ಆ ಸಿನಿಮಾ ನೋಡಿ ಪುಟ್ಟಿ ನನ್ನ ಅಳಿಸಿಬಿಟ್ಯಲ್ಲೆ ಎಂದು ರಾಜ್ಕುಮಾರ್ ಹೇಳಿದ್ದರು; ಹಳೆ ಘಟನೆ ನೆನೆದ ಅನು ಪ್ರಭಾಕರ್
1999ರಲ್ಲಿ ತೆರೆಗೆ ಬಂದ ‘ಹೃದಯ ಹೃದಯ’ ಸಿನಿಮಾವನ್ನು ಡಾ.ರಾಜ್ಕುಮಾರ್ ವೀಕ್ಷಣೆ ಮಾಡಿದ್ದರು. ಸಿನಿಮಾ ನೋಡಿ ಅವರು ಭಾವುಕರಾಗಿದ್ದರು. ಈ ಬಗ್ಗೆ ಅನು ಪ್ರಭಾಕರ್ ಮಾತನಾಡಿದ್ದಾರೆ.
1999ರಲ್ಲಿ ತೆರೆಗೆ ಬಂದ ‘ಹೃದಯ ಹೃದಯ’ ಸಿನಿಮಾದಲ್ಲಿ (Hrudaya Hrudaya Movie) ಶಿವರಾಜ್ಕುಮಾರ್, ರಮೇಶ್ ಅರವಿಂದ್, ಅನು ಪ್ರಭಾಕರ್ ನಟಿಸಿದ್ದರು. ಇದು ಲೀಡ್ ರೋಲ್ನಲ್ಲಿ ಅನು ಪ್ರಭಾಕರ್ ಅವರ ಮೊದಲ ಸಿನಿಮಾ. ಈ ಸಿನಿಮಾವನ್ನು ಡಾ.ರಾಜ್ಕುಮಾರ್ ವೀಕ್ಷಣೆ ಮಾಡಿದ್ದರು. ಸಿನಿಮಾ ನೋಡಿ ಅವರು ಭಾವುಕರಾಗಿದ್ದರು. ಈ ಬಗ್ಗೆ ಅನು ಪ್ರಭಾಕರ್ (Anu Prabhakar) ಮಾತನಾಡಿದ್ದಾರೆ. ಅವರ ಅಭಿನಯದ ‘ಸಾರಾ ವಜ್ರ’ ( Sara Vajra Movie) ಬಿಡುಗಡೆಗೆ ಸಜ್ಜಾಗಿದೆ. ಮೇ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಸಾರಾ ಅಬೂಬಕ್ಕರ್ ಅವರು ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕಿ ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾ ಕುರಿತು ಟಿವಿ9 ಕನ್ನಡದ ಜತೆ ಮಾತನಾಡುವಾಗ ‘ಹೃದಯ ಹೃದಯ’ ಸಿನಿಮಾ ಬಗ್ಗೆ ಅನು ಪ್ರಭಾಕರ್ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos