LSG vs GT, IPL 2022: ಸೋತ ಲಕ್ನೋ: ಪ್ಲೇಆಫ್​ಗೆ ಎಂಟ್ರಿಕೊಟ್ಟ ಗುಜರಾತ್ ಟೈಟನ್ಸ್

Lucknow Super Giants vs Gujarat Titans: ಈಪಂದ್ಯದಲ್ಲಿ ಗೆಲ್ಲುವ ಮೂಲಕ ಐಪಿಎಲ್ ಸೀಸನ್ 15 ನಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ.

LSG vs GT, IPL 2022: ಸೋತ ಲಕ್ನೋ: ಪ್ಲೇಆಫ್​ಗೆ ಎಂಟ್ರಿಕೊಟ್ಟ ಗುಜರಾತ್ ಟೈಟನ್ಸ್
LSG vs GT Live Score, IPL 2022
Image Credit source: ESPNcricinfo

| Edited By: Zahir PY

May 10, 2022 | 10:56 PM

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 57ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ ತಂಡವನ್ನು ಸೋಲಿಸಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ತಂಡ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಐಪಿಎಲ್​ ಸೀಸನ್​ 15 ನಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಶುಭ್​ಮನ್ ಗಿಲ್ (63) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು  20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್​ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ದ ಗುಜರಾತ್ ಟೈಟನ್ಸ್ ಬೌಲರ್​ಗಳು ಪರಾಕ್ರಮ ಮೆರೆದರು. ಅದರಲ್ಲೂ ನಾಲ್ಕು ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಲಕ್ನೋ ಪಾಲಿಗೆ ಕಂಟಕವಾದರು. ಅಂತಿಮವಾಗಿ 13.5 ಓವರ್​ಗಳಲ್ಲಿ 82 ರನ್​ಗಳಿಗೆ ಆಲೌಟ್ ಆಗುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 62 ರನ್​ಗಳಿಂದ ಹೀನಾಯ ಸೋಲೊಪ್ಪಿಕೊಂಡಿತು.

ಉಭಯ ತಂಡಗಳ ಪ್ಲೇಯಿಂಗ್ XI:

ಲಕ್ನೋ ಸೂಪರ್ ಜೈಂಟ್ಸ್​: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಅವೇಶ್ ಖಾನ್

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯು ವೇಡ್, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಕಿಶೋರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.

LIVE NEWS & UPDATES

The liveblog has ended.
 • 10 May 2022 10:55 PM (IST)

  ಪ್ಲೇಆಫ್​ಗೆ ಎಂಟ್ರಿಕೊಟ್ಟ ಗುಜರಾತ್ ಟೈಟನ್ಸ್

 • 10 May 2022 10:49 PM (IST)

  ಲಕ್ನೋ ಸೂಪರ್ ಜೈಂಟ್ಸ್​ಗೆ ಹೀನಾಯ ಸೋಲು

  GT 144/4 (20)

  LSG 82 (13.5)

  ರಶೀದ್ ಖಾನ್​ಗೆ 4 ವಿಕೆಟ್

 • 10 May 2022 10:47 PM (IST)

  ಲಕ್ನೋ ತಂಡಕ್ಕೆ 62 ರನ್​ಗಳ ಸೋಲು

  GT 144/4 (20)

  LSG 82 (13.5)

   

 • 10 May 2022 10:45 PM (IST)

  ಬ್ಯಾಕ್ ಟು ಬ್ಯಾಕ್ ಸಿಕ್ಸ್

  ರಶೀದ್ ಖಾನ್​ಗೆ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಅವೇಶ್ ಖಾನ್

  LSG 82/9 (13.3)

   

 • 10 May 2022 10:44 PM (IST)

  ಹೂಡ ಔಟ್

  ರಶೀದ್ ಖಾನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ದೀಪಕ್ ಹೂಡ (27)

  LSG 70/9 (13.1)

   

 • 10 May 2022 10:40 PM (IST)

  ಸಾಯಿ ಕಿಶೋರ್​ಗೆ ಮತ್ತೊಂದು ವಿಕೆಟ್

  ಸಾಯಿ ಕಿಶೋರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಮೊಹ್ಸಿನ್ ಖಾನ್...ರಶೀದ್ ಖಾನ್​ಗೆ ಕ್ಯಾಚ್...ಔಟ್

