೋಳಾಡುತ್ತಿದ್ದಾರೆ. ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿರುವ ದೃಶ್ಯ ಮಂಡ್ಯ ಜಿಲ್ಲೆಯ ಬೂತನಹೊಸೂರು ಗ್ರಾಮದ್ದು. ಇಲ್ಲಿನ ಬೃಹದಾಕಾರದ ಮರವೊಂದು ಜೋರು ಗಾಳಿ ಮಳೆಗೆ ದೇವಸ್ಥಾನವೊಂದರ ಮೇಲೆ ಉರುಳಿ ಬಿದ್ದಿದೆ. ಕೇವಲ ದೇವಸ್ಥಾನ ಮಾತ್ರವಲ್ಲ ವಿದ್ಯುದ್ದೀಪದ ಕಂಬಗಳ ಮೇಲೂ ಮರದ ರೆಂಬೆಗಳು ಮುರಿದು ಬಿದ್ದಿವೆ. ಮರದ ರೆಂಬೆಗಳು ರಸ್ತೆಯ ಮೇಲೆ ಸಹ ಬಿದ್ದಿರುವುದರಿಂದ ಮಂಡ್ಯ ಮತ್ತು ಕೆ ಎಮ್ ದೊಡ್ಡಿ ನಡುವಿನ ರಸ್ತೆ ಸಂಪರ್ಕ ಕಡಿದುಹೋಗಿದೆ.
ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಕಾರ್ಯನಿರತವಾಗಿರುವುದನ್ನು ನೀವು ನೋಡಬಹುದು. ದೊಡ್ಡ ರೆಂಬೆಗಳನ್ನು ತುಂಡರಿಸಿ ರಸ್ತೆಯನ್ನು ತೆರವುಗೊಳಿಸಲಾಗುತ್ತಿದೆ. ಜೆಸಿಬಿಗಳ ನೆರವು ಸಹ ಪಡೆಯಲಾಗಿದೆ.
ದೇವಸ್ಥಾನಕ್ಕೆ ಹೆಚ್ಚಿನ ಹಾನಿಯೇನೂ ಆಗಿಲ್ಲ. ಮಳೆಗಾಳಿಯಿಂದ ಆಗುತ್ತಿರುವ ಅನಾಹುತಗಳಿಗೆ ಯಾರನ್ನೂ ದೂಷಿಸಲಾಗದು. ಆದರೆ ಅವುಗಳ ಆರ್ಭಟದಿಂದ ರೈತಾಪಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸರ್ಕಾರದಿಂದ ನೆರವು ಬೇಕಾಗಿದೆ. ಪರಿಹಾರಗಳನ್ನು ಅವರು ಸರ್ಕಾರದಿಂದ ನಿರೀಕ್ಷಿಸುತ್ತಿದ್ದಾರೆ. ಸರ್ಕಾರ ಅವರ ಮೊರೆಯನ್ನು ಆಲಿಸುತ್ತದೆಯೇ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: David Warner: ನೋ ಬಾಲ್ ಅಲ್ಲ: ವಿಕೆಟ್ಗೆ ಚೆಂಡು ತಾಗಿದರೂ ನಾಟೌಟ್ ಆದ ಡೇವಿಡ್ ವಾರ್ನರ್: ವಿಡಿಯೋ