IPL 2022 playoffs scenarios: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
IPL 2022 playoffs scenarios explained: ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ತಂಡಗಳಲ್ಲಿ ಒಂದು ಅಥವಾ ಎರಡು ತಂಡಗಳ ಪಾಯಿಂಟ್ಸ್ 14 ಆಗಿದ್ದರೆ ಮಾತ್ರ ಉಳಿದ ಪಂದ್ಯಗಳನ್ನು ಗೆದ್ದು ಕೆಕೆಆರ್ ಪ್ಲೇಆಫ್ ಪ್ರವೇಶಿಸಬಹುದು.
IPL 2022: ಐಪಿಎಲ್ ಸೀಸನ್ 15 ನಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಆಡಿರುವ 12 ಪಂದ್ಯಗಳಲ್ಲಿ 9 ಗೆಲುವು ದಾಖಲಿಸುವ ಮೂಲಕ ಗುಜರಾತ್ ತಂಡವು ಒಟ್ಟು 18 ಪಾಯಿಂಟ್ಸ್ ಕಲೆಹಾಕಿ ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ. ಆದರೆ ಮತ್ತೊಂದೆಡೆ ಪ್ಲೇಆಫ್ ರೇಸ್ನಲ್ಲಿ ಇನ್ನೂ 8 ತಂಡಗಳಿವೆ. ಏಕೆಂದರೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ 16 ಅಂಕ ಪಡೆದಿದ್ದು, ಈ ತಂಡ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಇನ್ನೂ ಒಂದು ಪಂದ್ಯ ಗೆಲ್ಲಬೇಕಿದೆ. ಹಾಗಿದ್ರೆ ಪ್ಲೇಆಫ್ ಅರ್ಹತೆ ಪಡೆಯಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ನೋಡೋಣ…
ಗುಜರಾತ್ ಟೈಟನ್ಸ್ -(12 ಪಂದ್ಯಗಳು, 9 ಗೆಲುವುಗಳು, 3 ಸೋಲುಗಳು, 18 ಅಂಕಗಳು, +0.385 NRR): ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ -(12 ಪಂದ್ಯಗಳು, 8 ಗೆಲುವುಗಳು, 4 ಸೋಲುಗಳು, 16 ಅಂಕಗಳು, +0.385 NRR): ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೆ ಲಕ್ನೋ ತಂಡವು ಪ್ಲೇಆಫ್ ಪ್ರವೇಶಿಸಲಿದೆ.
ರಾಜಸ್ಥಾನ್ ರಾಯಲ್ಸ್ -(11 ಪಂದ್ಯಗಳು, 7 ಗೆಲುವುಗಳು, 4 ಸೋಲುಗಳು, 14 ಅಂಕಗಳು, +0.326 NRR): ಉಳಿದಿರುವ 3 ಪಂದ್ಯಗಳಲ್ಲಿ 2 ಮ್ಯಾಚ್ ಗೆದ್ದರೆ ಪ್ಲೇಆಫ್ ಖಚಿತವಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು -(12 ಪಂದ್ಯಗಳು, 7 ಗೆಲುವುಗಳು, 5 ಸೋಲುಗಳು, 14 ಅಂಕಗಳು, -0.115 NRR): ಇನ್ನುಳಿದ 2 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ -(11 ಪಂದ್ಯಗಳು, 5 ಗೆಲುವುಗಳು, 6 ಸೋಲುಗಳು, 10 ಅಂಕಗಳು, +0.150 NRR): ಮುಂದಿನ 3 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಡೆಲ್ಲಿಗೆ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 4 ತಂಡಗಳಲ್ಲಿ ಒಂದು ತಂಡವು 16 ಅಂಕ ಪಡೆದರೆ ಮಾತ್ರ ನೆಟ್ ರನ್ ರೇಟ್ ಮೂಲಕ ಅವಕಾಶ ದೊರೆಯಲಿದೆ.