  LSG 70/8 (13)

   

 • 10 May 2022 10:35 PM (IST)

  7ನೇ ವಿಕೆಟ್ ಪತನ

  ರಶೀದ್ ಖಾನ್ ಎಸೆತದಲ್ಲಿ ಜೇಸನ್ ಹೋಲ್ಡರ್ ಎಲ್​ಬಿಡಬ್ಲ್ಯೂ

  LSG 67/7 (12)

   

 • 10 May 2022 10:32 PM (IST)

  ಸ್ಟೋಯಿನಿಸ್ ಔಟ್

  ಕೇವಲ 2 ರನ್​ಗಳಿಸಿ ರನೌಟ್ ಆದ ಮಾರ್ಕಸ್ ಸ್ಟೋಯಿನಿಸ್

  LSG 65/6 (11.2)

   

 • 10 May 2022 10:27 PM (IST)

  ಲಕ್ನೋ 5ನೇ ವಿಕೆಟ್ ಪತನ

  ಸಾಯಿ ಕಿಶೋರ್ ಎಸೆತದಲ್ಲಿ ಆಯುಷ್ ಬಡೋನಿ (8) ಔಟ್

  LSG 61/5 (10.5)

   

 • 10 May 2022 10:17 PM (IST)

  ವೆಲ್ಕಂ ಬೌಂಡರಿ

  ಅಲ್ಝಾರಿ ಜೋಸೆಫ್ ಎಸೆತದಲ್ಲಿ ಫೋರ್ ಬಾರಿಸಿದ ಆಯುಷ್ ಬದೋನಿ್

  LSG 52/4 (8.4)

   

 • 10 May 2022 10:12 PM (IST)

  ರಶೀದ್ ಖಾನ್ ಮ್ಯಾಜಿಕ್

  ರಶೀದ್ ಖಾನ್ ಮ್ಯಾಜಿಕ್ ಸ್ಪಿನ್ ಬೌಲ್​ನ ಗುರುತಿಸಲು ಎಡವಿದ ಕೃನಾಲ್ ಪಾಂಡ್ಯ..ಕ್ರೀಸ್​ನಿಂದ ಮುನ್ನುಗ್ಗಿ ಬಂದು ಹೊಡೆಯಲು ಯತ್ನ...ಸ್ಟಂಪ್ ಔಟ್

  LSG 45/4 (7.3)

   

 • 10 May 2022 10:07 PM (IST)

  LSG 44/3 (7)

  ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್

 • 10 May 2022 10:02 PM (IST)

  ಪವರ್​ಪ್ಲೇ ಮುಕ್ತಾಯ

  ಪವರ್​ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡ ಲಕ್ನೋ

  6 ಓವರ್​ನಲ್ಲಿ ಕೇವಲ 37 ರನ್​ ನೀಡಿದ ಗುಜರಾತ್ ಟೈಟನ್ಸ್​​ ಬೌಲರ್​ಗಳು

  ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್

  LSG 37/3 (6)

   

 • 10 May 2022 10:01 PM (IST)

  ಲಕ್ನೋ 3ನೇ ವಿಕೆಟ್ ಪತನ

  ಯಶ್ ದಯಾಳ್ ಎಸೆತದಲ್ಲಿ ಮಿಲ್ಲರ್​ಗೆ ಸುಲಭ ಕ್ಯಾಚ್ ನೀಡಿದ ಕರಣ್ ಶರ್ಮಾ (4)..ಔಟ್

  LSG 33/3 (5.5)

   

 • 10 May 2022 09:59 PM (IST)

  ಶರ್ಮಾ ಶಾಟ್

  ಯಶ್ ದಯಾಳ್ ಎಸೆತದಲ್ಲಿ ಐಪಿಎಲ್​ನಲ್ಲಿ ಮೊದಲ ಫೋರ್ ಬಾರಿಸಿದ ಕರಣ್ ಶರ್ಮಾ

  LSG 33/2 (5.4)

   

 • 10 May 2022 09:57 PM (IST)

  ಸ್ಟ್ರೈಟ್ ಡ್ರೈವ್

  ಯಶ್ ದಯಾಳ್ ಎಸೆತಕ್ಕೆ ದೀಪಕ್ ಹೂಡಾ ಸ್ಟ್ರೈಟ್ ಡ್ರೈವ್...ಫೋರ್

  LSG 29/2 (5.2)

