Gold Loan: ಈ ಬ್ಯಾಂಕ್​ಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ; ಸಾಲಕ್ಕೆ ಅಗತ್ಯ ದಾಖಲೆಗಳು ಮತ್ತಿತರ ವಿವರ ಇಲ್ಲಿದೆ

ಯಾವ ಬ್ಯಾಂಕ್​ಗಳಲ್ಲಿಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಸಾಲ ದೊರೆಯುತ್ತದೆ ಎಂಬ ಮಾಹಿತಿ ಇಲ್ಲಿದೆ. ಚಿನ್ನದ ಸಾಲಕ್ಕೆ ಸಂಬಂಧಿಸಿದ ಇತರ ಮಾಹಿತಿಗಳು ಇಲ್ಲಿವೆ.

Gold Loan: ಈ ಬ್ಯಾಂಕ್​ಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ; ಸಾಲಕ್ಕೆ ಅಗತ್ಯ ದಾಖಲೆಗಳು ಮತ್ತಿತರ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 12, 2022 | 3:06 PM

ಚಿನ್ನದ (Gold) ಮೇಲೆ ಸಾಲ ಪಡೆಯುವುದು ಸೆಕ್ಯೂರ್ಡ್ ಲೋನ್ ಎನಿಸಿಕೊಳ್ಳುತ್ತದೆ. ಚಿನ್ನದ ಆಭರಣಗಳು ಸಮಾರಂಭಗಳ ಸಂದರ್ಭದಲ್ಲಿ ಧರಿಸುವುದಕ್ಕಷ್ಟೇ ಅಲ್ಲ, ಕಷ್ಟ ಕಾಲದಲ್ಲಿ ಅಡಮಾನ ಮಾಡಿ ಸಾಲ ಪಡೆಯುವುದಕ್ಕೂ ನೆರವಾಗುತ್ತದೆ. ಆರಂಭದಲ್ಲೇ ಹೇಳಿದಂತೆ ಸೆಕ್ಯೂರ್ಡ್​ ಲೋನ್ ಆದ್ದರಿಂದ ಕ್ರೆಡಿಟ್​ ಸ್ಕೋರ್​ ಮೇಲೆ ನಕಾರಾತ್ಮಕ ಪರಿಣಾಮ ಬೀರಲ್ಲ. ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ಪ್ರೀತಿ ಇರುವುದಕ್ಕೂ ಶೀಘ್ರವಾಗಿ ಹಾಗೂ ಕಡಿಮೆ ಬಡ್ಡಿಗೆ ಚಿನ್ನದ ಸಾಲ ಸಿಗುವುದಕ್ಕೂ ಹತ್ತಿರದ ಸಂಬಂಧ ಇದೆ. ಭಾರತದಲ್ಲಿ ಚಿನ್ನದ ಸಾಲ ಪಡೆಯುವುದು ಬಲು ಸಲೀಸು. ತಾವು ಅಷ್ಟಾಗಿ ಬಳಸದ ಚಿನ್ನದ ಆಭರಣವನ್ನು ಅಡಮಾನ ಮಾಡಿ, ತಮ್ಮ ಹಣದ ತುರ್ತನ್ನು ನೀಗಿಸಿಕೊಳ್ಳಬಹುದು. ಹಣದ ಅಗತ್ಯ ಇರುವವರು ತಮ್ಮ ದೀರ್ಘಾವಧಿಯ ಹೂಡಿಕೆಯನ್ನು ಮಾರಬೇಕು ಅಂತಿಲ್ಲ. ಜತೆಗೆ ಬಡ್ಡಿಯೂ ಕಡಿಮೆ. ಹಲವು ಬ್ಯಾಂಕ್​ಗಳು ಕೆವೈಸಿ ಪೂರ್ಣಗೊಂಡು, ದಾಖಲೆಗಳ ದೃಢೀಕರಣ ಆದ ತಕ್ಷಣ ಚಿನ್ನದ ಸಾಲ ನೀಡುತ್ತವೆ.

ಸದ್ಯಕ್ಕೆ ಚಿನ್ನದ ಮೇಲೆ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ ಇದೆ?:

ಬ್ಯಾಂಕ್​ ಆಫ್ ಮಹಾರಾಷ್ಟ್ರ- ಶೇ 7ರ ಬಡ್ಡಿ, 500ರಿಂದ 2000 ರೂಪಾಯಿ + ಜಿಎಸ್​ಟಿ ಪ್ರೊಸೆಸಿಂಗ್ ಶುಲ್ಕ

ಪಂಜಾಬ್ ನ್ಯಾಷನಲ್ ಬ್ಯಾಂಕ್ – ಶೇ 7ರ ಬಡ್ಡಿ, ಸಾಲದ ಮೊತ್ತದ ಮೇಲೆ ಶೇ 0.75ರ ಪ್ರೊಸೆಸಿಂಗ್ ಶುಲ್ಕ

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್- ಶೇ 7ರಿಂದ 7.50 ಬಡ್ಡಿ, 500ರಿಂದ 10,000 ರೂಪಾಯಿ ಗರಿಷ್ಠ ಪ್ರೊಸೆಸಿಂಗ್ ಶುಲ್ಕ

ಯೂನಿಯನ್ ಬ್ಯಾಂಕ್- ಶೇ 7.25ರಿಂದ 8.25ರ ಬಡ್ಡಿ

ಕೆನರಾ ಬ್ಯಾಂಕ್- ಶೇ 7.35 ಬಡ್ಡಿ, 500ರಿಂದ 5,000 ರೂಪಾಯಿ ಪ್ರೊಸೆಸಿಂಗ್ ಶುಲ್ಕ

ಏನಿದು ಚಿನ್ನದ ಸಾಲ?:

ಎಚ್​ಡಿಎಫ್​ಸಿ ಬ್ಯಾಂಕ್ ವೆಬ್​ಸೈಟ್​ ಪ್ರಕಾರ, ಚಿನ್ನದ ಸಾಲ ಸೆಕ್ಯೂರ್ಡ್ ಸಾಲವಾಗಿದ್ದು, ಬೇರೆ ಸಾಲ ಪಡೆಯುವ ಸಾಧ್ಯತೆ ಮೇಲೆ ಪ್ರಭಾವ ಬೀರಲ್ಲ. ಇನ್ನು ಚಿನ್ನದ ಬೆಲೆಯ ಏರಿಳಿತ ಸಹ ಸಾಲದ ಮೇಲೆ ಪರಿಣಾಮ ಬೀರಲ್ಲ. ಒಂದು ಸಲಕ್ಕೆ ಅಸಲಿನ ಜತೆಗೆ ಬಡ್ಡಿಯನ್ನು ಪಾವತಿಸಿದರೆ ಅದೇ ತೂಕದಲ್ಲಿ ಚಿನ್ನದ ಆಸ್ತಿಯನ್ನು ಪಡೆಯಬಹುದು.

ಚಿನ್ನದ ಸಾಲಕ್ಕೆ ಬೇಕಾದ ದಾಖಲಾತಿಗಳು:

ಎಚ್​ಡಿಎಫ್​ಸಿ ಬ್ಯಾಂಕ್ ಪ್ರಕಾರ, ಈ ದಾಖಲಾತಿಗಳು ಬೇಕಾಗುತ್ತವೆ. ಇದರಲ್ಲಿ ಯಾವುದಾದರೂ ಒಂದನ್ನು ಸಲ್ಲಿಕೆ ಮಾಡಬಹುದು.

– ಪಾಸ್​ಪೋರ್ಟ್​ (ಅವಧಿ ಮುಗಿದಿರಬಾರದು)

– ಚಾಲನಾ ಪರವಾನಗಿ (ಅವಧಿ ಮುಗಿದಿರಬಾರದು)

– ಮತದಾರರ ಗುರುತಿನ ಚೀಟಿ

– ಯುಐಡಿಎಐ ವಿತರಿಸಿದ ಆಧಾರ್ ಕ್ರೆಡಿಟ್​ ಕಾರ್ಡ್

– ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅಥವಾ ಫಾರ್ಮ್ 60

– ಒಂದು ಪಾಸ್​ಪೋರ್ಟ್​ ಅಳತೆಯ ಫೋಟೋ

– ಕೃಷಿಗೆ ಸಂಬಂಧಿಸಿದ ದಾಖಲಾತಿಗಳು (ಕೃಷಿ ಗ್ರಾಹಕರಾಗಿದ್ದು ಬುಲೆಟ್ ಮರುಪಾವತಿ ಸಂದರ್ಭದಲ್ಲಿ)

ಏನಿದು ಬುಲೆಟ್ ಮರುಪಾವತಿ?:

