ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್​ಗೆ ಮೂಡಿತು ಅನುಮಾನ

ಕಂಗನಾ ದೊಡ್ಡ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಯಲ್ಲಿ ಅನೇಕರು ಭಾಗಿಯಾಗಿದ್ದರು. ಆಗ ಕಂಗನಾ ವ್ಯಕ್ತಿಯೊಬ್ಬರಿಗೆ ನಿರಂತರವಾಗಿ ಕಿಸ್ ಮಾಡಿದ್ದಾರೆ.

ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್​ಗೆ ಮೂಡಿತು ಅನುಮಾನ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 17, 2022 | 9:47 PM

ನಟಿ ಕಂಗನಾ ರಣಾವತ್ (Kangana Ranaut)​ ಸದಾ ಸುದ್ದಿಯಲ್ಲಿರೋಕೆ ಬಯಸುತ್ತಾರೆ. ಅವರು ನೆಗೆಟಿವ್ ವಿಚಾರಗಳಿಗೆ ಸುದ್ದಿ ಆಗೋದು ಹೆಚ್ಚು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುವುದಿಲ್ಲ. ಈ ಕಾರಣಕ್ಕೆ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತದೆ. ಈಗ ಕಂಗನಾ ಸಖತ್ ಸುದ್ದಿ ಆಗಿದ್ದಾರೆ. ‘ಧಾಕಡ್’ ಸಿನಿಮಾ (Dhaakad Movie) ತೆರೆಕಾಣುವುದಕ್ಕೂ ಮೊದಲು ಕಂಗನಾ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಅವರು ವ್ಯಕ್ತಿಯೊಬ್ಬರಿಗೆ ಪದೇಪದೇ ಕಿಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಇನ್ನೂ ಕೆಲವರು ಕಂಗನಾ ಬಗ್ಗೆ ಕೀಳಾಗಿ ಕಮೆಂಟ್ ಮಾಡುತ್ತಿದ್ದಾರೆ.

‘ಧಾಕಡ್​​’ ಸಿನಿಮಾದಲ್ಲಿ ಸ್ಪೈ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇ 20ರಂದು ತೆರೆಗೆ ಬರುತ್ತಿದೆ. ಸಿನಿಮಾ ತೆರೆಗೆ ಬರುವುದಕ್ಕೂ ಮೊದಲು ಕಂಗನಾ ದೊಡ್ಡ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಯಲ್ಲಿ ಅನೇಕರು ಭಾಗಿಯಾಗಿದ್ದರು. ಆಗ ಕಂಗನಾ ವ್ಯಕ್ತಿಯೊಬ್ಬರಿಗೆ ನಿರಂತರವಾಗಿ ಕಿಸ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು
Image
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?
Image
Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?
Image
‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

ಇದನ್ನೂ ಓದಿ: ಬಾಲಿವುಡ್​ನ ಯಾರೊಬ್ಬರಿಗೂ ನನ್ನ ಮನೆಗೆ ಬರುವ ಅರ್ಹತೆ ಇಲ್ಲ; ಕಂಗನಾ ನೇರ ನುಡಿ

ಕಂಗನಾ ಈ ರೀತಿ ಕಿಸ್ ಮಾಡಿದ್ದು ಶಿವಂ​ ಸಿಂಗ್ ಅವರಿಗೆ. ಶಿವಂ​ ಅವರು ಇತ್ತೀಚೆಗೆ ಪೂರ್ಣಗೊಂಡ ‘ಲಾಕಪ್​’ ಶೋನಲ್ಲಿ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದರು. ಈ ಶೋ ಅನ್ನು ಕಂಗನಾ ನಡೆಸಿಕೊಟ್ಟಿದ್ದರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಶೋ ಮುಗಿದ ಬಳಿಕವೂ ಅದು ಮುಂದುವರಿದಿದೆ. ಹೀಗಾಗಿ, ಕಂಗನಾ ಅವರು ಶಿವಂಗೆ ಕಿಸ್ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನ ಯಾರೊಬ್ಬರಿಗೂ ನನ್ನ ಮನೆಗೆ ಬರುವ ಅರ್ಹತೆ ಇಲ್ಲ; ಕಂಗನಾ ನೇರ ನುಡಿ

ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ‘ಕಂಗನಾಗೆ ಒಂಟಿಯಾಗಿದ್ದು ಸಾಕಾಗಿದೆ. ಅದಕ್ಕಾಗಿ ಈ ರೀತಿ ಆಡುತ್ತಿದ್ದಾರೆ. ಅವರು ಒಂದು ಮದುವೆ ಆದರೆ ಎಲ್ಲವೂ ಸರಿ ಆಗುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಕಂಗನಾ ಉಳಿದವರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಆದರೆ, ತಮ್ಮ ವಿಚಾರದ ಬಂದಾಗ ಈ ರೀತಿ ಮಾಡುತ್ತಾರೆ’ ಎಂದಿದ್ದಾರೆ.

ಬಾಲಿವುಡ್​ನಲ್ಲಿ ನನಗೆ ಗೆಳೆಯರಿಲ್ಲ ಎಂದಿದ್ದ ಕಂಗನಾ:

ಯೂಟ್ಯೂಬ್ ಚಾನೆಲ್ ಒಂದಕ್ಕೆ ಕಂಗನಾ ಸಂದರ್ಶನ ನೀಡಿದ್ದಾರೆ. ‘ಬಾಲಿವುಡ್​ನ ಮೂವರನ್ನು ಮನೆಗೆ ಊಟಕ್ಕೆ ಕರೆಯುವುದಾದರೆ ಅವರು ಯಾರ್ಯಾರು’ ಎಂದು ಕಂಗನಾಗೆ ಕೇಳಲಾಯಿತು. ಇದಕ್ಕೆ ಕಂಗನಾ ಒಂದು ಕ್ಷಣವೂ ಯೋಚಿಸದೆ ಉತ್ತರ ನೀಡಿದ್ದಾರೆ. ‘ಇದಕ್ಕೆ ಬಾಲಿವುಡ್​ನ ಯಾರೊಬ್ಬರೂ ಅರ್ಹರಲ್ಲ. ಮನೆಯಿಂದ ಹೊರಗೆ ಅವರನ್ನು ಭೇಟಿ ಆಗುವುದು ಓಕೆ. ಆದರೆ, ಮನೆಗೆ ಆಮಂತ್ರಿಸಲು ಯಾರೂ ಅರ್ಹರಲ್ಲ’ ಎಂದಿದ್ದರು ಕಂಗನಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್