   

 • 10 May 2022 09:55 PM (IST)

  ಕೆಎಲ್ ರಾಹುಲ್ ಔಟ್

  ಮೊಹಮ್ಮದ್ ಶಮಿ ಎಸೆತದಲ್ಲಿ ಕೀಪರ್ ಕ್ಯಾಚ್...ಕೆಎಲ್ ರಾಹುಲ್ (8) ಔಟ್

  LSG 24/2 (4.5)

   

 • 10 May 2022 09:47 PM (IST)

  ಸಾಯಿ ಕಿಶೋರ್ ಉತ್ತಮ ಕ್ಯಾಚ್

  ಯಶ್ ದಯಾಳ್ ಎಸೆತದಲ್ಲಿ ಸಾಯಿ ಕಿಶೋರ್ ಉತ್ತಮ ಕ್ಯಾಚ್...ಕ್ವಿಂಟನ್ ಡಿಕಾಕ್ (11) ಔಟ್

  LSG 19/1 (3.3)

   

 • 10 May 2022 09:47 PM (IST)

  ಭರ್ಜರಿ ಸಿಕ್ಸ್

  ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್

  LSG 19/0 (3.2)

   

 • 10 May 2022 09:44 PM (IST)

  3 ಓವರ್ ಮುಕ್ತಾಯ

  LSG 12/0 (3)

  ಕ್ರೀಸ್​ನಲ್ಲಿ ಕೆಎಲ್ ರಾಹುಲ್-ಕ್ವಿಂಟನ್ ಡಿಕಾಕ್ ಬ್ಯಾಟಿಂಗ್

   

 • 10 May 2022 09:39 PM (IST)

  ಮೊದಲ ಬೌಂಡರಿ

  ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಫೋರ್ ಬಾರಿಸಿದ ಕೆಎಲ್ ರಾಹುಲ್

  LSG 10/0 (2)

   

 • 10 May 2022 09:33 PM (IST)

  ಲಕ್ನೋ ಬ್ಯಾಟಿಂಗ್ ಶುರು

  ಆರಂಭಿಕರು; ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್

  ಮೊದಲ ಓವರ್: ಮೊಹಮ್ಮದ್ ಶಮಿ

 • 10 May 2022 09:13 PM (IST)

  ಗುಜರಾತ್ ಟೈಟನ್ಸ್ ಇನಿಂಗ್ಸ್​ ಅಂತ್ಯ

  GT 144/4 (20)

   

   

 • 10 May 2022 09:09 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಜೇಸನ್ ಹೋಲ್ಡರ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ತೆವಾಟಿಯಾ

  GT 134/4 (19.2)

   

 • 10 May 2022 09:06 PM (IST)

  ಕೊನೆಯ ಓವರ್ ಬಾಕಿ

  GT 128/4 (19)

   

 • 10 May 2022 09:04 PM (IST)

  ಮಿಸ್ ಫೀಲ್ಡ್​

  ಆಯುಷ್ ಬದೋನಿ ಮಿಸ್ ಫೀಲ್ಡ್​...ಅವೇಶ್ ಖಾನ್​ ಎಸೆತದಲ್ಲಿ ಫೋರ್ ಗಿಟ್ಟಿಸಿಕೊಂಡ ರಾಹುಲ್ ತೆವಾಟಿಯಾ

  GT 128/4 (18.3)

    

 • 10 May 2022 08:54 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಚಮೀರಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಿಲ್

  GT 114/4 (16.4)

    

 • 10 May 2022 08:53 PM (IST)

  ವೆಲ್ಕಂ ಬೌಂಡರಿ

  ಚಮೀರಾ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

  GT 109/4 (16.3)

    

 • 10 May 2022 08:51 PM (IST)

  ಗಿಲ್ ಫಿಫ್ಟಿ

  42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್

  GT 104/4 (16.1)

    

 • 10 May 2022 08:50 PM (IST)

  ಮಿಲ್ಲರ್ ಔಟ್

  ಹೋಲ್ಡರ್ ಎಸೆತದಲ್ಲಿ ಸ್ಕ್ವೇರ್​ ಥರ್ಡ್​ ಮ್ಯಾನ್​ನತ್ತ ಕ್ಯಾಚ್ ನೀಡಿ ಹೊರನಡೆದ ಡೇವಿಡ್ ಮಿಲ್ಲರ್ (26)