ಬುಲೆಟ್ ಮರುಪಾವತಿ ಅಡಿಯಲ್ಲಿ ಅಸಲು ಹಾಗೂ ಬಡ್ಡಿ ಎರಡನ್ನೂ ಸಾಲದ ಅವಧಿಯ ಅಂತ್ಯದಲ್ಲಿ ಪಾವತಿಸಲಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್ ವೆಬ್​ಸೈಟ್ ಪ್ರಕಾರ, ಸಾಲದ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳು ಲೆಕ್ಕ ಹಾಕಲಾಗುತ್ತದೆ. ಆದರೆ ಅದನ್ನು ಚಿನ್ನದ ಸಾಲದ ಅವಧಿಯ ಕೊನೆಯಲ್ಲಿ ಪಾವತಿಸಲಾಗುತ್ತದೆ. ಸಾಲ ಮರುಪಾವತಿಯನ್ನು ಒಂದೇ ಸಲಕ್ಕೆ ಮಾಡುವುದರಿಂದ ಬುಲೆಟ್ ರೀಪೇಮೆಂಟ್ ಪ್ಲಾನ್ ಎನ್ನಲಾಗುತ್ತದೆ.

ಚಿನ್ನದ ಸಾಲಕ್ಕೆ ಯಾವ ಆಭರಣ ಅಥವಾ ನಾಣ್ಯವನ್ನು ಅಡಮಾನ ಮಾಡಬಹುದು?:

18ರಿಂದ 22 ಕ್ಯಾರೆಟ್​ನ ಚಿನ್ನವನ್ನು ಸ್ವೀಕರಿಸಲಾಗತ್ತದೆ. ಒಂದು ವೇಳೆ 24 ಕ್ಯಾರೆಟ್​ನದಾದರೆ 50 ಗ್ರಾಮ್​ ತನಕ ಮಾತ್ರ ಸಾಲ ನೀಡಲಾಗುತ್ತದೆ. ಆದರೆ ಅದನ್ನು ಬ್ಯಾಂಕ್​ ಟಂಕಿಸಿರಬೇಕು ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ತಿಳಿಸಿದೆ.

ಚಿನ್ನದ ಸಾಲ ಮರುಪಾವತಿ ವಿಧಾನ:

ಎಸ್​ಬಿಐ ಪ್ರಕಾರ ಮೂರು ವಿಧಾನದಲ್ಲಿ ಚಿನ್ನದ ಸಾಲ ಮರುಪಾವತಿಸಬಹುದು. ಮೊದಲನೆಯದು ಇಎಂಐ ಆಧಾರಿತ ಚಿನ್ನದ ಸಾಲ. ಚಿನ್ನದ ಸಾಲ ಪಡೆದ ಮುಂದಿನ ತಿಂಗಳಿಂದಲೇ ಕಂತು ಅಂದರೆ ಇಎಂಐ ಆರಂಭವಾಗುತ್ತದೆ. ಅಸಲು ಹಾಗೂ ಬಡ್ಡಿ ಎರಡನ್ನೂ ಲೆಕ್ಕ ಹಾಕಿ, ಇಎಂಐ ನಿಗದಿ ಆಗುತ್ತದೆ. ಎರಡನೆಯದು ಲಿಕ್ವಿಡ್ ಚಿನ್ನದ ಸಾಲ. ಓವರ್​ಡ್ರಾಫ್ಟ್ ಖಾತೆ ಜತೆಗೆ ವಹಿವಾಟಿನ ವ್ಯವಸ್ಥೆ ಮತ್ತು ತಿಂಗಳ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಕೊನೆಯದು, ಬುಲೆಟ್ ರೀಪೇಮೆಂಟ್ ಚಿನ್ನದ ಸಾಲ. ಸಾಲದ ಅವಧಿ ಮುಗಿಯುವ ಮುನ್ನ ಅಥವಾ ಖಾತೆ ಮುಕ್ತಾಯ ಮಾಡುವ ಮುನ್ನ ಬಡ್ಡಿ ಸಹಿತ ಅಸಲು ಪಾವತಿಸುವ ವಿಧಾನ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold Purchase: ಗಟ್ಟಿ ಚಿನ್ನವೋ ಆಭರಣ ಚಿನ್ನವೋ ಖರೀದಿಗೆ ಯಾವುದು ಉತ್ತಮ? ಇಲ್ಲಿದೆ 10 ಪ್ರಶ್ನೆಗಳಿಗೆ ಆಭರಣ ಮಾರಾಟಗಾರರ ಉತ್ತರ

Published On - 3:06 pm, Thu, 12 May 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್