CSK vs MI: ಸೋತರೆ ಟೂರ್ನಿಯಿಂದ ಔಟ್: ಗೆಲ್ಲಲು ಧೋನಿ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು?

MS Dhoni, IPL 2022: ವಾಂಖೆಡೆ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈಗೆ ಇದೊಂದು ಔಪಚಾರಿಕ ಪಂದ್ಯವಾದರೆ ಸಿಎಸ್​ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ.

CSK vs MI: ಸೋತರೆ ಟೂರ್ನಿಯಿಂದ ಔಟ್: ಗೆಲ್ಲಲು ಧೋನಿ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು?
CSK vs MI IPL 2022
Follow us
TV9 Web
| Updated By: Vinay Bhat

Updated on: May 12, 2022 | 9:08 AM

ಐಪಿಎಲ್ 2022 (IPL 2022) ರಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (CSK vs MI) ತಂಡ ಮುಖಾಮುಖಿ ಆಗಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈಗೆ ಇದೊಂದು ಔಪಚಾರಿಕ ಪಂದ್ಯವಾದರೆ ಸಿಎಸ್​ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಗೆದ್ದರಷ್ಟೆ ಧೋನಿ ಪಡೆಗೆ ಉಳಿಗಾಲ. ಸೋತರೆ ಟೂರ್ನಿಯಿಂದ ಹೊರಬಿದ್ದ ಎರಡನೇ ತಂಡವಾಗಲಿದೆ. ಅಲ್ಲದೆ ಐಪಿಎಲ್ ಇತಿಹಾಸದ ಎರಡು ಶ್ರೇಷ್ಠ ತಂಡಗಳಾದ ಮುಂಬೈ ಮತ್ತು ಚೆನ್ನೈ ಐಪಿಎಲ್ 2022 ರಲ್ಲಿ ಮೊದಲ ಎರಡು ತಂಡವಾಗಿ ಹೊರಬಿದ್ದ ಕೆಟ್ಟ ದಾಖಲೆ ಬರೆದಂತಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡೂ ತಂಡಗಳಿಂದ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮುಂಬೈ-ಚೆನ್ನೈ ಕಣಕ್ಕಿಳಿಯಲಿದೆ.

ಮುಂಬೈಗೆ ಹೋಲಿಸಿದರೆ ಚೆನ್ನೈ ಸೂಪರ್ ಕಿಂಗ್ಸ್​​ ಸಾಧನೆ ಸ್ವಲ್ಪವೇ ಮೇಲ್ಮಟ್ಟದಲ್ಲಿದೆ. 11ರಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಜಡೇಜಾ ಸಾರಥ್ಯದ ಆರಂಭಿಕ 8 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 6 ಸೋಲು ಕಂಡಾಗ ಸಿಎಸ್‌ಕೆ ಪ್ಲೇಆಫ್​ ಆಸೆ ಬಹುತೇಕ ಕೈಚೆಲ್ಲಿತ್ತು. ಆದರೆ ಧೋನಿ ಮರಳಿ ಸಾರಥ್ಯ ವಹಿಸಿಕೊಂಡ ಬಳಿಕ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಸಿಎಸ್‌ಕೆ, ಪ್ಲೇಆಫ್​ ಹಂತಕ್ಕೇರಲು ಕೂದಲೆಳೆ ಅವಕಾಶವಿದೆ. ಇದಕ್ಕಾಗಿ ಸಿಎಸ್‌ಕೆ ತನ್ನ ಉಳಿದ 3 ಪಂದ್ಯಗಳಲ್ಲೂ ಗೆದ್ದರಷ್ಟೇ ಸಾಲದು. ಇತರ ಪಂದ್ಯಗಳ ಫಲಿತಾಂಶವೂ ಅದಕ್ಕೆ ಪೂರಕವಾಗಿ ಬರಬೇಕು.

