David Warner: ನೋ ಬಾಲ್ ಅಲ್ಲ: ವಿಕೆಟ್​ಗೆ ಚೆಂಡು ತಾಗಿದರೂ ನಾಟೌಟ್ ಆದ ಡೇವಿಡ್ ವಾರ್ನರ್: ವಿಡಿಯೋ

Watch David Warner survive, RR vs DC: ಐಪಿಎಲ್ 2022ರ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮಧ್ಯೆ ವಿಶೇಷ ಘಟನೆಯೊಂದು ನಡೆಯಿತು. ಯುಜ್ವೇಂದ್ರ ಚಹಾಲ್ ಬೌಲಿಂಗ್​ನಲ್ಲಿ ಚೆಂಡು ಡೇವಿಡ್ ವಾರ್ನರ್ ಬ್ಯಾಟ್​ಗೆ ತಾಗದೆ ವಿಕೆಟ್​ಗೆ ಬಡಿಯಿತು. ಆದರೂ ಅವರು ಔಟಾಗಲಿಲ್ಲ. ಅರೇ ಇದು ಹೇಗೆ ಸಾಧ್ಯ ಅಂತೀರಾ?.

David Warner: ನೋ ಬಾಲ್ ಅಲ್ಲ: ವಿಕೆಟ್​ಗೆ ಚೆಂಡು ತಾಗಿದರೂ ನಾಟೌಟ್ ಆದ ಡೇವಿಡ್ ವಾರ್ನರ್: ವಿಡಿಯೋ
David Warner and Yuzvendra Chahal
Follow us
TV9 Web
| Updated By: Vinay Bhat

Updated on:May 12, 2022 | 10:10 AM

ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ಬುಧವಾರ ನಡೆದ ಐಪಿಎಲ್ 2022ರ 58ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (RR vs DC)​ ಅಮೋಘ ಗೆಲುವು ಕಂಡಿತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಸರಿಯಾದ ಯೋಜನೆಯೊಂದಿಗೆ ಕಣಕ್ಕಿಳಿದು ಅಂದುಕೊಂಡ ರೀತಿಯಲ್ಲೇ ಬ್ಯಾಟಿಂಗ್ – ಬೌಲಿಂಗ್ ಮಾಡಿ 8 ವಿಕೆಟ್​ಗಳಿಂದ ಗೆದ್ದು ಬೀಗಿತು. ಪ್ರಮುಖವಾಗಿ ಬ್ಯಾಟಿಂಗ್​ನಲ್ಲಿ ಡೆಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. ಮಿಚೆಲ್ ಮಾರ್ಶ್ ಹಾಗೂ ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಈ ಮೂಲಕ ಪ್ಲೇ ಆಫ್ ರೇಸ್​ನಲ್ಲಿಯೂ ಉಳಿದುಕೊಂಡಿದೆ. ಹೀಗಿರುವಾಗ ಪಂದ್ಯದ ಮಧ್ಯೆ ವಿಶೇಷ ಘಟನೆಯೊಂದು ನಡೆಯಿತು. ಯುಜ್ವೇಂದ್ರ ಚಹಾಲ್ (Yuzvendra Chahal) ಬೌಲಿಂಗ್​ನಲ್ಲಿ ಚೆಂಡು ಡೇವಿಡ್ ವಾರ್ನರ್ (David Warner) ಬ್ಯಾಟ್​ಗೆ ತಾಗದೆ ವಿಕೆಟ್​ಗೆ ಬಡಿಯಿತು. ಆದರೂ ಅವರು ಔಟಾಗಲಿಲ್ಲ. ಅರೇ ಇದು ಹೇಗೆ ಸಾಧ್ಯ ಅಂತೀರಾ?, ಈ ಸ್ಟೋರಿ ಓದಿ.

