ಅಪ್ಪಾಜಿ ಕ್ಯಾಂಟೀನಲ್ಲಿ ಗ್ರಾಹಕರಿಗೆ ಊಟ ನೀಡಿದ ಬಳಿಕ ನಿಖಿಲ್ ಕುಮಾರಸ್ವಾಮಿ ಕೂಡ ರಾಗಿಮುದ್ದೆ ಸವಿದರು 

ಬರ್ತ್ ಡೇ ಪ್ರಯುಕ್ತ ಕ್ಯಾಂಟೀನಲ್ಲಿ ಕೇಕ್ ಕತ್ತರಿಸಿ ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರಿಗೆ ಹಂಚಲಾಯಿತು. ಖುದ್ದು ನಿಖಿಲ್ ಅವರೇ ತಮಗೆ ಕೇಕ್ ನೀಡಿದ್ದಕ್ಕೆ ಸಿಬ್ಬಂದಿ ಬಹಳ ಸಂತೋಷಪಟ್ಟರು. ನಂತರ ನಿಖಿಲ್, ಕ್ಯಾಂಟಿನಲ್ಲಿ ಮುದ್ದೆ ಊಟ ಮಾಡಿದರು.

TV9kannada Web Team

| Edited By: Arun Belly

May 18, 2022 | 9:55 PM

ಬೆಂಗಳೂರು: ಜೆಡಿ(ಎಸ್) ವಕ್ತಾರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಅವರು ಬೆಂಗಳೂರಿನ ಹನುಮಂತ ನಗರದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಅಪ್ಪಾಜಿ ಕ್ಯಾಂಟೀನ (Appaji Canteen) ನಡೆಸುತ್ತಿದ್ದಾರೆ. ಇಲ್ಲೂ ಕೇವಲ 10 ರೂ. ಗಳಿಗೆ ಊಟ ಸಿಗುತ್ತದೆ. ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಅಪ್ಪಾಜಿ ಕ್ಯಾಂಟೀನ್ ಬಹಳ ಪ್ರಯೋಜನಕಾರಿಯಾಗಿದೆ. ಬುಧವಾರ ಜೆಡಿ(ಎಸ್) ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಹುಟ್ಟುಹಬ್ಬದ ಕಾರಣ ಪಕ್ಷದ ಯುವನಾಯಕ ಮತ್ತು ಹೆಚ್ ಡಿಡಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರು (Nikhil Kumaraswamy) ಕ್ಯಾಂಟೀನ್ ಆಗಮಿಸಿ ಅಲ್ಲಿಗೆ ಊಟಕ್ಕೆ ಬಂದವರಿಗೆ ಊಟ ಬಡಿಸಿದರು ಮತ್ತು ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.

ಬರ್ತ್ ಡೇ ಪ್ರಯುಕ್ತ ಕ್ಯಾಂಟೀನಲ್ಲಿ ಕೇಕ್ ಕತ್ತರಿಸಿ ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರಿಗೆ ಹಂಚಲಾಯಿತು. ಖುದ್ದು ನಿಖಿಲ್ ಅವರೇ ತಮಗೆ ಕೇಕ್ ನೀಡಿದ್ದಕ್ಕೆ ಸಿಬ್ಬಂದಿ ಬಹಳ ಸಂತೋಷಪಟ್ಟರು. ನಂತರ ನಿಖಿಲ್, ಕ್ಯಾಂಟಿನಲ್ಲಿ ಮುದ್ದೆ ಊಟ ಮಾಡಿದರು.

ದೇವೆಗೌಡರ ಹುಟ್ಟುಹಬ್ಬದ ಅಂಗವಾಗಿ ಅಪ್ಪಾಜಿ ಕ್ಯಾಂಟೀನಲ್ಲಿ ಬುಧವಾರ ಕೇವಲ 1 ರೂ. ಗೆ ಒಂದು ಊಟ ನೀಡಲಾಯಿತು. ಜನ ಊಟ ಸವಿಯುವುದರ ಜೊತೆ ನಿಖಿಲ್ ಅವರೊಂದಿಗೆ ಮಾತಾಡಿದರು. ಕೆಲ ಹಿರಿಯ ಮಹಿಳಾ ಗ್ರಾಹಕರು ಸಹ ಕುಮಾರಸ್ವಾಮಿ ಪುತ್ರನೊಂದಿಗೆ ಆಪ್ತವಾಗಿ ಮಾತಾಡಿದರು.

ಇದನ್ನೂ ಓದಿ:  ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನದಂದು ಪಂಚರತ್ನ ಕಾರ್ಯಕ್ರಮಕ್ಕೆ LED ಟಿವಿ ಅಳವಡಿಸಿದ 123 ವಾಹನ ಖರೀದಿಸಿದ ಜೆಡಿಎಸ್

Follow us on

Click on your DTH Provider to Add TV9 Kannada