Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?
ಪ್ರಿಯಾಂಕಾ ಚೋಪ್ರಾ
Image Credit source: Priyanka Chopra/ Instagram

Citadel Series: ಪ್ರಸ್ತುತ ‘ಸಿಟಾಡೆಲ್’ನ ಚಿತ್ರೀಕರಣದಲ್ಲಿರುವ ಪ್ರಿಯಾಂಕಾ ಚೋಪ್ರಾ, ಶೂಟಿಂಗ್ ಸೆಟ್​ನ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಮುಖಕ್ಕೆ ಏಟು ಬಿದ್ದಂತಿದ್ದು, ರಕ್ತಸಿಕ್ತವಾಗಿದೆ. ಫೋಟೋ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ.

TV9kannada Web Team

| Edited By: shivaprasad.hs

May 18, 2022 | 4:09 PM

ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ನಟಿ ಆಗಾಗ ಹೊಸ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಚಿತ್ರೀಕರಣದಲ್ಲಿ ಭಾಗಿಯಾದ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕವೂ ಸುದ್ದಿಯಲ್ಲಿರುತ್ತಾರೆ ಪ್ರಿಯಾಂಕಾ. ಆದರೆ ಇದೀಗ ಅವರು ಹಂಚಿಕೊಂಡಿರುವ ಪೋಟೋವೊಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ‘ಸಿಟಾಡೆಲ್’ನ (Citadel Series) ಚಿತ್ರೀಕರಣದಲ್ಲಿರುವ ಪ್ರಿಯಾಂಕಾ ಚೋಪ್ರಾ, ಶೂಟಿಂಗ್ ಸೆಟ್​ನ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಮುಖಕ್ಕೆ ಏಟು ಬಿದ್ದಂತಿದ್ದು, ರಕ್ತಸಿಕ್ತವಾಗಿದೆ. ‘ನಿಮಗೂ ಇಂದು ಕಠಿಣ ದಿನವಾಗಿದೆಯೇ?’ ಎಂದು ಕ್ಯಾಪ್ಶನ್ ನೀಡಿದ್ದಾರೆ ನಟಿ. ಹ್ಯಾಶ್​ಟ್ಯಾಗ್​ನಲ್ಲಿ ‘ಕಲಾವಿದರ ಜೀವನ’, ‘ಸಿಟಾಡೆಲ್’ ಎಂದು ಬರೆದಿದ್ದಾರೆ ಪ್ರಿಯಾಂಕಾ. ಚಿತ್ರ ನೋಡಿದ ಅಭಿಮಾನಿಗಳು ಕ್ಯಾಪ್ಶನ್ ಗಮನಿಸಿ ಆತಂಕಗೊಂಡಿದ್ದು, ನಟಿಗೆ ನಿಜವಾಗಿಯೂ ಗಾಯಗಾಳಗಿವೆಯೇ? ಈಗ ಆರೋಗ್ಯ ಹೇಗಿದೆ ಎಂದೆಲ್ಲಾ ಕಳಕಳಿಯಿಂದ ಪ್ರಶ್ನಿಸಿದ್ದಾರೆ. ಮತ್ತೆ ಹಲವರು ನಟಿ ಹಂಚಿಕೊಂಡಿರುವ ಚಿತ್ರ ಮೇಕಪ್​ ಆಗಿರಬಹುದು ಎಂದು ಊಹಿಸಿದ್ದಾರೆ. ಹಲವರು ಚಿತ್ರ ನೋಡಿ ಶಾಕ್ ಆಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಸ್ತುತ ಪ್ರಿಯಾಂಕಾ ಹಂಚಿಕೊಂಡ ಫೋಟೋ ವೈರಲ್ ಆಗಿದೆ.

View this post on Instagram

A post shared by Priyanka (@priyankachopra)

‘ಸಿಟಾಡೆಲ್’ ಸೈನ್ಸ್​​ ಫಿಕ್ಷನ್ ಸೀರೀಸ್ ಆಗಿದ್ದು, ಪ್ರಖ್ಯಾತ ರಸ್ಸೋ ಬ್ರದರ್ಸ್ ಅಮೆಜಾನ್ ಪ್ರೈಮ್​ಗಾಗಿ ಇದನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ರಿಚರ್ಡ್​ ಮ್ಯಾಡೆನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಲಂಡನ್​ನಲ್ಲಿ ಒಂದು ಹಂತದ ಚಿತ್ರೀಕರಣವನ್ನು ಪ್ರಿಯಾಂಕಾ ಪೂರ್ಣಗೊಳಿಸಿದ್ದರು. ಪ್ರಿಯಾಂಕಾ ಬಾಲಿವುಡ್​ಗೆ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಅಡ್ವೆಂಚರ್ ಚಿತ್ರವಾದ ‘ಜೀ ಲೇ ಜರಾ’ದಲ್ಲಿ ಆಲಿಯಾ ಭಟ್ ಹಾಗೂ ಕತ್ರಿನಾ ಕೈಫ್ ಜತೆ ನಟಿ ಬಣ್ಣಹಚ್ಚುತ್ತಿದ್ದಾರೆ. ಫರ್ಹಾನ್ ಅಖ್ತರ್ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದಲ್ಲದೇ ಹಾಲಿವುಡ್​ನ ‘ಇಟ್ಸ್​​ ಆಲ್ ಕಮಿಂಗ್ ಬ್ಯಾಕ್ ಟು ಮಿ’ ಹಾಗೂ ‘ಎಂಡಿಂಗ್ ಥಿಂಗ್ಸ್​​’ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಪ್ರಿಯಾಂಕಾ.

ಇದನ್ನೂ ಓದಿ: ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​

ಜನವರಿಯಲ್ಲಿ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜನನದ ಕಾರಣದಿಂದ ನಟಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚೆಗೆ ಪುತ್ರಿಯ ಹೆಸರನ್ನು ರಿವೀಲ್ ಮಾಡಿದ್ದ ನಿಕ್- ಪ್ರಿಯಾಂಕಾ ದಂಪತಿ ಮಗುವಿನ ಜನನದ ಸಂದರ್ಭದ ಕಷ್ಟದ ದಿನಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು.

ಸರೋಗೆಸಿ ಮೂಲಕ ನಿಕ್ ಹಾಗೂ ಪ್ರಿಯಾಂಕಾ ಪಡೆದ ಮೊದಲ ಮಗು, ಅವಧಿಗೂ ಮುನ್ನವೇ (ಆರೂವರೆ ತಿಂಗಳಿಗೆ) ಜನಿಸಿತ್ತು. ‘ವಿಶ್ವ ಅಮ್ಮಂದಿರ ದಿನ’ದಂದು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ನಟಿ, 100ಕ್ಕೂ ಹೆಚ್ಚು ದಿನಗಳ ಕಾಲ ಮಗು ಐಸಿಯುನಲ್ಲಿ ಇತ್ತು ಎಂಬದನ್ನು ತಿಳಿಸಿದ್ದರು. ಇದೀಗ ಮಗುವನ್ನು ಮನೆಗೆ ಕರೆತರಲಾಗಿದ್ದು, ಪ್ರಿಯಾಂಕಾ ದಂಪತಿಗಳ ಆರೈಕೆಯಲ್ಲಿ ಬೆಳೆಯುತ್ತಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada