ನಮ್ಮದು ಜನಕಲ್ಯಾಣ ಗುರಿಯ ಪಂಚರತ್ನ ಕಾರ್ಯಕ್ರಮವಾದರೆ, ಬಿಜೆಪಿಯದ್ದು ಲೂಟಿ ಹೊಡೆಯುವ ಪಂಚರತ್ನ ಕಾರ್ಯಕ್ರಮ: ಕುಮಾರಸ್ವಾಮಿ

ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕವಾಗಿ ಅಭಿವೃದ್ಧಿ ಮಾಡುವ ನೆಪ ಹಣವನ್ನು ಲೂಟಿ ಮಾಡುವುದು ಬಿಜೆಪಿಯ ಪಂಚರತ್ನ ಸೂತ್ರವಾಗಿದೆ. ಆದರೆ, ನಮ್ಮ ಪಂಚರತ್ನ ಕಾರ್ಯಕ್ರಮ ಸರ್ಕಾರವನ್ನು ಜನರಲ್ಲಿಗೆ ಕರೆದೊಯ್ದು ಅವರ ಕಷ್ಟಸುಖಗಳನ್ನು ವಿಚಾರಿಸುವುದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

TV9kannada Web Team

| Edited By: Arun Belly

May 18, 2022 | 7:42 PM

Bengaluru: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿಂತ ಮೊದಲು ಜೆಡಿ(ಎಸ್) ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ತಯಾರಿ ಶುರುವಿಟ್ಟುಕೊಂಡಿದೆ. ಹಾಗೆ ನೋಡಿದರೆ ಏಪ್ರಿಲ್ 16 ರಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅರಂಭಿಸಿದ ಜನತಾ ಜಲಧಾರೆ (Janatha Jaladhare) ಕಾರ್ಯಕ್ರಮದಿಂದಲೇ ಪಕ್ಷದ ಚುನಾವಣಾ ಪ್ರಚಾರ (electioneering) ಶುರುವಾಯಿತು. ಬುಧವಾರ ಬೆಂಗಳೂರಲ್ಲಿ ಕುಮಾರಸ್ವಾಮಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಅಧಿಕಾರದಲ್ಲಿರುವ ಬಿಜೆಪಿಯ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯ ನಾಯಕರು ಕುಮಾರಸ್ವಾಮಿ ಘೋಷಿಸಿರುವ ಪಂಚರತ್ನ ಕಾರ್ಯಕ್ರಮವನ್ನು ಗೇಲಿ ಮಾಡಿರುವುದು ಅವರನ್ನು ಕೆರಳಿಸಿದೆ.

ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಹೆಚ್ ಕೆ ಡಿ ಬಿ ನಿಗಮದ ಚೇರ್ಮನ್ ಆಗಿರುವ ಬಿಜೆಪಿ ಶಾಸಕ ಮತ್ತು ಇತರ ಕೆಲ ಶಾಸಕರು ನಡೆಸಿರುವ 160 ಕೋಟಿ ರೂ. ಗಳ ಅವ್ಯವಹಾರದ ಬಗ್ಗೆ ಅವರ ಪಕ್ಷದ ಶಾಸಕರೇ ಮಾತಾಡಿಕೊಂಡಿರುವ ಅಡಿಯೋ ಕ್ಲಿಪ್ಪಿಂಗ್ ತಮಗೆ ಸಿಕ್ಕಿದೆ, ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕವಾಗಿ ಅಭಿವೃದ್ಧಿ ಮಾಡುವ ನೆಪ ಹಣವನ್ನು ಲೂಟಿ ಮಾಡುವುದು ಬಿಜೆಪಿಯ ಪಂಚರತ್ನ ಸೂತ್ರವಾಗಿದೆ. ಆದರೆ, ನಮ್ಮ ಪಂಚರತ್ನ ಕಾರ್ಯಕ್ರಮ ಸರ್ಕಾರವನ್ನು ಜನರಲ್ಲಿಗೆ ಕರೆದೊಯ್ದು ಅವರ ಕಷ್ಟಸುಖಗಳನ್ನು ವಿಚಾರಿಸುವುದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಚುನಾವಣಾ ಪ್ರಚಾರದ ಭಾಗವಾಗಿ ಕುಮಾರಸ್ವಾಮಿ ಅವರು 123 ಟಾಟಾ ಏಸ್ ವಾಹನಗಳನ್ನು ಖರೀದಿಸಿದ್ದಾರೆ. 123 ವಾಹನಗಳನ್ನು ಖರೀದಿಸುವುದರ ಹಿಂದೆ ಒಂದು ಉದ್ದಿಶ್ಯವಿದೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಕುಮಾರಸ್ವಾಮಿಯವರ ಗುರಿಯಾಗಿದೆ.

ಇದನ್ನೂ ಓದಿ:  ರಾಮಸ್ವಾಮಿಗೆ ಸಚಿವಸ್ಥಾನ ನೀಡುವ ಬಗ್ಗೆ ದೇವೇಗೌಡರ ಜೊತೆ ಮಾತನಾಡುತ್ತೇನೆ, ಅವರನ್ನು ಮತ್ತೊಮ್ಮೆ ಗೆಲ್ಲಿಸಿ: ಕುಮಾರಸ್ವಾಮಿ

Follow us on

Click on your DTH Provider to Add TV9 Kannada