  GT 103/4 (16)

    

 • 10 May 2022 08:46 PM (IST)

  ಕಿಲ್ಲರ್ ಶಾಟ್

  ಹೋಲ್ಡರ್ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್

  GT 100/3 (15.3)

    

 • 10 May 2022 08:45 PM (IST)

  GT 93/3 (15)

  ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ಶುಭ್​ಮನ್ ಗಿಲ್ ಬ್ಯಾಟಿಂಗ್

 • 10 May 2022 08:34 PM (IST)

  13 ಓವರ್ ಮುಕ್ತಾಯ

  GT 82/3 (13)

    

  ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ಶುಭ್​ಮನ್ ಗಿಲ್ ಬ್ಯಾಟಿಂಗ್

 • 10 May 2022 08:28 PM (IST)

  ಮಿಲ್ಲರ್ ಹಿಟ್

  ಜೇಸನ್ ಹೋಲ್ಡರ್ ಎಸೆತದಲ್ಲಿ ಬ್ಯಾಕ್​ವರ್ಡ್ ಪಾಯಿಂಟ್​ನತ್ತ ಫೋರ್ ಬಾರಿಸಿದ ಡೇವಿಡ್ ಮಿಲ್ಲರ್

  GT 74/3 (11.4)

    

 • 10 May 2022 08:23 PM (IST)

  ವೆಲ್ಕಂ ಬೌಂಡರಿ

  ಕೃನಾಲ್ ಪಾಂಡ್ಯ ಎಸೆತದಲ್ಲಿ ರಿವರ್ಸ್​ ಸ್ಕೂಪ್ ಶಾಟ್ ಮೂಲಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

  GT 68/3 (10.5)

    

 • 10 May 2022 08:20 PM (IST)

  10 ಓವರ್ ಮುಕ್ತಾಯ

  GT 59/3 (10)

    

  ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ಶುಭ್​ಮನ್ ಗಿಲ್ ಬ್ಯಾಟಿಂಗ್

 • 10 May 2022 08:15 PM (IST)

  ಗುಜರಾತ್ ಟೈಟನ್ಸ್ 3ನೇ ವಿಕೆಟ್ ಪತನ

  ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (11)

  GT 51/3 (9.1)

    

 • 10 May 2022 08:12 PM (IST)

  9 ಓವರ್ ಮುಕ್ತಾಯ

  GT 51/2 (9)

    

  ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

  ಮ್ಯಾಥ್ಯೂ ವೇಡ್ ಹಾಗೂ ವೃದ್ಧಿಮಾನ್ ಸಾಹ ಔಟ್

  ಮೊಹ್ಸಿನ್ ಖಾನ್ ಹಾಗೂ ಅವೇಶ್​ ಖಾನ್​ಗೆ ತಲಾ ಒಂದು ವಿಕೆಟ್

 • 10 May 2022 08:00 PM (IST)

  ಪವರ್​ಪ್ಲೇ ಮುಕ್ತಾಯ: ಟೈಟನ್ಸ್ 2 ವಿಕೆಟ್ ಪತನ

  GT 35/2 (6)

    

  ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

 • 10 May 2022 07:58 PM (IST)

  ವಾಟ್ ಎ ಶಾಟ್

  ಚಮೀರಾ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಆಕರ್ಷಕ ಫೋರ್ ಬಾರಿಸಿದ ಗಿಲ್

  GT 35/2 (5.4)

    

 • 10 May 2022 07:55 PM (IST)

  ಗಿಲ್ ಹಿಟ್

  ಅವೇಶ್ ಖಾನ್ ಎಸೆತದಲ್ಲಿ ಆನ್​ ಸೈಡ್​ನತ್ತ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

  GT 29/2 (4.5)

    

    

 • 10 May 2022 07:53 PM (IST)

  ಗುಜರಾತ್ ಟೈಟನ್ಸ್ 2ನೇ ವಿಕೆಟ್ ಪತನ

  ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಮ್ಯಾಥ್ಯೂ ವೇಡ್ (10)

  GT 24/2 (4.2)

    

 • 10 May 2022 07:47 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಚಮೀರಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಮ್ಯಾಥ್ಯೂ ವೇಡ್