ಸಿಎಸ್​ಕೆ ಆರಂಭಿಕರೇ ದೊಡ್ಡ ಆಸ್ತಿ. ಕಿವೀಸ್‌ ಓಪನರ್ ಡೇವನ್‌ ಕಾನ್ವೇ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಕಾನ್ವೇ ಸತತ 3 ಅರ್ಧ ಶತಕ ಬಾರಿಸಿ ತಂಡಕ್ಕೆ ಹೊಸ ದಾರಿಯೊಂದನ್ನು ಕಲ್ಪಿಸಿದ್ದಾರೆ. ಮೊಯಿನ್‌ ಅಲಿ ಕೂಡ ಫಾರ್ಮ್ ಗೆ ಮರಳಿದ್ದಾರೆ. ಯುವ ಬೌಲರ್‌ಗಳಾದ ಮುಕೇಶ್‌ ಚೌಧರಿ, ಸಿಮ್ರನ್‌ಜಿತ್‌ ಸಿಂಗ್‌, ಲಂಕೆಯ ಮಹೀಶ್‌ ತೀಕ್ಷಣ ಮತ್ತೆ ಹರಿತವಾದ ದಾಳಿ ಸಂಘಟಿಸಿದರೆ ಚೆನ್ನೈ ಮೇಲುಗೈಯನ್ನು ನಿರೀಕ್ಷಿಸಬಹುದು. ಧೋನಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ
Image
RR vs DC: ರಾಜಸ್ಥಾನ್ ವಿರುದ್ಧ ಡೆಲ್ಲಿ ಗೆಲ್ಲುತ್ತಿದ್ದಂತೆ ಆರ್​​ಸಿಬಿ ತಂಡಕ್ಕೆ ಫುಲ್ ಖುಷ್: ಯಾಕೆ ಗೊತ್ತೇ?
Image
IPL 2022: ಸಚಿನ್​ರ 13 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಗಿಲ್
Image
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
Image
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!

ಇತ್ತ ಎಂಐ ನಾಯಕ ರೋಹಿತ್ ಶರ್ಮ, ಇಶಾನ್ ಕಿಶನ್, ಕೀರಾನ್ ಪೊಲ್ಲಾರ್ಡ್ ಅವರಂಥ ಆಟಗಾರರು ಫಾರ್ಮ್ ಕೊರತೆಯಿಂದಲೇ ಮುಂಬೈ ಇಂದು ಈ ಸ್ಥಿತಿಗೆ ಬಂದು ನಿಂತಿದೆ. ಕಳೆದ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತು ಅಮೋಘ ದಾಳಿ ನಡೆಸಿದ ನಡುವೆಯೂ ಮುಂಬೈ, ಕೆಕೆಆರ್ ವಿರುದ್ಧ ಭಾರಿ ಅಂತರದಿಂದ ಸೋತಿತ್ತು. ಸತತ ವೈಫಲ್ಯ ಕಾಣುತ್ತಿರುವ ಪೊಲ್ಲಾರ್ಡ್ ಅವರನ್ನು ಕೈಬಿಡಲು ಮುಂಬೈ ಟೀಮ್ ಮ್ಯಾನೇಜ್‌ಮೆಂಟ್ ಈ ಸಲವಾದರೂ ಮನಸ್ಸು ಮಾಡುವುದೇ ಎಂಬುದನ್ನು ಕಾದುನೋಡಬೇಕು. ಇವರ ಬದಲು ಫ್ಯಾಬಿಯನ್ ಅಲೆನ್ ಅಥವಾ ಡಿವಾಲ್ಡ್ ಬ್ರೆವಿಸ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಬಹುದು.

ಉಭಯ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 33 ಪಂದ್ಯಗಳು ನಡೆದಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಒಟ್ಟಾರೆ ಚೆನ್ನೈ ವಿರುದ್ಧ ಮುಂಬೈ ಮೇಲುಗೈ ಸಾಧಿಸಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.