ಬೆಂಗಳೂರಿನಲ್ಲಿ ಬೇಸಿಗೆ ಮಳೆ ಜೋರಾಗಿ (Bangalore Rains) ಅಬ್ಬರಿಸುತ್ತಿದ್ದು, ರಾಜಧಾನಿ ಮಂದಿ ಹೈರಾಣಗೊಂಡಿದ್ದಾರೆ. ಸಾಕಪ್ಪಾ ಸಾಕು ಮಳೆ ಸಹವಾಸ ಎಂದು ಬೊಬ್ಬಿಡುತ್ತಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧವೂ ಸಿಟ್ಟಿಗೆದ್ದಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಳೆ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಬ್ರ್ಯಾಂಡ್ ಬೆಂಗಳೂರು ಬಗ್ಗೆ ಕಾಳಜಿ ವಹಿಸಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇದಿನ್ನೂ ಬೇಸಿಗೆ ಮಳೆಯಷ್ಟೇ. ಮುಂದಿದೆ ಮುಂಗಾರು. ಅದು ಇನ್ನೂ ಭೀಕರವಾಗಲಿದೆಯಾ? ಸರ್ಕಾರ ಈಗಿಂನಿಂದಲೇ ಎಚ್ಚೆತ್ತುಕೊಳ್ಳುವುದು ಒಳಿತು.
ಒಟ್ಟಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಬೆಂಗಳೂರಿನ ಹಲವಾರು ಕಡೆ ಮಳೆ ನೀರು ನಿಂತು ಜನ ಕಂಗಾಲಾಗಿದ್ದಾರೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಕೂಡ ಭೇಟಿ ಕೊಟ್ಟರು. ಮುಂದಿನ ದಿನಗಳಲ್ಲಿ ಬಿಬಿಎಂಪಿ, ಮಳೆಹಾನಿ ತಪ್ಪಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು? ಈ ವಿಷಯವನ್ನಿಟ್ಟುಕೊಂಡು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Also Read: ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