ರಾಜಸ್ಥಾನ್ ನೀಡಿದ್ದ 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಮೊದಲ ಓವರ್​ನಲ್ಲೇ ಶ್ರೀಕರ್ ಭರತ್ ವಿಕೆಟ್ ಕಳೆದುಕೊಂಡಿತು. ನಂತರ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಅಮೋಘ ಜೊತೆಯಾಟ ಆಡಿದರು. ಈ ಸಂದರ್ಭ 9ನೇ ಓವರ್​ನ ಯುಜ್ವೇಂದ್ರ ಚಹಲ್ ಬೌಲಿಂಗ್​ನಲ್ಲಿ ಡೇವಿಡ್ ವಾರ್ನರ್ ಸಿಕ್ಸ್​ಗೆಂದು ವೇಗವಾಗಿ ಹೊಡೆಯಲು ಯತ್ನಿಸಿದರು. ಚೆಂಡು ಟರ್ನ್ ಆದ ಪರಿಣಾಮ ಬ್ಯಾಟ್​ಗೆ ಸಿಗದೆ ನೇರವಾಗಿ ವಿಕೆಟ್​ಗೆ ಬಡಿಯಿತು. ಆದರೂ ವಾರ್ನರ್ ಔಟಾಗಲಿಲ್ಲ. ಇಲ್ಲಿ ಚೆಂಡು ವಿಕೆಟ್​ಗೆ ತಾಗಿದರೂ ಬೇಲ್ಸ್ ಬಿದ್ದಿರಲಿಲ್ಲ. ಕ್ರಿಕೆಟ್ ನಿಯಮದ ಪ್ರಕಾರ, ಚೆಂಡು ಕೇವಲ ವಿಕೆಟ್​ಗೆ ತಾಗಿದರೆ ಸಾಲದು ಬೇಲ್ಸ್ ಬಿದ್ದರಷ್ಟೆ ಅದನ್ನ ಔಟೆಂದು ತೀರ್ಮಾನಿಸಲಾಗುತ್ತದೆ. ಹೀಗೆ ವಾರ್ನರ್ ಕೂದಲೆಳೆಯಿಂದ ಪಾರಾದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ
Image
CSK vs MI: ಸೋತರೆ ಟೂರ್ನಿಯಿಂದ ಔಟ್: ಗೆಲ್ಲಲು ಧೋನಿ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು?
Image
RR vs DC: ರಾಜಸ್ಥಾನ್ ವಿರುದ್ಧ ಡೆಲ್ಲಿ ಗೆಲ್ಲುತ್ತಿದ್ದಂತೆ ಆರ್​​ಸಿಬಿ ತಂಡಕ್ಕೆ ಫುಲ್ ಖುಷ್: ಯಾಕೆ ಗೊತ್ತೇ?
Image
IPL 2022: ಸಚಿನ್​ರ 13 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಗಿಲ್
Image
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ

ಈ ಅದೃಷ್ಟವನ್ನು ಸದುಪಯೋಗ ಪಡಿಸಿಕೊಂಡ ವಾರ್ನರ್ ಅವರು ಮಿಚೆಲ್ ಮಾರ್ಶ್​ಗೆ ಸಾಥ್ ನೀಡಿ ಭರ್ಜರಿ ಆಟ ಆಡಿದರು. ಎರಡನೇ ವಿಕೆಟ್​ಗೆ ಜೊತೆಯಾದ ಡೇವಿಡ್‌ ವಾರ್ನರ್‌ 52* ರನ್‌(41 ಬಾಲ್‌, 5 ಬೌಂಡರಿ, 1 ಸಿಕ್ಸ್‌) ಹಾಗೂ ಮಿಚೆಲ್‌ ಮಾರ್ಷ್‌ 89 ರನ್‌(62 ಬಾಲ್‌, 5 ಬೌಂಡರಿ, 7 ಸಿಕ್ಸ್‌) ಅಬ್ಬರ ಬ್ಯಾಟಿಂಗ್‌ ಪ್ರದರ್ಶಿಸಿದರು. ರಾಜಸ್ಥಾನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ ಈ ಜೋಡಿ 143 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಸ್ಪೋಟಕ ಆಟವಾಡಿದ ಮಾರ್ಷ್‌, 89 ರನ್‌ಗಳಿಸಿ ಔಟಾದರು. ನಂತರ ಬಂದ ರಿಷಭ್‌ ಪಂತ್‌(13*) ತಂಡವನ್ನು 18.1 ಓವರ್​ನಲ್ಲೇ ಗೆಲುವಿನ ದಡಸೇರಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್ 7 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ 19 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಆರ್. ಅಶ್ವಿನ್ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ ಔಟಾದರು. ಕೊನೆಯ ಹಂತದಲ್ಲಿ ಪಡಿಕ್ಕಲ್‌ಗೆ ಉತ್ತಮ ಬೆಂಬಲ ದೊರಕಲಿಲ್ಲ.

ಅಂತಿಮ ಹಂತದಲ್ಲಿ ಪ್ರಮುಖ ಬ್ಯಾಟರ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಅರ್ಧಶತಕದ ಅಂಚಿನಲ್ಲಿ ಪಡಿಕ್ಕಲ್ ಸಹ ಔಟ್ ಆಗುವುದರೊಂದಿಗೆ ಸವಾಲಿನ ಮೊತ್ತ ಪೇರಿಸುವ ರಾಜಸ್ಥಾನ್ ಪ್ರಯತ್ನಕ್ಕೆ ಹಿನ್ನಡೆಯಾಯಿತು. 30 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಅಂತಿಮವಾಗಿ ಆರ್​ಆರ್​ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತಷ್ಟೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:10 am, Thu, 12 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್