Karnataka SSLC Result 2022: ಇಂದು ಮಧ್ಯಾಹ್ನ 1 ಗಂಟೆಗೆ ಎಸ್​ಎಸ್​ಎಲ್​​ಸಿ ಪರೀಕ್ಷಾ ಫಲಿತಾಂಶ ಪ್ರಕಟ

Karnataka SSLC Result 2022: ಇಂದು ಮಧ್ಯಾಹ್ನ 1 ಗಂಟೆಗೆ ಎಸ್​ಎಸ್​ಎಲ್​​ಸಿ ಪರೀಕ್ಷಾ ಫಲಿತಾಂಶ ಪ್ರಕಟ
ಪ್ರಾತಿನಿಧಿಕ ಚಿತ್ರ

Karnataka KSEEB Class 10 Result 2022: 10 ನೇ ತರಗತಿ (SSLC) ಫಲಿತಾಂಶವನ್ನು ಪ್ರಕಟಿಸಲಿದ್ದು, ಮಧ್ಯಾಹ್ನ 1 ಗಂಟೆ ನಂತರ ಅಧಿಕೃತ ವೆಬ್‌ಸೈಟ್ ಆದ sslc.karnataka.gov.in ನಲ್ಲಿ ಲಭ್ಯವಿರಲಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 19, 2022 | 9:06 AM

ಬೆಂಗಳೂರು: 2021-2022ರ ಸಾಲಿನ ಎಸ್​ಎಸ್​ಎಲ್​ಸ್ (SSLC) ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) 10 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಲಿದ್ದು, ಮಧ್ಯಾಹ್ನ 1 ಗಂಟೆ ನಂತರ ಅಧಿಕೃತ ವೆಬ್‌ಸೈಟ್ ಆದ sslc.karnataka.gov.in ನಲ್ಲಿ ಲಭ್ಯವಿರಲಿದೆ. ಮಧ್ಯಾಹ್ನ ಶಿಕ್ಷಣ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಮೊದಲು ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿತ್ತು. ಆದರೆ ರಜೆಗಳು ಸಾಲುಸಾಲಾಗಿ ಬಂದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ತಡವಾಯಿತು. ರಾಜ್ಯದ ಸುಮಾರು 234 ಮೌಲ್ಯಮಾಪನ ಕೇಂದ್ರಗಳಲ್ಲಿ 63,796 ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ 3,446 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು.

ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್​ ಮಾರ್ಕ್ಸ್​ ಕೊಡಲು ಸರ್ಕಾರ ನಿರ್ಧರಿಸಿದೆ. ಮೂರು ವಿಷಯಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು, ಒಂದು ವೇಳೆ ಉಳಿದ ಮೂರು ವಿಷಯಗಳಲ್ಲಿ ಕಡಿಮೆ ಅಂಕ ಪಡೆದು, ಫೇಲ್ ಆಗುವ ಪರಿಸ್ಥಿತಿ ಅನುಭವಿಸುತ್ತಿದ್ದರೆ ಮಾತ್ರ ಕೃಪಾಂಕ ಸಿಗುತ್ತದೆ. ಜೂನ್ 4 ನೇ ವಾರದಲ್ಲಿ ಪೂರಕ ಪರೀಕ್ಷೆ (SSLC supplementary exams) ನಡೆಯಲಿದೆ.

ಕರ್ನಾಟಕ SSLC ಫಲಿತಾಂಶ 2022: ವೆಬ್‌ಸೈಟ್‌ಗಳು sslc.karnataka.gov.in ಮತ್ತು karresults.nic.in

ಕರ್ನಾಟಕ SSLC ಫಲಿತಾಂಶ 2022: ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡಲು ಕ್ರಮಗಳು

ಫಲಿತಾಂಶವನ್ನು ಪರಿಶೀಲಿಸಲು ಹಂತ ಹಂತದ ವಿವರಗಳು:

ಹಂತ 1 – ಕರ್ನಾಟಕ ಬೋರ್ಡ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿ: sslc.karnataka.gov.in 2022 SSLC ಫಲಿತಾಂಶ.

ಹಂತ 2 – ಇದು 2022 ರ SSLC ವೆಬ್‌ಸೈಟ್‌ನಲ್ಲಿ sslc.karnataka.gov.in ನ ಮುಖಪುಟವನ್ನು ತೆರೆಯುತ್ತದೆ.

ಹಂತ 3 – 10 ನೇ ಫಲಿತಾಂಶ ಕರ್ನಾಟಕ 2022 ವೆಬ್‌ಸೈಟ್‌ನಲ್ಲಿ, ಕರ್ನಾಟಕ SSLC ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 4 – ಇದು KSEEB SSLC ಫಲಿತಾಂಶ 2022 ಲಾಗಿನ್ ವಿಂಡೋಗೆ ಕಾರಣವಾಗುತ್ತದೆ.

ಹಂತ 5 – kseeb.kar.nic.in 2022 ಫಲಿತಾಂಶ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಹಂತ 6 – SSLC ಫಲಿತಾಂಶ 2022 ಕರ್ನಾಟಕವು ಪರದೆಯ ಮೇಲೆ ಕಾಣಿಸುತ್ತದೆ.

ಹಂತ 7 – SSLC ಫಲಿತಾಂಶ ಪರಿಶೀಲನೆಯ ನಂತರ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Most Read Stories

Click on your DTH Provider to Add TV9 Kannada