Gold Buying Tips: ಚಿನ್ನವನ್ನು ಖರೀದಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ಚಿನ್ನದ ಆಭರಣಗಳನ್ನು ಖರೀದಿಸುವ ಮುನ್ನ ನೆನಪಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿ ಇಲ್ಲಿದೆ.

Gold Buying Tips: ಚಿನ್ನವನ್ನು ಖರೀದಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 19, 2022 | 7:15 AM

ಸಾವಿರಾರು ವರ್ಷಗಳಿಂದ ಚಿನ್ನವು (Gold) ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ವಯಸ್ಸು ಯಾವುದೇ ಇರಬಹುದು, ಚಿನ್ನವನ್ನು ಸಂಗ್ರಹಿಸುತ್ತಲೇ ಇರುತ್ತಾರೆ ಎಂಬುದು ಆರೋಪ ಆಗಿದೆ. ಮತ್ತು ಈಗ ಆರ್ಥಿಕತೆಯು ಸುಧಾರಿಸುತ್ತಿದೆ ಹಾಗೂ ಹೆಚ್ಚು ಹೆಚ್ಚು ಜನರು ಸುರಕ್ಷಿತ ಹೂಡಿಕೆ ರೂಪವಾಗಿ ಚಿನ್ನವನ್ನು ಖರೀದಿಸಲು ಹಣಕಾಸು ದೃಷ್ಟಿಯಿಂದ ಸಮರ್ಥರಾಗಿದ್ದಾರೆ. ಭಾರತದಲ್ಲಿ ಚಿನ್ನದ ಬೇಡಿಕೆಯ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೆಂದರೆ, ಒಟ್ಟಾರೆ ಬೇಡಿಕೆಯ ಸುಮಾರು 2/3 ಭಾಗದಷ್ಟು ಗ್ರಾಮೀಣ ಜನರು ಚಿನ್ನ ಮತ್ತು ಸ್ವಲ್ಪ ಮಟ್ಟಿಗೆ ಬೆಳ್ಳಿಯ ಹೂಡಿಕೆ ಮೂಲಕ ಹಣದುಬ್ಬರವನ್ನು ತಡೆಯಲು ಒಲವು ತೋರುತ್ತಾರೆ.

ದೇಶದಲ್ಲಿನ ಹಳದಿ ಲೋಹದ ಬೇಡಿಕೆ ಸರಿದೂಗಿಸಲು ಭಾರತವು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ವಾಸ್ತವವಾಗಿ, ಚಿನ್ನದ ಆಮದು ದೇಶದ ಚಾಲ್ತಿ ಖಾತೆ ಕೊರತೆಯ (ಸಿಎಡಿ) ಎರಡನೇ ಅತಿದೊಡ್ಡ ಮೂಲವಾಗಿದ್ದು, ಇದು ತೈಲ ಆಮದಿನ ಹತ್ತಿರದಲ್ಲಿದೆ. ನಾವು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿದ್ದೇವೆ. ಆದರೂ ಚಿನ್ನವನ್ನು ಅಚ್ಚುಕಟ್ಟಾಗಿ ಖರೀದಿಸಲು ಇಲ್ಲಿ ಕೆಲವು ಸಲಹೆಗಳಿವೆ:

ನಿಮ್ಮ ನಗರದಲ್ಲಿನ ಚಿನ್ನದ ದರ ಪರಿಶೀಲಿಸಿ

ಇದು ತೀರಾ ಸಾಮಾನ್ಯ ಅಂಶವೇನೋ ಎಂಬಂತೆ ತೋರುತ್ತದೆ. ಆದರೆ ಎಷ್ಟೋ ಜನರು ಈ ಹಂತವನ್ನು ಬಿಟ್ಟುಬಿಡುತ್ತಾರೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ. ಪ್ರತಿ ನಗರವು ಚಿನ್ನವನ್ನು ಆಮದು ಮಾಡಿಕೊಳ್ಳುವ ಸಾರಿಗೆ ವೆಚ್ಚವನ್ನು ಹೊರತುಪಡಿಸಿ ಚಿನ್ನದ ಮೇಲೆ ತನ್ನದೇ ಆದ ಶುಲ್ಕವನ್ನು ಹೊಂದಿರುವುದರಿಂದ ವಿವಿಧ ನಗರಗಳಿಗೆ ಚಿನ್ನದ ದರಗಳು ವಿಭಿನ್ನವಾಗಿವೆ. ಈ ಸಮಯದಲ್ಲಿ ಬೆಲೆಗಳು ಎಲ್ಲಿವೆ ಎಂಬ ಮಾಹಿತಿಯನ್ನು ಪಡೆಯಲು ನೀವು ಭಾರತದ ಹೆಚ್ಚಿನ ನಗರಗಳಲ್ಲಿ ಟಿವಿ9 ಡಿಜಿಟಲ್​ ಕನ್ನಡದ ವೆಬ್​ ಪೋರ್ಟಲ್​ನಲ್ಲಿ ದೈನಂದಿನ ಅಪ್​ಡೇಟದ ಚಿನ್ನದ ದರಗಳನ್ನು ಬಳಸಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಗರಗಳಲ್ಲಿನ ಚಿನ್ನದ ದರಗಳನ್ನು ದಿನಕ್ಕೆ ಎರಡು ಬಾರಿ ಅಪ್​ಡೇಟ್​ ಮಾಡಲಾಗುತ್ತದೆ – ಒಮ್ಮೆ ಬೆಳಿಗ್ಗೆ ಮತ್ತು ಸಂಜೆ ಒಮ್ಮೆ.

