Kichcha Sudeep: ಧನಂಜಯ್ ನಟನೆಯ ‘ಟ್ವೆಂಟಿ ಒನ್ ಅವರ್ಸ್’ ವೀಕ್ಷಿಸಿ, ಚಿತ್ರತಂಡಕ್ಕೆ ಆತಿಥ್ಯ ನೀಡಿದ ಕಿಚ್ಚ ಸುದೀಪ್; ಸಿನಿಮಾ ನೋಡಿ ಹೇಳಿದ್ದೇನು?

Dhananjay | 21 Hours Film: ಡಾಲಿ ಧನಂಜಯ ನಟನೆಯ ‘21 ಅವರ್ಸ್​​’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೇ 20ರಂದು ತೆರೆ ಕಾಣುತ್ತಿರುವ ಚಿತ್ರವನ್ನು ಕಿಚ್ಚ ಸುದೀಪ್ ವೀಕ್ಷಿಸಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

Kichcha Sudeep: ಧನಂಜಯ್ ನಟನೆಯ ‘ಟ್ವೆಂಟಿ ಒನ್ ಅವರ್ಸ್’ ವೀಕ್ಷಿಸಿ, ಚಿತ್ರತಂಡಕ್ಕೆ ಆತಿಥ್ಯ ನೀಡಿದ ಕಿಚ್ಚ ಸುದೀಪ್; ಸಿನಿಮಾ ನೋಡಿ ಹೇಳಿದ್ದೇನು?
‘21 ಅವರ್ಸ್​​’ ಚಿತ್ರದ ಪೋಸ್ಟರ್ (ಎಡ ಚಿತ್ರ), ಕಿಚ್ಚ ಸುದೀಪ್ ಜತೆ ಧನಂಜಯ್ (ಬಲ ಚಿತ್ರ)Image Credit source: Dhananjay/ Twitter
Follow us
TV9 Web
| Updated By: shivaprasad.hs

Updated on:May 18, 2022 | 4:05 PM

ಸ್ಯಾಂಡಲ್​ವುಡ್ ನಟ ಧನಂಜಯ (Dhananjay) ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ಹೊಸ ಚಿತ್ರ ‘ಟ್ವೆಂಟಿ ಒನ್ ಅವರ್ಸ್’ (21 Hours Movie) ತೆರೆಗೆ ಬರಲು ಸಿದ್ಧವಾಗಿದೆ. ಮೇ 20 ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಚಿತ್ರವು ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುವ ಕತೆಯನ್ನು ಒಳಗೊಂಡಿದೆ. ಇನ್ವೆಸ್ಟಿಗೇಶನ್ ಥ್ರಿಲ್ಲರ್ ಮಾದರಿಯ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ ಧನಂಜಯ್. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರವು ಮೊದಲು ಕನ್ನಡದಲ್ಲಿ ತೆರೆಕಂಡು ನಂತರ ಮಲಯಾಳಂನಲ್ಲಿ ತೆರೆಕಾಣಲಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್ (Kichcha Sudeep) ಮತ್ತಷ್ಟು ಧೈರ್ಯ ತುಂಬಿದ್ದಾರೆ. ಹೊಸ ಚಿತ್ರಗಳನ್ನು ವೀಕ್ಷಿಸಿ ಬೆನ್ನುತಟ್ಟುವ ಕಿಚ್ಚ, ‘21 ಅವರ್ಸ್’ ಚಿತ್ರವನ್ನು ವೀಕ್ಷಿಸಿದ್ದಾರೆ. ಅದನ್ನು ಇಷ್ಟಪಟ್ಟಿರುವುದಲ್ಲದೇ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಬಗ್ಗೆ ಡಾಲಿ ಧನಂಜಯ್ ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಸುದೀಪ್ ತಮ್ಮ ಪ್ರೀತಿಪಾತ್ರರಿಗೆ ತಾವೇ ಕೈಯಾರೆ ರುಚಿಕರ ಆಹಾರ ತಯಾರಿಸಿ ಪ್ರೀತಿಯಿಂದ ಉಣಬಡಿಸುತ್ತಾರೆ. ಧನಂಜಯ್ ನೇತೃತ್ವದ ‘21 ಅವರ್ಸ್​’ ಚಿತ್ರತಂಡಕ್ಕೂ ಸುದೀಪ್ ಕಡೆಯಿಂದ ಇಂಥದ್ದೇ ಆತಿಥ್ಯ ಸಿಕ್ಕಿದೆ. ಚಿತ್ರ ನೋಡಿ ಇಷ್ಟಪಟ್ಟ ಸುದೀಪ್, ಕೈಯಾರೆ ದೋಸೆ ಮಾಡಿಕೊಟ್ಟು ಚಿತ್ರತಂಡಕ್ಕೆ ಆತಿಥ್ಯ ನೀಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಧನಂಜಯ್, ‘‘ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡೀ ತಂಡ ಆಭಾರಿ’’ ಎಂದು ಧನ್ಯವಾದ ಹೇಳಿದ್ದಾರೆ. ‘‘ನಿಮ್ಮ ನೇರ ನುಡಿ ನನಗೆ ಬಹಳ ಇಷ್ಟವಾಯಿತು’’ ಎಂದೂ ಸುದೀಪ್ ಕುರಿತು ಬರೆದಿದ್ದಾರೆ ಧನಂಜಯ್.

