AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ; ಕೆಲವೆಡೆ ಮನೆಗಳು ಜಲಾವೃತ

ನೀರು ನುಗ್ಗಿ ಸ್ಲಮ್ ಕಾಲೋನಿ ಬಹುತೇಕ ಜಲಾವೃತವಾಗಿದೆ. ಜಿಲ್ಲಾಡಳಿತ ಸದ್ಯ ಹೊಸ ಆಶ್ರಯ ಮನೆಗಳಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದೆ. ಹಾಸನದಲ್ಲಿ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ದೊಡ್ಡ ಕೆರೆ ಎರಡೂವರೆ ದಶಕದ ಬಳಿಕ ತುಂಬಿದೆ.

ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ; ಕೆಲವೆಡೆ ಮನೆಗಳು ಜಲಾವೃತ
ಮನೆಯೊಳಗೆ ನುಗ್ಗಿರುವ ನೀರು
TV9 Web
| Updated By: sandhya thejappa|

Updated on:May 19, 2022 | 8:10 AM

Share

ಮಂಡ್ಯ: ರಾಜ್ಯಾದ್ಯಂತ ಮಳೆ (Rain) ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಗೆ ಜನರು ಹೈರಾಣಾಗಿದ್ದಾರೆ. ಹಲವೆಡೆ ರೈತರು (Farmers) ಬೆಳೆದ ಬೆಳೆಗಳು ನಾಶವಾಗಿವೆ. ಇನ್ನು ಮಂಡ್ಯದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ನಿವಾಸಿಗಳು ಪರದಾಡುತ್ತಿದ್ದಾರೆ. ನೀರು ನುಗ್ಗಿ ಸ್ಲಮ್ ಕಾಲೋನಿ ಬಹುತೇಕ ಜಲಾವೃತವಾಗಿದೆ. ಜಿಲ್ಲಾಡಳಿತ ಸದ್ಯ ಹೊಸ ಆಶ್ರಯ ಮನೆಗಳಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದೆ. ಹಾಸನದಲ್ಲಿ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ದೊಡ್ಡ ಕೆರೆ ಎರಡೂವರೆ ದಶಕದ ಬಳಿಕ ತುಂಬಿದೆ. ಕೆರೆ ತುಂಬಿದ ಹಿನ್ನೆಲೆ ಮೇಕೆ, ಕುರಿ ಬಲಿಕೊಟ್ಟು ಗ್ರಾಮಸ್ಥರು ಪೂಜೆ ನೆರವೇರಿಸಿದ್ದಾರೆ.

ಕೊಡಗಿನಲ್ಲಿ ಸುರಿದ ಮಳೆಗೆ ಮರ ಜೆಸಿಬಿ ಮೇಲೆ ಉರುಳಿಬಿದ್ದಿದೆ. ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಜೆಸಿಬಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಶಿವಮೊಗ್ಗದಲ್ಲಿ ಭಾರಿ ಮಳೆ ಹಿನ್ನೆಲೆ ಹವಾಮಾನ ಇಲಾಖೆ ರೆಡ್​​ ಅಲರ್ಟ್​ ಘೋಷಣೆ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ

ಇದನ್ನೂ ಓದಿ
Image
ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ
Image
INR USD Exchange Rate Today: ಅಮೆರಿಕ ಡಾಲರ್ ವಿರುದ್ಧ ಭಾರತ ರೂಪಾಯಿ ಮೇ 18ಕ್ಕೆ ಎಷ್ಟಿದೆ?
Image
ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​
Image
Karnataka SSLC Result 2022: ಇಂದು ಮಧ್ಯಾಹ್ನ 1 ಗಂಟೆಗೆ ಎಸ್​ಎಸ್​ಎಲ್​​ಸಿ ಪರೀಕ್ಷಾ ಫಲಿತಾಂಶ ಪ್ರಕಟ

ಮೈಸೂರಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ಲಕ್ಷ್ಮಣತೀರ್ಥ ನದಿ ಮೈದುಂಬಿ ಹರಿಯುತ್ತಿದೆ. ಹೆಬ್ಬಾಳ ಗ್ರಾಮದ ಕೆರೆ ಕೋಡಿ ಬಿದ್ದು ಹರಿಯುತ್ತಿದೆ. ಹೀಗಾಗಿ ನೂರಾರು ಜನರು ಕೆರೆ ಕೋಡಿ ಬಳಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅಪಾರ ಬೆಳೆ ನಾಶವಾಗಿದೆ. ಕಾಳೇನಾಹಳ್ಳಿ, ಗುರುಪುರ, ಹೊಸ ವಾರಂಚಿ ಬಳೇನಹಳ್ಳಿ ಸೇರಿ ಹಲವು ಗ್ರಾಮದಲ್ಲಿ  ಜೋಳ, ಹೊಗೆಸೊಪ್ಪು, ಶುಂಠಿ ಹಾಗೂ ಅಡಿಕೆ ಬೆಳೆ ನಾಶವಾಗಿದೆ. ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮನೆಗೆ ನುಗ್ಗಿದೆ ಚರಂಡಿ ನೀರು: ಚಿತ್ರದುರ್ಗ ನಗರದಲ್ಲಿ ತಡರಾತ್ರಿ ನಿರಂತರ ಮಳೆಗೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಚಿತ್ರದುರ್ಗದ ಬುದ್ಧನಗರದ ಕೆಲವು ಮನೆಗಳು ಜಲಾವೃತವಾಗಿವೆ. ಮನೆಯಲ್ಲಿದ್ದ ದವಸಧಾನ್ಯ, ತರಕಾರಿ ನೀರುಪಾಲಾಗಿವೆ. ಚರಂಡಿಗಳು ‌ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿದ್ದು, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: INR USD Exchange Rate Today: ಅಮೆರಿಕ ಡಾಲರ್ ವಿರುದ್ಧ ಭಾರತ ರೂಪಾಯಿ ಮೇ 18ಕ್ಕೆ ಎಷ್ಟಿದೆ?

ಭಾರಿ ಮಳೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಡ್ಯಾಂ ಬಳಿ ಜನರು ಬರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ದಾವಣೆರೆಯಲ್ಲಿ ಬಹುತೇಕ ಕಡೆ ರಸ್ತೆಗಳ ಮೇಲೆ ನೀರು ನಿಂತಿದೆ‌. ಹೆಬ್ಬಾಳ್ ಗ್ರಾಮದ ಶಾಲಾ ಆವರಣ ಈಜುಕೊಳದಂತಾಗಿದೆ.  ಜಿಲ್ಲೆಯ ಬಹುತೇಕ ಕಡೆ ಮಳೆಗೆ ಹಾನಿಯಾಗಿದೆ. ಗದಗದಲ್ಲಿ ರಾತ್ರಿಯಿಡೀ ಜಿಟಿಜಿಟಿ ಮಳೆ ಸುರಿಯುತ್ತಿದೆ. ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಹಲವಡೆ ನಿರಂತರ ಮಳೆಯಾಗುತ್ತಿದೆ. ನಿನ್ನೆ ರಾತ್ರಿ 10 ಗಂಟೆಗೆ ಶುರುವಾದ ಮಳೆರಾಯ ಇನ್ನೂ ಬಿಡುವು ಕೊಟ್ಟಿಲ್ಲ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 am, Thu, 19 May 22