ಗುರುವಾರವೂ ಮುಖ್ಯಮಂತ್ರಿ ಬೊಮ್ಮಾಯಿ ನಗರ ಪ್ರದಕ್ಷಿಣೆ ಹಾಕಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು

ಗುರುವಾರವೂ ಮುಖ್ಯಮಂತ್ರಿ ಬೊಮ್ಮಾಯಿ ನಗರ ಪ್ರದಕ್ಷಿಣೆ ಹಾಕಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 19, 2022 | 5:17 PM

ಬುಧವಾರದಂತೆ ಗುರುವಾರವೂ ಮಳೆಯಿಂದ ಪ್ರಭಾವಕ್ಕೊಳಗಾಗಿರುವ ಕೆಲ ಏರಿಯಾಗಳಿಗೆ ಅವರು ಭೇಟಿ ನೀಡಿದರು. ಬೊಮ್ಮಾಯಿ ಅವರು ತಮ್ಮ ಪಟಾಲಂನೊಂದಿಗೆ ಪ್ರಯಾಣಿಸಲು ಆರಿಸಿಕೊಂಡಿದ್ದು ಬಿ ಎಮ್ ಟಿ ಸಿಯ ಒಂದು ವೋಲ್ವೋ ಬಸ್.

Bengaluru:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಬೆಂಗಳೂರಿನ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಸೋಮವಾರದಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಆಗಿರುವ ಅನಾಹುತಗಳನ್ನು ಪರಿಶೀಲಿಸುವುದು ರೂಟೀನ್ ಆಗಿಬಿಟ್ಟಂತಿದೆ. ಬುಧವಾರದಂತೆ ಗುರುವಾರವೂ ಮಳೆಯಿಂದ ಪ್ರಭಾವಕ್ಕೊಳಗಾಗಿರುವ ಕೆಲ ಏರಿಯಾಗಳಿಗೆ ಅವರು ಭೇಟಿ ನೀಡಿದರು. ಬೊಮ್ಮಾಯಿ ಅವರು ತಮ್ಮ ಪಟಾಲಂನೊಂದಿಗೆ ಪ್ರಯಾಣಿಸಲು ಆರಿಸಿಕೊಂಡಿದ್ದು ಬಿ ಎಮ್ ಟಿ ಸಿಯ (BMTC) ಒಂದು ವೋಲ್ವೋ ಬಸ್. ಅವರ ಜೊತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ , ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕೆ ಗೋಪಾಲಯ್ಯ (K Gopalaiah), ವಿ ಸೋಮಣ್ಣ (V Somanna), ಆರ್ ಅಶೋಕ, ಮುನಿರತ್ನ ಮತ್ತು ಶಾಸಕರಾದ ಎಸ್ ಆರ್ ವಿಶ್ವನಾಥ, ಭೈರತಿ ಸುರೇಶ್, ಸಂಸದ ಪಿಸಿ ಮೋಹನ್ ಮತ್ತು ಹಲವಾರು ಆಧಿಕಾರಿಗಳಿದ್ದರು.

ಮುಖ್ಯಮಂತ್ರಿಗಳು ಬೆಂಗಳೂರು ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗಿರುವ ಕುರುಬರ ಹಳ್ಳಿ ಮತ್ತು ಲಗ್ಗೆರೆ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದರು. ಮನೆಗಳಿಗೆ ನೀರು ನುಗ್ಗಿ ಹಾನಿ ಅನುಭವಿಸಿದ ನಿವಾಸಿಗಳಿಗೆ ಬುಧವಾರ ಮುಖ್ಯಮಂತ್ರಿಗಳು ರೂ 25,000 ರೂ. ಪರಿಹಾರ ಘೋಷಿಸಿದ್ದರು. ಆದರೆ, ಗುರುವಾರ ಅವರಿಂದ ಯಾವುದೇ ಪರಿಹಾರದ ಘೋಷಣೆಯಾಗಲಿಲ್ಲ.

ನಾಗವಾರ ಜಂಕ್ಷನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನೂ ಮುಖ್ಯಮಂತ್ರಿಗಳು ವೀಕ್ಷಿಸಿದರು. ಶುಕ್ರವಾರದವರೆಗೆ ಮಳೆಯಾಗಲಿರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ನಾಳೆಯೂ ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆಗೆ ಹೊರಟರೆ ಆಶ್ಚರ್ಯಪಡಬೇಕಿಲ್ಲ.

ಇದನ್ನೂ ಓದಿ: ಬೆಂಗಳೂರು ನಗರವನ್ನು ರೀ ಸ್ಟ್ರಕ್ಚರ್ ಮಾಡಬೇಕಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