ಸನ್‌ರೈಸರ್ಸ್ ಹೈದರಾಬಾದ್ -(11 ಪಂದ್ಯಗಳು, 5 ಗೆಲುವುಗಳು, 6 ಸೋಲುಗಳು, 10 ಅಂಕಗಳು, -0.031 NRR): ಎಸ್ಆರ್ಹೆಚ್ ತಂಡಕ್ಕೂ ಮುಂದಿನ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಬಹುದು. ಅದು ಕೂಡ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕು 4 ತಂಡಗಳಲ್ಲಿ ಒಂದು ತಂಡವು 16 ಪಾಯಿಂಟ್ಸ್ ಪಡೆದಿದ್ದರೆ ಮಾತ್ರ. ಈ ಮೂಲಕ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಡಬಹುದು.
ಪಂಜಾಬ್ ಕಿಂಗ್ಸ್ -(11 ಪಂದ್ಯಗಳು, 5 ಗೆಲುವುಗಳು, 6 ಸೋಲುಗಳು, 10 ಅಂಕಗಳು, -0.231 NRR): ಮುಂದಿನ 3 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಕೂಡ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 4 ತಂಡಗಳಲ್ಲಿ ಒಂದು ತಂಡವು 16 ಅಂಕ ಪಡೆದರೆ ಮಾತ್ರ ನೆಟ್ ರನ್ ರೇಟ್ ಮೂಲಕ ಈ ಅವಕಾಶ ದೊರೆಯಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ -(12 ಪಂದ್ಯಗಳು, 5 ಗೆಲುವುಗಳು, 7 ಸೋಲುಗಳು, 10 ಅಂಕಗಳು, -0.057 NRR): ಕೆಕೆಆರ್ ತಂಡಕ್ಕೆ ಇನ್ನು 2 ಮ್ಯಾಚ್ಗಳಿದ್ದು, ಇದರಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಆದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 14 ಅಂಕ ಪಡೆದಿರುವ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ 16 ಪಾಯಿಂಟ್ಸ್ ಪಡೆದರೆ ಈ ಅವಕಾಶ ಇರುವುದಿಲ್ಲ. ಅಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ತಂಡಗಳಲ್ಲಿ ಒಂದು ಅಥವಾ ಎರಡು ತಂಡಗಳ ಪಾಯಿಂಟ್ಸ್ 14 ಆಗಿದ್ದರೆ ಮಾತ್ರ ಉಳಿದ ಪಂದ್ಯಗಳನ್ನು ಗೆದ್ದು ಕೆಕೆಆರ್ ಪ್ಲೇಆಫ್ ಪ್ರವೇಶಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ -(11 ಪಂದ್ಯಗಳು, 4 ಗೆಲುವುಗಳು, 7 ಸೋಲುಗಳು, 8 ಅಂಕಗಳು, +0.028 ಅಂಕಗಳು): ಸಿಎಸ್ಕೆ ತಂಡಕ್ಕೂ ಅದೃಷ್ಟದ ಮೇಲೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಬಹುದು. ಆದರೆ ಇಲ್ಲಿ 3ನೇ ಅಥವಾ 4ನೇ ಸ್ಥಾನದಲ್ಲಿರುವ ತಂಡದ ಪಾಯಿಂಟ್ಸ್ 16 ಆಗಬಾರದು. ಅಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ತಂಡಗಳಲ್ಲಿ ಒಂದು ಅಥವಾ ಎರಡು ತಂಡಗಳ ಪಾಯಿಂಟ್ಸ್ 14 ಆಗಿದ್ದರೆ ಮಾತ್ರ ಉಳಿದ ಪಂದ್ಯಗಳನ್ನು ಗೆದ್ದು ಸಿಎಸ್ಕೆ 14 ಅಂಕ ಪಡೆದು ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸಬಹುದು.
ಮುಂಬೈ ಇಂಡಿಯನ್ಸ್: ಆಡಿರುವ 12 ಮ್ಯಾಚ್ಗಳಲ್ಲಿ 9 ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಅಂದಹಾಗೆ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಕೆಕೆಆರ್ ಹಾಗೂ ಸಿಎಸ್ಕೆ ತಂಡಗಳು ಕೂಡ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.