‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್​ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’: ಪ್ರಿಯಾಂಕಾ ಉಪೇಂದ್ರ

ಸ್ಟಾರ್​ ನಟಿಯರಿಗೂ ಬಾಡಿ ಶೇಮಿಂಗ್​ ತಪ್ಪಿದ್ದಲ್ಲ. ಆ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಅವರು ಮಾತನಾಡಿದ್ದಾರೆ.

TV9kannada Web Team

| Edited By: Madan Kumar

May 18, 2022 | 5:28 PM

ನಟಿಯರ ಸೌಂದರ್ಯದ ಬಗ್ಗೆ ಚಿತ್ರರಂಗದಲ್ಲಿ ಮತ್ತು ಸಮಾಜದಲ್ಲಿ ಒಂದಷ್ಟು ತಪ್ಪು ಕಲ್ಪನೆಗಳಿವೆ. ಬಣ್ಣದ ಲೋಕದಲ್ಲಿ ಹೀರೋಯಿನ್​ಗಳು ಹೀಗೆಯೇ ಇರಬೇಕು ಎಂದು ಒತ್ತಡ ಹೇರಲಾಗುತ್ತದೆ. ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡರೆ ಜೀವನ ಮಾಡವುದೇ ಕಷ್ಟ ಆಗುತ್ತದೆ. ಇತ್ತೀಚೆಗೆ ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ನಟಿ ಚೇತನಾ ರಾಜ್ (Chetana Raj)​ ಪ್ರಾಣ ಕಳೆದುಕೊಂಡರು. ಆ ಹಿನ್ನೆಲೆಯಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್​ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಚಿತ್ರರಂಗದಲ್ಲಿನ ಇಷ್ಟು ವರ್ಷಗಳ ಅನುಭವದ ಆಧಾರದಲ್ಲಿ ಅವರು ಈ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada