ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ: ಕೈ ಪಕ್ಷಕ್ಕೆ ಜೀವ ತುಂಬುವುದೇ? ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಹರಕೆ, ಹಾರೈಕೆ -ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆ
ಕಾಂಗ್ರೆಸ್‌ನಂತಹ 137 ವರ್ಷಗಳಷ್ಟು ಹಳೆಯದಾದ ಪಕ್ಷವು ತನ್ನ ಪುನರುಜ್ಜೀವಕ್ಕಾಗಿ ಪಕ್ಷದಲ್ಲಿ ಸಾಕಷ್ಟು ಸಮರ್ಥ ನಾಯಕರಿಲ್ಲವೇ ಎಂಬ ಬಗ್ಗೆ ಮಾತನಾಡಿದ್ದ ವೀರಪ್ಪ ಮೊಯ್ಲಿ, ಸಮರ್ಥ ನಾಯಕರಿದ್ದಾರೆ. ನಮ್ಮಲ್ಲಿ ಸಂಪನ್ಮೂಲಗಳಿವೆ. ಆದರೆ ಅದನ್ನು ಚಾನೆಲೈಸ್ ಮಾಡಬೇಕಾಗಿದೆ. 2024ರಲ್ಲಿ ಬಿಜೆಪಿಯನ್ನು ವಿರೋಧಿಸುವ ಇತರ ಪಕ್ಷಗಳು ಸರ್ಕಾರವನ್ನು ರಚಿಸಬೇಕು. ಯುಪಿಎ 3 ಹೊರಹೊಮ್ಮಬೇಕು ಎಂದು ಹೇಳಿದ್ದಾರೆ.
ರಾಜಸ್ತಾನದ ಉದಯಪುರದಲ್ಲಿ (Udaipur) ಇಂದು ಪ್ರಾರಂಭವಾಗಿ ಮೂರು ದಿನ ನಡೆಯುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ(Chintan Shivir) ದೇಶದ ಅತೀ ಹಳೆಯ ಪಕ್ಷ ಯಾವ ರೀತಿಯ ಆತ್ಮ ವಿಮರ್ಶೆ ಮಾಡಬಹುದು? ಆ ಮೂಲಕ ಕಾರ್ಯಕರ್ತರಿಗೆ ಯಾವ ರೀತಿಯ ಸಂದೇಶ ನೀಡಬಹುದು? ಜೊತೆಗೆ, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಮಾತ್ರ ಈ ರೀತಿಯ ಕ್ರಾಂತಿಕಾರಿ ಬದಲಾವಣೆ ಆಗುವ ಸಾಧ್ಯತೆ ಇದೆಯೇ? ಚಿಂತನ ಶಿಬಿರವು ಕೈ ಪಕ್ಷಕ್ಕೆ ಜೀವ ತುಂಬುವುದೇ? ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಹರಕೆ, ಹಾರೈಕೆಯಾಗಿದೆ. ಈ ಕುರಿತು ಆ್ಯಂಕರ್ ಹರಿಪ್ರಸಾದ್, ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)
ಸತತ ಚುನಾವಣಾ ಸೋಲುಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪುನರ್‌ಪರಿಶೀಲನೆ ಮತ್ತು ಪುನರುಜ್ಜೀವನಕ್ಕಾಗಿ ಪಕ್ಷದ ಕಾರ್ಯತಂತ್ರವನ್ನು ರೂಪಿಸಲು ದೇಶಾದ್ಯಂತದ ಸುಮಾರು 400 ಹಿರಿಯ ಕಾಂಗ್ರೆಸ್ ನಾಯಕರು ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಚಿಂತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಮೇ 13ರಿಂದ 15ರವರೆಗೆ ರೆಸಾರ್ಟ್‌ನಲ್ಲಿ ಚಿಂತನ ಶಿಬಿರ (Chintan Shivir) ನಡೆಯಲಿದೆ. ಅಲ್ಲಿ ಪಕ್ಷಕ್ಕೆ ಏನು ಕೊರತೆಯಿದೆ ಮತ್ತು ಅದರ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ಏನು ಮಾಡಬೇಕು ಎಂಬುದರ ಕುರಿತು ನಾಯಕರು ಚರ್ಚಿಸಲಿದ್ದಾರೆ.
ಕಾಂಗ್ರೆಸ್‌ನಂತಹ 137 ವರ್ಷಗಳಷ್ಟು ಹಳೆಯದಾದ ಪಕ್ಷವು ತನ್ನ ಪುನರುಜ್ಜೀವಕ್ಕಾಗಿ ಪಕ್ಷದಲ್ಲಿ ಸಾಕಷ್ಟು ಸಮರ್ಥ ನಾಯಕರಿಲ್ಲವೇ ಎಂಬ ಬಗ್ಗೆ ಮಾತನಾಡಿದ್ದ ವೀರಪ್ಪ ಮೊಯ್ಲಿ, ಕಾಂಗ್ರೆಸ್ನಲ್ಲಿ ಹಲವು ಸಮರ್ಥ ನಾಯಕರಿದ್ದಾರೆ. ನಮ್ಮಲ್ಲಿ ಸಂಪನ್ಮೂಲಗಳಿವೆ. ಆದರೆ ಅದನ್ನು ಚಾನೆಲೈಸ್ ಮಾಡಬೇಕಾಗಿದೆ. ಅದಕ್ಕಾಗಿ ತಂತ್ರವಿರಬೇಕು. 2024ರಲ್ಲಿ ಬಿಜೆಪಿಯನ್ನು ವಿರೋಧಿಸುವ ಇತರ ಪಕ್ಷಗಳು ಸರ್ಕಾರವನ್ನು ರಚಿಸಬೇಕು. ಯುಪಿಎ 3 ಹೊರಹೊಮ್ಮಬೇಕು ಎಂದು ಹೇಳಿದ್ದಾರೆ.