ಬೆಂಗಳೂರು ನಗರವನ್ನು ರೀ ಸ್ಟ್ರಕ್ಚರ್ ಮಾಡಬೇಕಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ನಗರದಲ್ಲಿ ಮಳೆಯಿಂದ ತೀವ್ರ ಹಾನಿ ಹಿನ್ನೆಲೆ ಸಿಟಿ ರೌಂಡ್ಸ್ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ.

ಬೆಂಗಳೂರು ನಗರವನ್ನು ರೀ ಸ್ಟ್ರಕ್ಚರ್ ಮಾಡಬೇಕಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 19, 2022 | 3:24 PM

ಬೆಂಗಳೂರು: ನಗರದ ಎಲ್ಲಾ ಕಡೆ ವಿಸಿಟ್ ಮಾಡಿದ್ದೇನೆ. ಸ್ವಲ್ಪ ಸಮಯದಲ್ಲಿ ಬಹಳ ದೊಡ್ಡ ಪ್ರಮಾಣದ ಮಳೆ ಬಿದ್ದಿದೆ. ಅಲ್ಪ ಸಮಯದಲ್ಲಿ ಇಷ್ಟು ಮಳೆ ಬಂದಿರುವುದರಿಂದ ಬಹಳಷ್ಟು ಜನರಿಗೆ ತೊಂದರೆ ಆಗಿದೆ. ಒಂದು ಲೆಕ್ಕಾಚಾರ ಪ್ರಕಾರ ಮೇ ತಿಂಗಳಲ್ಲಿ 15 ದಿನಗಳಲ್ಲಿ ಆಗಬೇಕಾದ ಮಳೆ ನಾಲ್ಕೈದು ತಾಸಲ್ಲಿ ಆಗಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ಈ ಸಮಸ್ಯೆ ಇದೆ. ಸಿಟಿ ಗ್ರೋತ್ ಆಗುತ್ತಿದೆ. ಮಳೆ ಹಾನಿ ಪ್ರದೇಶದ ನಿವಾಸಿಗಳಿಗೆ ರೇಷನ್, ಊಟದ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಿದ್ದೇವೆ. ಬೆಂಗಳೂರು ನಗರವನ್ನು ರೀ ಸ್ಟ್ರಕ್ಚರ್ ಮಾಡಬೇಕಾಗಿದೆ. ಪ್ರವಾಹದ ಸಮಸ್ಯೆ ಬಗೆಹರಿಸಲು ಸಾಧ್ಯ ಆಗಿಲ್ಲ ಎಂದು ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕಳೆದ ಬಾರಿ ಎಲ್ಲ ನಾಯಕರ ಜೊತೆ ಸಭೆ ಮಾಡಿ ಕೆಲ ತೀರ್ಮಾನ ತೆಗೆದುಕೊಂಡಿದ್ದೆವು. ಎಲ್ಲ ಕಾಲುವೆಗಳನ್ನು ಸರಿ ಮಾಡುವುದಕ್ಕೆ 1600 ಕೋಟಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಡಿಪಿಆರ್ ಮಾಡಿ ಕೆಲಸ ಪ್ರಾರಂಭ ಮಾಡುತ್ತೇವೆ. ಎಲ್ಲೆಲ್ಲಿ ಹೂಳು ತುಂಬಿದೆ ಅದನ್ನು ನಿವಾರಣೆ ಮಾಡುವುದಕ್ಕೆ ಅನುಮತಿ ಕೊಟ್ಟಿದ್ದೇವೆ. ಡಿಸಿಲ್ಟಿಂಗ್ ಕೆಲಸ ಆಗಬೇಕಿದೆ. ಡ್ರೇನ್ ಪಕ್ಕದ ವಾರ್ಡ್ ಗಳಲ್ಲಿ ಕೆಲಸ ತಕ್ಷಣ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಎಸ್.ಟಿ.ಪಿ ಪ್ಲ್ಯಾಂಟ್ ಕೆಪ್ಯಾಸಿಟಿ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. 100 ಎಂಎಲ್ಡಿ ಜೊತೆಗೆ ಹೊಸ 60 ಎಂಎಲ್ಡಿ ಪ್ಲ್ಯಾಂಟ್ ಹಾಕಲು ಸೂಚನೆ ನೀಡಲಾಗಿದೆ. ವೃಷಭಾವತಿ ವ್ಯಾಲಿಯಲ್ಲಿ ದೊಡ್ಡ ಕಲ್ಲುಗಳಿಂದ ನೀರು ತಡೆಹಿಡಿಯುತ್ತಿದೆ. ವಾಟರ್ ಮೂವಮೆಂಟ್ ಸರಾಗ ಆಗುವುದಕ್ಕೆ ಸೂಚನೆ ನೀಡಲಾಗಿದೆ. ತುರ್ತು ಕೆಲಸಕ್ಕೆ ಹೇಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka SSLC Result 2022: ಎಸ್ಎಸ್​​ಎಲ್​ಸಿ ಫಲಿತಾಂಶ ಪ್ರಕಟ, 145 ಮಕ್ಕಳು ಔಟ್​ ಆಫ್ ಔಟ್

