IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್ಗೆ ಹೊಸ ಚಿಂತೆ ಶುರು..!
Gujarat Titans: ಗುಜರಾತ್ ಟೈಟನ್ಸ್ ತಂಡ ಕೂಡ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದು ಹ್ಯಾಟ್ರಿಕ್ ಗೆಲುವು ತನ್ನದಾಗಿಸಿಕೊಂಡಿತು. ಆದರೆ ನಾಲ್ಕನೇ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು ಗುಜರಾತ್ ಟೈಟನ್ಸ್ಗೆ ಮೊದಲ ಸೋಲಿನ ರುಚಿ ತೋರಿಸಿತ್ತು.
IPL 2022: ಈ ಬಾರಿಯ ಐಪಿಎಲ್ನಲ್ಲಿ ಹೊಸ ತಂಡಗಳಾಗಿ ಗುಜರಾತ್ ಟೈಟನ್ಸ್ (Gujarat Titans) ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಕಾಣಿಸಿಕೊಂಡಿದೆ. ಇದೀಗ ಆಡಿರುವ 12 ಪಂದ್ಯಗಳಲ್ಲಿ 9 ಗೆಲುವು ದಾಖಲಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡವು ಪ್ಲೇಆಫ್ ಪ್ರವೇಶಿಸಿದೆ. ಈ ಮೂಲಕ ಐಪಿಎಲ್ ಸೀಸನ್ 15 ನಲ್ಲಿ ಪ್ಲೇಆಫ್ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿ ಗುಜರಾತ್ ತಂಡ ಹೊರಹೊಮ್ಮಿದೆ. ಆದರೆ ಇಲ್ಲಿ ಪ್ರಮುಖ ವಿಷಯ ಎಂದರೆ 2016 ರಲ್ಲಿ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ಗುಜರಾತ್ ಲಯನ್ಸ್ ತಂಡದ ಪ್ರದರ್ಶನಕ್ಕೂ ಈಗಿನ ಗುಜರಾತ್ ಟೈಟನ್ಸ್ ತಂಡದ ಪ್ರದರ್ಶನಕ್ಕೂ ತುಂಬಾ ಸಾಮ್ಯತೆಯಿರುವುದು ವಿಶೇಷ.
ಅಂದರೆ 2016 ರಲ್ಲಿ ಸುರೇಶ್ ರೈನಾ ಮುನ್ನಡೆಸಿದ್ದ ಗುಜರಾತ್ ಲಯನ್ಸ್ ತಂಡವು ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಸೋಲುವ ಮೂಲಕ ಮೊದಲ ಸೋಲಿನ ರುಚಿ ನೋಡಿತ್ತು.
ಈ ಬಾರಿ ಗುಜರಾತ್ ಟೈಟನ್ಸ್ ತಂಡ ಕೂಡ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದು ಹ್ಯಾಟ್ರಿಕ್ ಗೆಲುವು ತನ್ನದಾಗಿಸಿಕೊಂಡಿತು. ಆದರೆ ನಾಲ್ಕನೇ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವು ಗುಜರಾತ್ ಟೈಟನ್ಸ್ಗೆ ಮೊದಲ ಸೋಲಿನ ರುಚಿ ತೋರಿಸಿತ್ತು. ಅಂದರೆ 2016 ಮತ್ತು 2022 ರಲ್ಲಿ ಗುಜರಾತ್ ತಂಡಕ್ಕೆ ಮೊದಲ ಸೋಲುಣಿಸಿದ್ದು ಸನ್ರೈಸರ್ಸ್ ಹೈದರಾಬಾದ್.
ಅಷ್ಟೇ ಅಲ್ಲದೆ 2016 ರಲ್ಲಿ ಗುಜರಾತ್ ಲಯನ್ಸ್ ಅಂದಿನ ಮತ್ತೊಂದು ಹೊಸ ತಂಡವಾಗಿದ್ದ ಪುಣೆ ಸೂಪರ್ ಜೈಂಟ್ಸ್ ವಿರುದ್ದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿತ್ತು. ವಿಶೇಷ ಎಂದರೆ 2022 ರಲ್ಲಿ ಗುಜರಾತ್ ಟೈಟನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ 2 ಪಂದ್ಯಗಳನ್ನೂ ಗೆದ್ದುಕೊಂಡಿದೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ 2016 ರಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಗುಜರಾತ್ ಲಯನ್ಸ್. ಇದೀಗ 2022 ರಲ್ಲಿ ಗುಜರಾತ್ ಟೈಟನ್ಸ್ ತಂಡವೇ ಮೊದಲಿಗರಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಕಾಕತಾಳೀಯ ಎಂಬಂತೆ ಗುಜರಾತ್ ಫ್ರಾಂಚೈಸಿಗಳ ಇದುವರೆಗಿನ ಪ್ರದರ್ಶನದಲ್ಲಿ ಸಾಮ್ಯತೆ ಕಂಡು ಬಂದಿದೆ.
ಇದಾಗ್ಯೂ ಪ್ಲೇಆಫ್ ವಿಷಯದಲ್ಲಿ ಈ ಸಾಮ್ಯತೆ ಕಂಡು ಬರದಿರಲಿ ಎಂಬುದೇ ಇದೀಗ ಗುಜರಾತ್ ಟೈಟನ್ಸ್ ಅಭಿಮಾನಿಗಳ ಆಶಯ. ಏಕೆಂದರೆ 2016 ರಲ್ಲಿ ಪ್ಲೇಆಫ್ಗೆ ಮೊದಲಿಗರಾಗಿ ಎಂಟ್ರಿಕೊಟ್ಟಿದ್ದ ಗುಜರಾತ್ ಲಯನ್ಸ್ ತಂಡವು ಆ ಬಳಿಕ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು, ನಂತರ 2ನೇ ಕ್ವಾಲಿಫೈಯರ್ನಲ್ಲೂ ಸೋಲನುಭವಿಸಿತು. ಈ ಮೂಲಕ ಫೈನಲ್ಗೇರುವ ಅವಕಾಶವನ್ನು ತಪ್ಪಿಸಿಕೊಂಡಿತ್ತು. ಇಲ್ಲಿ ಲೀಗ್ ಹಂತದಲ್ಲಿ ಎರಡು ತಂಡಗಳ ಪ್ರದರ್ಶನದಲ್ಲಿ ಸಾಮ್ಯತೆ ಕಂಡು ಬಂದಿರುವ ಕಾರಣ, ಪ್ಲೇಆಫ್ ಹಂತದ ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಸೋಲನುಭವಿಸುತ್ತಾ ಎಂಬ ಭಯ ಅಭಿಮಾನಿಗಳನ್ನು ಕಾಡುತ್ತಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Wed, 11 May 22