R. Ashwin: ಇದು ಕ್ರಿಕೆಟ್ ಅಥವಾ ಹಾಕಿ?: ಆರ್. ಅಶ್ವಿನ್ ವಿಚಿತ್ರ ಹೊಡೆತಕ್ಕೆ ಶಾಕ್ ಆದ ಕ್ರಿಕೆಟ್ ಜಗತ್ತು
RR vs DC, IPL 2022: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್. ಅಶ್ವಿನ್ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಉಪಯುಕ್ತ ಕಾಣಿಕೆ ನೀಡಿದರು. ಈ ಪಂದ್ಯದಲ್ಲಿ ಅಶ್ವಿನ್ ಅವರ ಬ್ಯಾಟಿಂಗ್ ವೈಖರಿ ವಿಶೇಷವಾಗಿತ್ತು. ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಇವರು ಹೊಡೆಯಲು ಯತ್ನಿಸಿದ ವೈಖರಿ ಸಖತ್ ವೈರಲ್ ಆಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡ ಐಪಿಎಲ್ 2022 (IPL 2022) ರಲ್ಲಿ ಆರನೇ ಜಯ ತನ್ನದಾಗಿಸಿತು. 161 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಇನ್ನೂ 11 ಎಸೆತ ಬಾಕಿಯಿರುವಂತೆಯೆ ಜಯ ಸಾಧಿಸಿತು. ಕಳೆದುಕೊಂಡಿದ್ದು ಕೇವಲ ಎರಡು ವಿಕೆಟ್ಗಳನ್ನಷ್ಟೆ. ಮಿಚೆಲ್ ಮಾರ್ಶ್ (89) ಹಾಗೂ ಡೇವಿಡ್ ವಾರ್ನರ್ (52*) ಬೊಂಬಾಟ್ ಜೊತೆಯಾಟ ಆಡಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬೇಗನೆ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತು. ಬಟ್ಲರ್ ನಿರ್ಗಮನದ ಬೆನ್ನಲ್ಲೆ ಅಂದುಕೊಂಡಂತೆ ರವಿಚಂದ್ರನ್ ಅಶ್ವಿನ್ (Ravichandran Ashwin) ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಈ ಬಾರಿ ಯಶಸ್ವಿ ಕೂಡ ಆದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. 38 ಎಸೆತಗಳನ್ನು ಎದುರಿಸಿದ ಅಶ್ವಿನ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಔಟ್ ಕೂಡ ಆದರು.
ಈ ಪಂದ್ಯದಲ್ಲಿ ಅಶ್ವಿನ್ ಅವರ ಬ್ಯಾಟಿಂಗ್ ವೈಖರಿ ವಿಶೇಷವಾಗಿತ್ತು. ಕೆಲ ಅಮೋಘ ಹೊಡೆತಗಳ ಮೂಲಕ ಗಮನ ಸೆಳೆದರು. ಆದರೆ, ಕುಲ್ದೀಪ್ ಯಾದವ್ ಅವರ ಬೌಲಿಂಗ್ನಲ್ಲಿ ಇವರು ಹೊಡೆಯಲು ಯತ್ನಿಸಿದ ವೈಖರಿ ಸಖತ್ ವೈರಲ್ ಆಗುತ್ತಿದೆ. ಹಾಕಿಯಲ್ಲಿ ಚೆಂಡನ್ನು ನೆಟ್ನೊಳಗೆ ಅಟ್ಟಲು ಕುಳಿತುಕುಳ್ಳುವ ರೀತಿಯಲ್ಲಿ ಬ್ಯಾಟ್ ಅನ್ನೂ ಕೂಡ ಅದೇರೀತಿ ಹಿಡಿದಿರುವ ಇವರ ಪೋಸ್ ಸಖತ್ ಟ್ರೋಲ್ ಆಗುತ್ತಿದೆ. ಇದು ಕ್ರಿಕೆಟ್ ಪಂದ್ಯವೋ ಅಥವಾ ಹಾಕಿ ಪಂದ್ಯವೋ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
Stance by Ravi Ashwin. pic.twitter.com/pwbCTe7j31
— Johns. (@CricCrazyJohns) May 11, 2022
Ashwin batting stance mei hockey penalty corner kyu le raha hai?
— Abijit Ganguly (@AbijitG) May 11, 2022
Ashwin’s batting stance :- Today in Future pic.twitter.com/gAAs44TVOj
— Amit (@ImRo745) May 11, 2022
ಈ ಪಂದ್ಯದಲ್ಲಿ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಜಾಸ್ ಬಟ್ಲರ್ ಮೊದಲ ವಿಕೆಟ್‌ಗೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಎಡವಿದರು. 2.5 ಓವರ್‌ಗಳಾಗಿದ್ದಾಗ ಜಾಸ್ ಬಟ್ಲರ್ 11 ಎಸೆತಗಳಲ್ಲಿ 7 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಆರ್. ಅಶ್ವಿನ್ 38 ಎಸೆತಗಳಲ್ಲಿ 50 ರನ್ ಕಲೆ ಹಾಕಿ ಔಟಾದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ತಂಡದ ನಾಯಕ ಸಂಜು ಸ್ಯಾಮ್ಸನ್ 6 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ 5 ಎಸೆತಗಳಲ್ಲಿ 9 ರನ್ ಗಳಿಸಿ ಚೇತನ್ ಸಕರಿಯಾಗೆ ವಿಕೆಟ್ ಒಪ್ಪಿಸಿದರು. ದೇವದತ್ ಪಡಿಕ್ಕಲ್ 30 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರೆ, ರಸ್ಸೆ ವಾನ್ ಡೆರ್ ಡಸ್ಸೆನ್ 10 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗುಳಿದರು. ಡೆಲ್ಲಿ ಪರ ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ಶ್ರೀಕರ್ ಭರತ್(0) ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಜೊತೆಯಾದ ಡೇವಿಡ್ ವಾರ್ನರ್ 52* ರನ್(41 ಬಾಲ್, 5 ಬೌಂಡರಿ, 1 ಸಿಕ್ಸ್) ಹಾಗೂ ಮಿಚೆಲ್ ಮಾರ್ಷ್ 89 ರನ್(62 ಬಾಲ್, 5 ಬೌಂಡರಿ, 7 ಸಿಕ್ಸ್) ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ ಈ ಜೋಡಿ 143 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಸ್ಪೋಟಕ ಆಟವಾಡಿದ ಮಾರ್ಷ್, 89 ರನ್‌ಗಳಿಸಿ ಔಟಾದರು. ನಂತರ ಬಂದ ರಿಷಭ್ ಪಂತ್(13*) ತಂಡವನ್ನು 18.1 ಓವರ್ನಲ್ಲೇ ಗೆಲುವಿನ ದಡಸೇರಿದರು. ಈ ಮೂಲಕ 8 ವಿಕೆಟ್ಗಳ ಜಯ ಸಾಧಿಸಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:26 am, Thu, 12 May 22