ಖರೀದಿಗೆ ಹಾಲ್‌ಮಾರ್ಕ್ ಮಾಡಿದ ಚಿನ್ನವು ಆಗಿರಬೇಕು

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಥವಾ ಬಿಐಎಸ್‌ನಿಂದ ಅದರ ಶುದ್ಧತೆಗಾಗಿ ಚಿನ್ನವನ್ನು ಪ್ರಮಾಣೀಕರಿಸಲಾಗುತ್ತದೆ ಮತ್ತು ಪರಿಶೀಲಿಸಿದ ಚಿನ್ನವನ್ನು ಹಾಲ್‌ಮಾರ್ಕ್ ಮಾಡಿದ ಚಿನ್ನ ಎಂದು ಕರೆಯಲಾಗುತ್ತದೆ. BIS ತನ್ನ ಅಸೆಯಿಂಗ್ ಸೆಂಟರ್ ಒಂದರ ಮೂಲಕ ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ ಮತ್ತು ಗ್ರಾಹಕರಿಗೆ ವಂಚನೆ ಆಗದಂತೆ ಖಚಿತಪಡಿಸಿಕೊಳ್ಳಲು ಚಿನ್ನದ ಉತ್ಪನ್ನದ ಮೇಲೆ ರೀಟೇಲ್ ವರ್ತಕರ ಹೆಸರಿನೊಂದಿಗೆ ಶುದ್ಧತೆಯ ಮಟ್ಟವನ್ನು (916, 958 ಇತ್ಯಾದಿ) ನಮೂದಿಸುತ್ತದೆ. ಚಿನ್ನದ ಖರೀದಿಗೆ ಹೋಗುವಾಗ ಯಾವಾಗಲೂ ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ನೋಡಿ.

ದೇಶದಾದ್ಯಂತ ಹರಡಿರುವ ಸುಮಾರು 331 ಪರೀಕ್ಷಾ ಕೇಂದ್ರಗಳೊಂದಿಗೆ BIS ತನ್ನ ವ್ಯಾಪ್ತಿಯನ್ನು ವ್ಯಾಪಿಸಿದೆ. ಹಾಗಾಗಿ, ನಿಮ್ಮ ನೆರೆಹೊರೆಯ ಆಭರಣಕಾರರಿಂದ ಚಿನ್ನದ ಆಭರಣಗಳನ್ನು ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಚಿನ್ನದ ಮಾರಾಟಗಾರರ ಮೇಲೆ ಅಚ್ಚರಿ ತಪಾಸಣೆ ನಡೆಸಲು BIS ಅನ್ನು ಸಕ್ರಿಯಗೊಳಿಸಲಾಗಿದೆ. ಆದರೆ ಅದರ ಕೈಯಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ನೋಡಿ, BIS ಪ್ರಮಾಣೀಕೃತ ಆಭರಣಗಳಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳುವುದು ಸೂಕ್ತ.

ಹೆಚ್ಚುವರಿ ಶುಲ್ಕದ ಬಗ್ಗೆ ನಿಗಾ ಇರಲಿ

ಆಭರಣಕಾರರು ಅಂತಿಮ ಉತ್ಪನ್ನದ ಮೇಲೆ ವೇಸ್ಟೇಜ್ ಅಥವಾ ಮೇಕಿಂಗ್ ಶುಲ್ಕವನ್ನು ಹಾಕುತ್ತಾರೆ. ಕಚ್ಚಾ ಚಿನ್ನದ ಮೇಲೆ ಮಾಡಿದ ಕರಕುಶಲತೆಯ ಹೆಚ್ಚುವರಿ ಶುಲ್ಕಗಳೊಂದಿಗೆ ಚಿನ್ನದ ಆಭರಣಗಳು ಬರುವುದರಿಂದ ಇದನ್ನು ಅವರಿಂದ ನಿರೀಕ್ಷಿಸಬಹುದು. ಆದರೆ ಹೆಚ್ಚುವರಿ ಶುಲ್ಕಗಳು ವಿಪರೀತ ಹೆಚ್ಚಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು ಸರಳವಾದ ಮಾರ್ಗವೆಂದರೆ, ಪ್ರತಿ ಗ್ರಾಂ ಮೊತ್ತವನ್ನು ನೀವು ನಿಜವಾಗಿಯೂ ಆ ಒಡವೆಗಾಗಿ ಪಾವತಿಸುತ್ತಿರುವುದನ್ನು ಲೆಕ್ಕಾಚಾರ ಮಾಡುವುದು.