  GT 21/1 (3.2)

    

 • 10 May 2022 07:46 PM (IST)

  ವೇಡ್ ಮಾರ್ಕ್​

  ಆಫ್​ ಸೈಡ್ ಬೌಂಡರಿ ಮೂಲಕ ದುಷ್ಮಂತ ಚಮೀರಾರನ್ನು ಸ್ವಾಗತಿಸಿದ ಮ್ಯಾಥ್ಯೂ ವೇಡ್

  GT 17/1 (3.1)

    

 • 10 May 2022 07:45 PM (IST)

  ಸ್ಕ್ವೇರ್ ಕಟ್

  ಮೊಹ್ಸಿನ್ ಖಾನ್ ಎಸೆತದಲ್ಲಿ ಸೂಪರ್ ಸ್ಕ್ವೇರ್ ಕಟ್...ಗಿಲ್ ಬ್ಯಾಟ್​ನಿಂದ ಮೊದಲ ಫೋರ್

  GT 13/1 (3)

    

 • 10 May 2022 07:43 PM (IST)

  ಗುಜರಾತ್ ಟೈಟನ್ಸ್ ಮೊದಲ ವಿಕೆಟ್ ಪತನ

  ಮೊಹ್ಸಿನ್ ಖಾನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ವೃದ್ದಿಮಾನ್ ಸಾಹ (5)

  GT 8/1 (2.4)

    

 • 10 May 2022 07:39 PM (IST)

  ಮೊದಲ ಬೌಂಡರಿ

  ದುಷ್ಮಂತ ಚಮೀರಾ ಎಸೆತದಲ್ಲಿ ಫೋರ್ ಬಾರಿಸಿ ಬೌಂಡರಿ ಖಾತೆ ತೆರೆದ ವೃದ್ದಿಮಾನ್ ಸಾಹ

  GT 7/0 (2)

    

 • 10 May 2022 07:34 PM (IST)

  ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆರಂಭ

  ಮೊದಲ ಓವರ್ - ಮೊಹ್ಸಿನ್ ಖಾನ್

  ಆರಂಭಿಕರು- ವೃದ್ದಿಮಾನ್ ಸಾಹ, ಶುಭ್​ಮನ್ ಗಿಲ್

  GT 2/0 (1)

    

 • 10 May 2022 07:15 PM (IST)

  GT ಪ್ಲೇಯಿಂಗ್ 11

  ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯು ವೇಡ್, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಕಿಶೋರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.

 • 10 May 2022 07:14 PM (IST)

  LSG ಪ್ಲೇಯಿಂಗ್ 11

  ಲಕ್ನೋ ಸೂಪರ್ ಜೈಂಟ್ಸ್​: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಅವೇಶ್ ಖಾನ್

 • 10 May 2022 07:07 PM (IST)

  ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11

  ಲಕ್ನೋ ಸೂಪರ್ ಜೈಂಟ್ಸ್​: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಅವೇಶ್ ಖಾನ್

 • 10 May 2022 07:06 PM (IST)

  ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11

  ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯು ವೇಡ್, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಕಿಶೋರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.

 • 10 May 2022 07:02 PM (IST)

  ಟಾಸ್ ಗೆದ್ದ ಗುಜರಾತ್ ಟೈಟನ್ಸ್

  ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

 • 10 May 2022 06:49 PM (IST)

  ಪ್ರಸ್ತುತ ಪಾಯಿಂಟ್ಸ್​ ಟೇಬಲ್ ಹೀಗಿದೆ

 • 10 May 2022 06:39 PM (IST)

  ಗುಜರಾತ್ ಟೈಟನ್ಸ್ ಪಡೆ

 • 10 May 2022 06:38 PM (IST)

  ಲಕ್ನೋ ಸೂಪರ್ ಜೈಂಟ್ಸ್ ಪಡೆ

 • 10 May 2022 06:36 PM (IST)

  ಯುವ ನಾಯಕರುಗಳು: ಕೆಎಲ್ ರಾಹುಲ್ vs ಹಾರ್ದಿಕ್ ಪಾಂಡ್ಯ

Published On - May 10,2022 6:34 PM

Follow us on

Related Stories

Most Read Stories

Click on your DTH Provider to Add TV9 Kannada