ಎಲ್ಲರ ಎದುರು ಗಳಗಳನೆ ಕಣ್ಣೀರು ಹಾಕಿದ ನಟಿ ಅನು ಪ್ರಭಾಕರ್; ಜೊತೆಗೆ ನಿಂತು ಸಂತೈಸಿದ ಚಿತ್ರತಂಡ
‘ಸಾರಾ ವಜ್ರ’ ಸಿನಿಮಾದ ಪ್ರೀಮಿಯರ್ ಶೋ ಬಳಿಕ ಅನು ಪ್ರಭಾಕರ್ ಮಾತನಾಡಿದರು. ಈ ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದರು.
ನಟಿ ಅನು ಪ್ರಭಾಕರ್ (Anu Prabhakar) ಅಭಿನಯದ ‘ಸಾರಾ ವಜ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಸಾರಾ ಅಬೂಬಕ್ಕರ್ ಅವರು ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕಿ ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ಆ್ಯಕ್ಷನ್-ಕಟ್ ಹೇಳಿರುವ ‘ಸಾರಾ ವಜ್ರ’ ( Sara Vajra Movie) ಸಿನಿಮಾದಲ್ಲಿ ವಿಚ್ಛೇದನದ ಕುರಿತಾದ ಕಥೆ ಇದೆ. ರಿಯಲ್ ಲೈಫ್ನಲ್ಲಿ ಅನು ಪ್ರಭಾಕರ್ ಕೂಡ ಡಿವೋರ್ಸ್ ಪಡೆದುಕೊಂಡಿದ್ದರು. ನಂತರ ಅವರ ಬದುಕಿನಲ್ಲಿ ರಘು ಮುಖರ್ಜಿ (Raghu Mukherjee) ಆಗಮನ ಆಯಿತು. ಬುಧವಾರ (ಮೇ 18) ‘ಸಾರಾ ವಜ್ರ’ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಸಿನಿಮಾ ಮುಗಿದ ಬಳಿಕ ಮಾಧ್ಯಮಗಳ ಎದುರು ಮಾತನಾಡುವಾಗ ಅನು ಪ್ರಭಾಕರ್ ಅವರು ಸಖತ್ ಎಮೋಷನಲ್ ಆಗಿದ್ದರು. ಆಗ ಅವರ ಜೊತೆ ನಿಂತಿದ್ದ ಚಿತ್ರತಂಡದವರು ಸಂತೈಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.