ಇದನ್ನೂ ಓದಿ
Image
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​
Image
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು
Image
ವೆಕೇಶನ್ ಮೂಡ್​ನಲ್ಲಿ ನಟಿ ರಾಕುಲ್ ಪ್ರೀತ್​ ಸಿಂಗ್; ಇಲ್ಲಿವೆ ಫೋಟೋಗಳು
Image
Anupama Parameswaran: ಸಿಂಪಲ್ ಗೆಟಪ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್

ಧನಂಜಯ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಚಿತ್ರ ನೋಡಿ ಕಿಚ್ಚ ಹೇಳಿದ್ದೇನು?

‘21 ಅವರ್ಸ್’ ಚಿತ್ರದ ಕತೆ ಕುತೂಹಲಕಾರಿಯಾಗಿದ್ದು, ಬಹಳ ಚೆನ್ನಾಗಿ ಪಾತ್ರ ನಿರ್ವಹಣೆ ಮಾಡಿದ್ದೀರಿ ಎಂದು ಧನಂಜಯ್​ರನ್ನು ಹೊಗಳಿದ್ದಾರೆ ಕಿಚ್ಚ ಸುದೀಪ್. ವಿಶೇಷವಾಗಿ ಚಿತ್ರದ ಹಿನ್ನೆಲೆ ಸಂಗೀತವನ್ನು ಕಿಚ್ಚ ಹೊಗಳಿದ್ದಾರೆ. ಈ ಬಗ್ಗೆ ಸುದೀಪ್ ಹಂಚಿಕೊಂಡ ಟ್ವೀಟ್ ಇಲ್ಲಿದೆ.

ಇದನ್ನೂ ಓದಿ: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?

‘21 ಅವರ್ಸ್​’ ಚಿತ್ರವನ್ನು ಜೈಶಂಕರ್ ನಿರ್ದೇಶಿಸಿದ್ದು, ಇದು ಅವರ ಚೊಚ್ಚಲ ಚಿತ್ರವಾಗಿದೆ. 21 ಗಂಟೆಗಳ ಅವಧಿಯಲ್ಲಿ ನಡೆಯುವ ಕತೆಯನ್ನು ಅವರು ಈ ಚಿತ್ರದಲ್ಲಿ ಕಟ್ಟಿಕೊಡಲಿದ್ದಾರೆ. ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮೊದಲಾದ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

‘ಟ್ವೆಂಟಿ ಒನ್ ಅವರ್ಸ್’ ಟ್ರೇಲರ್ ಇಲ್ಲಿದೆ:

ಲಾಕ್​ಡೌನ್​ನಲ್ಲಿ ಸಿದ್ಧಗೊಂಡ ‘ಟ್ವೆಂಟಿ ಒನ್ ಅವರ್ಸ್’ ಚಿತ್ರವು ಮೇ 20ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ‘ಕೆಆರ್​ಜಿ ಕನೆಕ್ಟ್ಸ್​​’ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದೆ. ಈ ಚಿತ್ರದ ಮೂಲಕ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಧನಂಜಯ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:44 pm, Wed, 18 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