ಇದನ್ನೂ ಓದಿ
Image
ಭಾರಿ ಮಳೆಯಿಂದ ಹೈರಾಣಾದ ಹೊರಮಾವಿನ ಸಾಯಿ ಲೇಔಟ್ ಜನ: ಶಾಶ್ವತ ಪರಹಾರ ನೀಡುವಂತೆ ಆಗ್ರಹ
Image
ಇಂದು ಭಾರಿ ಮಳೆ ಸಾಧ್ಯತೆ; ದಕ್ಷಿಣ ಕನ್ನಡ, ಮಂಡ್ಯ, ಮೈಸೂರು ಶಾಲೆಗಳಿಗೆ ರಜೆ ಘೋಷಣೆ
Image
ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ; ಕೆಲವೆಡೆ ಮನೆಗಳು ಜಲಾವೃತ
Image
Karnataka Rain: ಬೆಂಗಳೂರಿನಲ್ಲಿ ನಿಲ್ಲದ ಮಳೆಯ ಅಬ್ಬರ; ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ

ಹೆಚ್​ಬಿಆರ್​ ಲೇಔಟ್ ನಿವಾಸಿಗಳ ಸಮಸ್ಯೆ ಆಲಿಸಿದ ಸಿಎಂ ಬೊಮ್ಮಾಯಿ ಯಾರಿಗೆ ಹೇಳಿದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಮಳೆಯಾದಾಗ ನೀರು ಮುಂದೆ ಹೋಗಲು ಜಾಗವಿಲ್ಲ. ರಾಜಕಾಲುವೆ ಕಿರಿದಾಗಿರುವುದರಿಂದ ಮಳೆ ನೀರು ಹರಿದುಹೋಗುತ್ತಿಲ್ಲ. ರೈಲ್ವೆ ಬ್ರಿಡ್ಜ್​​​ನಿಂದ ರಾಜಕಾಲುವೆ ಸಣ್ಣದಾಗಿದೆ ಎಂದು ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿದರು. ಈ ವೇಳೆ ಪಾಲಿಕೆ ಎಚ್‌ಬಿ ಆರ್ ಲೇಔಟ್ ಬಳಿ ರಾಜಾಕಾಲುವೆ ಹೂಳು ತೆಗೆಸದ ಅಧಿಕಾರಿಗಳಿಗೆ ಸಿಎಂ ಕ್ಲಾಸ್​ ತೆಗೆದುಕೊಂಡರು. ತಕ್ಷಣ ಹೂಳು ತೆಗೆಸಲು ಸಿಎಂ ಸೂಚನೆ ನೀಡಿದರು.

ಬೆಂಗಳೂರು ನಗರದಲ್ಲಿ ಮಳೆಯಿಂದ ತೀವ್ರ ಹಾನಿ ಹಿನ್ನೆಲೆ ಸಿಟಿ ರೌಂಡ್ಸ್ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ರಾಜಕಾಲುವೆ ಸಮಗ್ರ ಅಭಿವೃದ್ಧಿ, ಒತ್ತುವರಿ ತೆರವು, ಮಳೆ ಸಂತ್ರಸ್ತರಿಗೆ ಪರಿಹಾರ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಕಂದಾಯ ಸಚಿವ ಅಶೋಕ್, ಶಾಸಕ ಎಸ್.ಆರ್.ವಿಶ್ವನಾಥ್​ ಶಾಸಕ ಭೈರತಿ ಸುರೇಶ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್