ಇದನ್ನೂ ಓದಿ: Gold Loan: ಈ ಬ್ಯಾಂಕ್​ಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ; ಸಾಲಕ್ಕೆ ಅಗತ್ಯ ದಾಖಲೆಗಳು ಮತ್ತಿತರ ವಿವರ ಇಲ್ಲಿದೆ

ಉದಾಹರಣೆಗೆ, ನೀವು 20 ಗ್ರಾಂನ 22 ಕ್ಯಾರೆಟ್ ಚಿನ್ನದಿಂದ ಮಾಡಿದ ನೆಕ್ಲೇಸ್ ಅನ್ನು ಖರೀದಿಸಿದ್ದೀರಿ. ಅದು ನಿಮಗೆ ರೂ. 60,000 ವೆಚ್ಚವಾಗಿದೆ. ಆದ್ದರಿಂದ ನೀವು ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ರೂ. 3,000 ಪರಿಣಾಮಕಾರಿಯಾಗಿ ಪಾವತಿಸುತ್ತಿದ್ದೀರಿ. ನಿಮ್ಮ ನಗರದಲ್ಲಿ ಚಾಲ್ತಿಯಲ್ಲಿರುವ ಚಿನ್ನದ ದರದೊಂದಿಗೆ ಈ ಅಂಕಿ- ಅಂಶವನ್ನು ಪರಿಶೀಲಿಸಿ ಮತ್ತು ಶುಲ್ಕಗಳು ತುಂಬಾ ಹೆಚ್ಚಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿ.

ಮರು ಮಾರಾಟ/ವಿನಿಮಯ ಮೌಲ್ಯವನ್ನು ಪರಿಶೀಲಿಸಿ

ಚಿನ್ನವು ಸಾಂದರ್ಭಿಕ ಖರೀದಿಗಿಂತ ಹೆಚ್ಚಿನ ಹೂಡಿಕೆಯಾಗಿದೆ. ನಿಮ್ಮ ಆಭರಣವನ್ನು ಮಾರಲು ಹೋದರೆ ನಂತರದ ದಿನದಲ್ಲಿ ಎಷ್ಟು ಸಿಗುತ್ತದೆ ಎಂಬಂತಹ ವಿಷಯಗಳನ್ನು ತಿಳಿಯುವುದು ಕಡ್ಡಾಯವಾಗಿದೆ. ಆಭರಣ ವ್ಯಾಪಾರಿಗಳು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಚಿನ್ನದ ಚಾಲ್ತಿಯಲ್ಲಿರುವ ದರದಲ್ಲಿ ಆಭರಣಗಳನ್ನು ಸ್ವೀಕರಿಸುತ್ತಾರೆ. ನೀವು ಖರೀದಿಸುವಾಗ ಪಾವತಿಸಿದ ವೇಸ್ಟೇಜ್ ಅಥವಾ ಮೇಕಿಂಗ್ ವೆಚ್ಚವನ್ನು ಕಡಿತ ಮಾಡುತ್ತಾರೆ. ಆದ್ದರಿಂದ ನಿಮ್ಮ ಆಭರಣವನ್ನು ಖರೀದಿಸಲು ಅಥವಾ ನಂತರದ ದಿನಾಂಕದಂದು ಆಭರಣವನ್ನು ವಿನಿಮಯ ಮಾಡಿಕೊಳ್ಳಲು ಮುಂಚಿತವಾಗಿಯೇ ಪರಿಶೀಲಿಸಬೇಕಾಗುತ್ತದೆ.

ಪಾರದರ್ಶಕ ಖರೀದಿ ಮಾಡಿ

ರೂ.1 ಲಕ್ಷಕ್ಕಿಂತ ಹೆಚ್ಚಿನ ಎಲ್ಲ ಖರೀದಿಗಳಿಗಾಗಿ ಪ್ಯಾನ್ ವಿವರಗಳ ಕಡ್ಡಾಯ ಅಗತ್ಯವನ್ನು ಜಾರಿಗೊಳಿಸಬಹುದು. ಈ ದಿಸೆಯಲ್ಲಿ ಸರ್ಕಾರ, ಅಧಿಕಾರಿಗಳು ಟ್ರ್ಯಾಕ್ ಮಾಡಬಹುದಾದ ಚಿನ್ನದ ಉತ್ಪನ್ನಗಳನ್ನು ಖರೀದಿಸಲು ಶೀಘ್ರದಲ್ಲೇ ಕಡ್ಡಾಯ ಮಾಡಬಹುದು. ಆರ್ಥಿಕತೆಯ ಡಿಜಿಟಲೈಸೇಷನ್ ಮತ್ತು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಕಪ್ಪು ಹಣವನ್ನು ಕಾನೂನು ಆರ್ಥಿಕತೆಯ ವ್ಯಾಪ್ತಿಗೆ ತರಬಹುದು. ಇದು ಮತ್ತೊಂದು ಪ್ರಯೋಜನವನ್ನು ಹೊಂದಿದೆ – ಖರೀದಿಯ ಪ್ರಮಾಣೀಕೃತ ಬಿಲ್‌ ಇದ್ದಲ್ಲಿ ಒಂದು ವೇಳೆ ಆ ವಸ್ತುವನ್ನು ಹಿಂತಿರುಗಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ಅನುಕೂಲ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